ನವದೆಹಲಿ: ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಬಳಕೆದಾರರ ಸ್ನೇಹಿಯಾಗಿ ಮತ್ತಷ್ಟು ಹತ್ತಿರವಾಗುವ ಪ್ರಯತ್ನದಲ್ಲಿ ವಾಟ್ಸ್ಆ್ಯಪ್ ಸದಾ ಮುಂಚೂಣಿ. ಆಗಿಂದಾಗ್ಗೆ ಹೊಸ ಹೊಸ ವೈಶಿಷ್ಟ್ಯ ಪರಿಚಯಿಸುವ ವಾಟ್ಸ್ಆ್ಯಪ್ ಇದೀಗ ಮತ್ತೊಂದು ಹೊಸತನ ಪರಿಚಯಿಸಲು ಮುಂದಾಗಿದೆ. ಆ್ಯಂಡ್ರಾಯ್ಡ್ ಅಪ್ಲಿಕೇಷನ್ಗಾಗಿ ಹೊಸ ಪರಿಷ್ಕೃತ ಇಂಟರ್ಫೆಸ್ ಅನ್ನು ಪರಿಚಯಿಸಲು ಮುಂದಾಗಿದೆ. ಸದ್ಯ ಇದನ್ನು ಸೀಮಿತ ಸಂಖ್ಯೆಯ ಬೆಟಾ ಟೆಸ್ಟರ್ಗೆ ಒಳಪಡಿಸಲಾಗುತ್ತಿದ್ದು, ಭವಿಷ್ಯದಲ್ಲಿ ಇದು ಎಲ್ಲರಿಗೆ ಲಭ್ಯವಾಗಲಿದೆ.
ಹೊಸ ಅನುಭವದ ಪರಿಚಯ: ಈ ಕುರಿತು ತಿಳಿಸಿರುವ ವಾಬೆಟಾಇನ್ಫೋ, ಅಪ್ಡೇಟೆಡ್ ಇಂಟರ್ಫೇಸ್ ಫೀಚರ್ನ ಹೊಸ ಐಕಾನ್ನಿಂದ ಬಳಕೆದಾರರು ದೃಶ್ಯ ಆಕರ್ಷಣೆ ಸುಧಾರಿಸುವ ಆಧುನಿಕ ಅನುಭವ ಪಡೆಯಬಹುದಾಗಿದೆ. ಕಂಪನಿ ಇದಕ್ಕಾಗಿ ಹೊಸ ಥೀಮ್ ಬಣ್ಣವನ್ನು ಹೊಸ ಹಸಿರು ಬಣ್ಣದಲ್ಲಿ ಲೈಟ್ ಮತ್ತು ಡಾರ್ಕ್ ಮೋಡ್ನಲ್ಲಿ ಬಳಕೆ ಮಾಡುತ್ತಿದೆ. ಇದರ ಜೊತೆಗೆ ಹೊಸ ತಾಜಾ ಬಣ್ಣಗಳು ಚಾಟ್ ಬಬಲ್ಸ್ ಮತ್ತು ಫ್ಲೋಟಿಂಗ್ ಆ್ಯಕ್ಷನ್ ಬಟನ್ನಲ್ಲಿ ಪರಿಚಯಿಸಲಿದೆ.
ಹೊಸದಾಗಿ ಮರು ವಿನ್ಯಾಸ ಮಾಡಿದ ಇಂಟರ್ಫೇಸ್ ಮೂಲಕ ವಾಟ್ಸ್ಆ್ಯಪ್ ಬಳಕೆದಾರರಿಗೆ ಆಧುನಿಕ ಮತ್ತು ಕಲಾತ್ಮಕ ಅನುಭವ ನೀಡಲಿದೆ ಎಂದು ವರದಿ ತಿಳಿಸಿದೆ. ವಾಟ್ಸ್ಆ್ಯಪ್ ನಿಧಾನವಾಗಿ ಇಂಟರ್ಫೇಸ್ನಲ್ಲಿ ಈ ಸಣ್ಣ ಬದಲಾವಣೆ ತರಲಿದೆ. ಹೊಸ ಐಕಾನ್ ಅನ್ನು ಹೊಸ ಬಣ್ಣದ ಯೋಜನೆಯಲ್ಲಿ ಅಳವಡಿಕೆ ಮಾಡದೇ ಇದನ್ನು ಬಿಡುಗಡೆ ಮಾಡುವುದಿಲ್ಲ.