ನವದೆಹಲಿ: iOS 10 ಅಥವಾ iOS 11 ಆವೃತ್ತಿಯ ಮೇಲೆ ನಡೆಯುತ್ತಿರುವ ಐಫೋನ್ ಮಾಡೆಲ್ಗಳಲ್ಲಿ ಇನ್ನು ಮುಂದೆ ವಾಟ್ಸ್ಆ್ಯಪ್ ಕೆಲಸ ಮಾಡಲ್ಲ ಎಂದು ಈ ಹಿಂದೆಯೇ ತಿಳಿಸಲಾಗಿತ್ತು. ಈ ಬದಲಾವಣೆ ಅಕ್ಟೋಬರ್ 24 ರಿಂದ ಜಾರಿಗೆ ಬರಲಿದೆ ಎಂದು ಈಗ ಅಧಿಕೃತವಾಗಿ ಘೋಷಿಸಲಾಗಿದೆ.
ವಾಟ್ಸ್ಆ್ಯಪ್ ಬೇಕಾದರೆ ಹಳೆಯ ಐಫೋನ್ ಹೊಂದಿರುವವರು ತಮ್ಮ ಮೊಬೈಲ್ಗಳನ್ನು iOS 12 ಅಥವಾ ಅದಕ್ಕೂ ಹೆಚ್ಚಿನ ಆವೃತ್ತಿಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಂದರೆ iOS 10 ಅಥವಾ iOS 11 ಮಾಡೆಲ್ಗಳನ್ನು ಬಳಸುತ್ತಿರುವವರು ಈಗ ಅನಿವಾರ್ಯವಾಗಿ ಹೊಸ ಫೋನ್ ಖರೀದಿಸಬೇಕಾಗುತ್ತದೆ. ಈ ಹಳೆಯ ಮಾಡೆಲ್ಗಳನ್ನು ಹೊಸ iOS ಸಾಫ್ಟವೇರ್ಗೆ ಅಪ್ಡೇಟ್ ಮಾಡುವುದು ವಾಸ್ತವಿಕವಾಗಿ ಕಷ್ಟಕರ ಎಂದು ವರದಿಯೊಂದು ತಿಳಿಸಿದೆ.
ವಾಟ್ಸ್ಆ್ಯಪ್ ಅನ್ನು ಬೆಂಬಲಿಸುವ iOS ನವೀಕರಣವನ್ನು ಸ್ಥಾಪಿಸಲು ಪ್ರಾಯೋಗಿಕವಾಗಿ ಸಾಧ್ಯವಾಗದ ಕಾರಣ iPhone 5 ಮತ್ತು iPhone 5c ಬಳಕೆದಾರರು ಹಾರ್ಡ್‌ವೇರ್ ಅಪ್‌ಗ್ರೇಡ್ ಸಮಸ್ಯೆಯನ್ನು ಎದುರಿಸಲಿದ್ದಾರೆ. ಆದಾಗ್ಯೂ, iPhone 5s ಅಥವಾ ನಂತರದ ಮಾದರಿಗಳನ್ನು ಹೊಂದಿರುವ ಬಳಕೆದಾರರು iOS 12 ಗೆ ನವೀಕರಿಸಬಹುದು ಮತ್ತು ವಾಟ್ಸ್ಆ್ಯಪ್ ಬಳಕೆಯನ್ನು ಮುಂದುವರಿಸಬಹುದು.