ನವದೆಹಲಿ:ಮೆಟಾ ಕಂಪೆನಿಯ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಬುಧವಾರ ಭಾರತ ಸೇರಿದಂತೆ ವಿಶ್ವದ 150ಕ್ಕೂ ಹೆಚ್ಚು ದೇಶಗಳಲ್ಲಿ ಹೊಸ ಫೀಚರ್ ವಾಟ್ಸ್‌ಆ್ಯಪ್ ಚಾನಲ್‌ಗಳನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದ್ದಾರೆ. ವಾಟ್ಸ್‌ಆ್ಯಪ್ ಚಾನಲ್‌ಗಳು ಒನ್-ವೇ ಬ್ರಾಡ್‌ಕಾಸ್ಟ್ ಸಾಧನಗಳಾಗಿವೆ. ಇದು ಜನರು ಮತ್ತು ಸಂಸ್ಥೆಗಳಿಂದ ಲೇಟೆಸ್ಟ್ ಅಪ್ಡೇಟ್ಗಳನ್ನು ಸ್ವೀಕರಿಸಲು ಖಾಸಗಿ ಮಾರ್ಗವನ್ನು ಒದಗಿಸುತ್ತವೆ. ವಾಟ್ಸ್‌ಆ್ಯಪ್ ಬಳಕೆದಾರರಿಗೆ ಇದರಿಂದ ಅನುಕೂಲವಾಗಬಹುದು.
ಮಾರ್ಕ್ ಜುಕರ್‌ಬರ್ಗ್ ಹೇಳಿಕೆಯಲ್ಲಿ, ''ನೀವು ಅನುಸರಿಸುವ ಜನರು ಮತ್ತು ಸಂಸ್ಥೆಗಳಿಂದ ಅಪ್ಡೇಟ್ಗಳನ್ನು ಸ್ವೀಕರಿಸಲು ಹೊಸ ಖಾಸಗಿ ಮಾರ್ಗವಾದ WhatsApp Channelಗಳಿಗೆ ನಿಮ್ಮೆಲ್ಲರನ್ನು ಪರಿಚಯಿಸಲು ಉತ್ಸುಕನಾಗಿದ್ದೇನೆ. ಮೆಟಾ ಸುದ್ದಿ ಮತ್ತು ಅಪ್ಡೇಟ್ಗಳನ್ನು ಹಂಚಿಕೊಳ್ಳಲು ನಾನು ಈ ಚಾನಲ್ ಪ್ರಾರಂಭಿಸುತ್ತಿದ್ದೇನೆ. ಜಗತ್ತಿನಾದ್ಯಂತ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಎದುರು ನೋಡುತ್ತಿದ್ದೇನೆ'' ಎಂದು ಹೇಳಿದ್ದಾರೆ.
ಜನರಿಗೆ ಚಾನಲ್ ಕ್ರಿಯೇಟ್ ಮಾಡಲು ಅವಕಾಶ:''ವಾಟ್ಸ್‌ಆ್ಯಪ್ ಅಪ್ಡೇಟ್ ಮಾಡುವ ಮೂಲಕ ಚಾನಲ್‌ಗಳನ್ನು ಕಾಣಬಹುದು. ಅಲ್ಲಿ ನೀವು ಸ್ಥಿತಿ ಹಾಗೂ ನೀವು ಅನುಸರಿಸುವ ಚಾನಲ್‌ಗಳನ್ನು ಗಮನಿಸುವಿರಿ. ಕೆಲವೇ ದಿನಗಳಲ್ಲಿ ಜಾಗತಿಕವಾಗಿ ವಾಟ್ಸ್‌ಆ್ಯಪ್ ಚಾನಲ್‌ಗಳು ಪ್ರಾರಂಭವಾಗಲಿವೆ. ಮುಂದಿನ ಕೆಲವು ವಾರಗಳಲ್ಲಿ ಕಂಪೆನಿಯು ಮತ್ತಷ್ಟು ಹೊಸ ಫೀಚರ್ಗಳನ್ನು ಸೇರಿಸಲಿದೆ. ಬಳಕೆದಾರರ ಪ್ರತಿಕ್ರಿಯೆಯ ಆಧಾರದ ಮೇಲೆ ಚಾನಲ್‌ಗಳನ್ನು ವಿಸ್ತರಿಸಲಾಗುತ್ತದೆ. ಮುಂದಿನ ತಿಂಗಳುಗಳಲ್ಲಿ ಯಾರು ಬೇಕಾದರೂ ಚಾನೆಲ್‌ಗಳನ್ನು ಕ್ರಿಯೇಟ್ ಮಾಡಲು ಅವಕಾಶ ಮಾಡಿಕೊಡುತ್ತೇವೆ'' ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ.
ನ್ಯೂ ಟ್ಯಾಬ್‌ನಲ್ಲಿ ಬರುತ್ತೆ ಈ ಚಾನಲ್:ಹೊಸ ಟ್ಯಾಬ್‌ನಲ್ಲಿ ಕಂಪನಿಯು ಚಾನಲ್ ಅನ್ನು ಪರಿಚಯಿಸುತ್ತದೆ. ಅಲ್ಲಿ ಬಳಕೆದಾರರು ಅವರು ಅನುಸರಿಸಿದ ಸ್ಥಿತಿ ಮತ್ತು ಚಾನಲ್‌ಗಳನ್ನು ಸುಲಭವಾಗಿ ಹುಡುಕಬಹುದು. ಈ ವಿಶೇಷ ಟ್ಯಾಬ್ ಕುಟುಂಬ, ಸ್ನೇಹಿತರು ಮತ್ತು ಸಮುದಾಯದೊಂದಿಗೆ ಚಾಟ್ ಮಾಡುವ ವೈಶಿಷ್ಟ್ಯಕ್ಕಿಂತ ಭಿನ್ನವಾಗಿದೆ.
ಜುಕರ್‌ಬರ್ಗ್ ತಮ್ಮದೇ ವಾಟ್ಸ್‌ಆ್ಯಪ್ ಚಾನಲ್ ಅನ್ನು ಸಹ ಪ್ರಾರಂಭಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡ, ಕತ್ರಿನಾ ಕೈಫ್, ದಿಲ್ಜಿತ್ ದೋಸಾಂಜ್, ಅಕ್ಷಯ್ ಕುಮಾರ್, ವಿಜಯ್ ದೇವರಕೊಂಡ, ನೇಹಾ ಕಕ್ಕರ್ ತಮ್ಮ ವಾಟ್ಸ್‌ಆ್ಯಪ್ ಚಾನಲ್‌ಗಳನ್ನು ಪ್ರಾರಂಭಿಸಲಾಗಿದೆ. ಇದಲ್ಲದೆ, ಕಂಪನಿಯು ತನ್ನದೇ ಆದ ವಾಟ್ಸ್‌ಆ್ಯಪ್ ಚಾನಲ್ ಅನ್ನು ಸಹ ಶುರುಮಾಡಿದೆ. ಅಲ್ಲಿ ವಾಟ್ಸ್‌ಆ್ಯಪ್ ತಯಾರಿಸುವ ಉತ್ಪನ್ನಗಳ ಅಪ್ಡೇಟ್ಗಳನ್ನು ನೀಡುತ್ತಿದೆ.
ವಾಟ್ಸ್‌ಆ್ಯಪ್ ಚಾನಲ್ ಭದ್ರತೆ:ಪ್ರೊಫೈಲ್ ಫೋಟೋ ಕಾಣಿಸುತ್ತದೆ. ಆದ್ರೆ, ಚಾನಲ್ ನಿರ್ವಾಹಕರ ಫೋನ್ ಸಂಖ್ಯೆಯು ಅನುಸರಿಸುವವರಿಗೆ (ಫಾಲೊವರ್ಸ್) ಕಾಣುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಫಾಲೊ ಮಾಡುತ್ತಿರುವ ಮೊಬೈಲ್ ಸಂಖ್ಯೆಯು ಚಾನಲ್ ನಿರ್ವಾಹಕರಿಗೆ ಹಾಗೂ ಇತರ ಅನುಯಾಯಿಗಳೊಂದಿಗೆ ಹಂಚಿಕೆಯಾಗುವುದಿಲ್ಲ. ವಾಟ್ಸ್‌ಆ್ಯಪ್ ಮುಂಬರುವ ವಾರಗಳಲ್ಲಿ ಜಾಗತಿಕವಾಗಿ ಚಾನಲ್‌ಗಳ ನೂತನ ವೈಶಿಷ್ಟ್ಯವನ್ನು ಪ್ರಾರಂಭಿಸುತ್ತದೆ. ಮುಂಬರುವ ತಿಂಗಳುಗಳಲ್ಲಿ ಯಾರೂ ಬೇಕಾದರೂ ಚಾನಲ್ ರಚಿಸಲು ಸಾಧ್ಯವಾಗಲಿದೆ. ಚಾನಲ್‌ಗಳೊಂದಿಗೆ ಕಂಪನಿಯು ನಾಲ್ಕು ಅಪ್ಡೇಟ್ಗಳನ್ನು ಸಹ ಪರಿಚಯಿಸಿದೆ ಎಂದು ಕಂಪನಿ ಹೇಳಿದೆ.
ಐಸಿಸಿ ವಾಟ್ಸ್‌ಆ್ಯಪ್ ಚಾನಲ್ ಆರಂಭ:''ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿರುವ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್‌ನೊಂದಿಗೆ ನಾವು ವಾಟ್ಸ್‌ಆ್ಯಪ್ ಅಪ್ಡೇಟ್ಗಳ ಜೊತೆಗೆ ನಮ್ಮ ಪಾಲುದಾರಿಕೆಯನ್ನು ಪ್ರಾರಂಭಿಸಿದ್ದೇವೆ. ಒಂದು ದಶಕದ ದೀರ್ಘಾವಧಿಯ ಕಾಯುವಿಕೆಯ ನಂತರ ಭಾರತ ಈ ಪ್ರಮುಖ ಈವೆಂಟ್ ಆಯೋಜಿಸುತ್ತಿದೆ. ಹೀಗಾಗಿ ನಾವೂ ಕೂಟವನ್ನು ಉತ್ಸಾಹದಿಂದ ಎದುರು ನೋಡುತ್ತಿದ್ದೇವೆ. ಚಾನಲ್‌ಗಳನ್ನು ರಚಿಸಿ ಬೆಂಬಲಿಸುತ್ತೇವೆ" ಎಂದು ತಿಳಿಸಿದೆ.
''ವಾಟ್ಸ್‌ಆ್ಯಪ್ ಚಾನಲ್‌ಗಳ ಬಗ್ಗೆ ನಾನು ವೈಯಕ್ತಿಕವಾಗಿ ಉತ್ಸುಕನಾಗಿದ್ದೇನೆ. ಏಕೆಂದರೆ ಈಗ ನಾನು ನನ್ನ ಜೀವನದ ಪ್ರಮುಖ ಅಪ್ಡೇಟ್ಗಳನ್ನು ಹಂಚಿಕೊಳ್ಳುವ ಸ್ಥಳವನ್ನೀಗ ಹೊಂದಿದ್ದೇನೆ. ವಾಟ್ಸ್ಆ್ಯಪ್ನಲ್ಲಿ ನಾನು ಮಾಡುವ ಎಲ್ಲಾ ವಿಷಯಗಳ ಬಗ್ಗೆ ಅಪ್ಡೇಟ್ ಮಾಡುತ್ತಲೇ ಇರುತ್ತೇನೆ" ಎಂದು ಸಂಗೀತ ನಿರ್ದೇಶಕ ದಿಲ್ಜಿತ್ ದೋಸಾಂಜ್ ಹೇಳಿದ್ದಾರೆ.
ಇದನ್ನೂ ಓದಿ:ಐಫೋನ್ 15 ಪ್ರೊ, ಪ್ರೊ ಮ್ಯಾಕ್ಸ್ ಬಿಡುಗಡೆ: 48 MP ಕ್ಯಾಮರಾ, ಯುಎಸ್‌ಬಿ-ಸಿ ಟೈಪ್ ಚಾರ್ಜರ್ ಇನ್ನೂ ಏನೆಲ್ಲಾ!