ಕರ್ನಾಟಕ

karnataka

ETV Bharat / science-and-technology

ಐಒಎಸ್​ ಬೀಟಾ ಬಳಕೆದಾರರಿಗೆ ಹೊಸ ಅಪ್​ಡೇಟ್​ ನೀಡಿದ ವಾಟ್ಸ್​ಆ್ಯಪ್​​; ಏನದು? - ಬೀಟಾ ಟೆಸ್ಟರ್​ಗಳಿಗಾಗಿ ಹೊಸ

ಬಳಕೆದಾರರ ಸ್ನೇಹಿಯಾಗುವ ಉದ್ದೇಶದಿಂದ ಜೊತೆಗೆ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ವಾಟ್ಸ್​ಆ್ಯಪ್​ ಸದಾ ಹೊಸ ಅಪ್​ಡೇಟ್​ಗಳನ್ನು ನೀಡುತ್ತಿದೆ.

whatsapp-gives-new-update-to-ios-beta-users-what-is
whatsapp-gives-new-update-to-ios-beta-users-what-is

By

Published : Jun 3, 2023, 11:49 AM IST

ಸ್ಯಾನ್​ಫ್ರಾನ್ಸಿಸ್ಕೊ( ಅಮೆರಿಕ): ಮೆಟಾ ಒಡೆತನದ ಮೆಸೇಜಿಂಗ್​ ಫ್ಲಾಟ್​ಫಾರ್ಮ್​ ವಾಟ್ಸ್​​ಆ್ಯಪ್​ ​ಮತ್ತೊಂದು ಹೊಸ ವೈಶಿಷ್ಟ್ಯವನ್ನು ಜಾರಿಗೆ ತರಲು ಸಜ್ಜಾಗಿದೆ. ವಾಟ್ಸ್​ಆ್ಯಪ್​ ಐಒಎಸ್​ನಲ್ಲಿ ಕೆಲವು ಬೀಟಾ ಟೆಸ್ಟರ್​ಗಳಿಗಾಗಿ ಹೊಸ ಅಪ್​ಡೇಟ್ಸ್​ ನೀಡಲು ಮುಂದಾಗಿದ್ದು, ಮೊದಲ ಆವೃತ್ತಿ ಹೊರ ತರುತ್ತಿದೆ. ಡಬ್ಲ್ಯೂಎಟಿ ಇನ್ಫೋ ವರದಿ ಅನುಸಾರ ಪ್ಲಾಟ್‌ಫಾರ್ಮ್‌ನಲ್ಲಿನ ಟ್ಯಾಬ್​ಗಳಾಗಿ ಇದನ್ನು ಮಾರ್ಪಡಿಸಲಾಗಿದೆ. ಈಗ ಅದಕ್ಕೆ ಮತ್ತಷ್ಟು ಅಪ್​ಡೇಟ್​ಗಳನ್ನು ನೀಡಲಾಗಿದೆ. ಪ್ರಸ್ತುತ ಈ ಅಪ್​ಡೇಟ್​ಗಳು ಚಾನಲ್​ನಲ್ಲಿ ಲಭ್ಯವಿಲ್ಲ. ಕಾರಣ ಇವು ಇನ್ನು ಅಭಿವೃದ್ಧಿ ಹಂತದಲ್ಲಿದೆ.

ಟ್ಯಾಬ್​ ಅಡಿ ಹೊಸ ಅಪ್​ಡೇಟ್​ಗಳ ವಾಟ್ಸ್​ಆ್ಯಪ್​ ಬೀಟಾದ ಇತ್ತೀಚಿನ ಆವೃತ್ತಿಯು ಮೊದಲ ಆವೃತ್ತಿಯೊಂದಿಗೆ ಹೊಸ ಅಪ್​ಡೇಟ್​ಗಳು 'ಮ್ಯೂಟ್​ ಸ್ಟೇಟಸ್​' ಅಪ್​ಡೇಟ್​ಗಳೊಂದಿಗೆ ಪ್ರತ್ಯೇಕವಾಗಿ ಲಭ್ಯವಿದೆ. ಹೆಚ್ಚುವರಿಯಾಗಿ, ಗೌಪ್ಯತೆ ಸೆಟ್ಟಿಂಗ್‌ಗಳನ್ನು ತೆರೆಯಲು ಶಾರ್ಟ್‌ಕಟ್ ಅನ್ನು ಸಹ ಅದೇ ಮೆನುವಿಗೆ ಸರಿಸಲಾಗಿದೆ. ಇದರ ಅಪ್​ಡೇಟ್​​ಗೆ ಮತ್ತೊಂದು ಶಾರ್ಟ್‌ಕಟ್ ಸಹ ಇರುತ್ತದೆ. ಇದು ಬಳಕೆದಾರರು ಪರದೆಯ ಮೇಲ್ಭಾಗದಲ್ಲಿರುವ ಪ್ಲಸ್ ಐಕಾನ್ ಅನ್ನು ಟ್ಯಾಪ್ ಮಾಡಿದಾಗ ತೋರಿಸುವ ಮೆನುವಿನಲ್ಲಿ ಇದನ್ನು ಸಂಯೋಜಿಸಲಾಗಿದೆ

ವರದಿ ತಿಳಿಸುವಂತೆ ಮೊದಲ ಆವೃತ್ತಿಯ ಅಪ್​ಡೇಟ್​ ಟ್ಯಾಬ್​, ಬಳಕೆದಾರರು ಈ ಟ್ಯಾಬ್‌ನ ಆರಂಭಿಕ ಬದಲಾವಣೆಗಳಿಗೆ ಬಳಸಿಕೊಳ್ಳಬೇಕೆಂದು ವಾಟ್ಸ್​ಆ್ಯಪ್​ ಬಳಕೆ ಮಾಡಬೇಕು ಎಂದು ವರದಿ ಹೇಳಿದೆ. ಟೆಸ್ಟ್ ಫ್ಲೈಟ್ ಅಪ್ಲಿಕೇಶನ್‌ನಿಂದ ಐಒಎಸ್​​ಗಾಗಿ ವಾಟ್ಸ್​ಆ್ಯಪ್​ ​​ ಬೀಟಾದ ಇತ್ತೀಚಿನ ಆವೃತ್ತಿಯನ್ನು ಸ್ಥಾಪಿಸಿದ ನಂತರ ಹೊಸ ನವೀಕರಣಗಳ ಟ್ಯಾಬ್‌ನ ಮೊದಲ ಆವೃತ್ತಿಯು ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ

ಐಫೋನ್​ ಬಳಕೆದಾರರಿಗೆ: ಇನ್ನು ಈ ವಾರದ ಆರಂಭದಲ್ಲಿ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಐಫೋನ್ ಬಳಕೆದಾರರಿಗಾಗಿ 'ಕಂಪ್ಯಾನಿಯನ್ ಮೋಡ್' ವೈಶಿಷ್ಟ್ಯವನ್ನು ಹೊರತರಲು ಪ್ರಾರಂಭಿಸಿತು. ಅದು ಅಸ್ತಿತ್ವದಲ್ಲಿರುವ ಖಾತೆಯನ್ನು ಮತ್ತೊಂದು ಐಒಎಸ್​​ ಸಾಧನದೊಂದಿಗೆ ಲಿಂಕ್ ಮಾಡಲು ಅನುಮತಿಸುತ್ತದೆ. ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಏಕಕಾಲದಲ್ಲಿ ನಾಲ್ಕು ಸಾಧನಗಳನ್ನು ಲಿಂಕ್ ಮಾಡಬಹುದು. ಅಂದರೆ, ಬಳಕೆದಾರರು ತಮ್ಮ ವಾಟ್ಸ್​ಆ್ಯಪ್​ ಖಾತೆಗೆ ಎರಡಕ್ಕಿಂತ ಹೆಚ್ಚಿನ ಮೊಬೈಲ್​ ಫೋನ್​ಗಳನ್ನು ಲಿಂಕ್​ ಮಾಡಬಹುದು. ಐಫೋನ್ ಬಳಕೆದಾರರಿಗಾಗಿ ವಾಟ್ಸ್​ಆ್ಯಪ್​ ಕಂಪನಿಯ ಮೋಡ್ ವೈಶಿಷ್ಟ್ಯವನ್ನು ವಾಟ್ಸ್​ಆ್ಯಪ್​ ಬೀಟಾ ಆವೃತ್ತಿ ಮೂಲಕ ಮೆಸೇಜಿಂಗ್ ಪ್ಲಾಟ್‌ಫಾರ್ಮ್​ ಬಳಕೆ ಮಾಡಬಹುದು.

ಈ ವೈಶಿಷ್ಟ್ಯವನ್ನು ಪರಿಚಯಿಸುವ ಮೂಲಕ, ವಾಟ್ಸ್​ಆ್ಯಪ್​ ಚಾನಲ್‌ಗಳ ಪ್ರವೇಶವನ್ನು ಮತ್ತಷ್ಟು ಸುಧಾರಿಸುವ ಗುರಿಯನ್ನು ಹೊಂದಿದೆ. ಬಳಕೆದಾರರು ಬಯಸಿದ ನವೀಕರಣಗಳನ್ನು ಪಡೆಯುವುದನ್ನು ಸುಲಭಗೊಳಿಸುತ್ತದೆ.

ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಇತ್ತೀಚೆಗೆ 'ಚಾಟ್ ಲಾಕ್' ಎಂಬ ಹೊಸ ವಾಟ್ಸ್​ ಆ್ಯಪ್ ವೈಶಿಷ್ಟ್ಯವನ್ನು ಘೋಷಿಸಿದರು. ಬಳಕೆದಾರರ ಅತ್ಯಂತ ಗೌಪ್ಯ ಸಂಭಾಷಣೆಗಳನ್ನು ಇನ್ನಷ್ಟು ಸುರಕ್ಷಿತವಾಗಿಡಲು ಈ ವೈಶಿಷ್ಟ್ಯ ಪರಿಚಯಿಸಲಾಗಿದೆ. ಈ ವೈಶಿಷ್ಟ್ಯದ ಮೂಲಕ ನೀವು ನಿಮ್ಮ ಅತ್ಯಂತ ಗೌಪ್ಯ ಸಂಭಾಷಣೆಗಳನ್ನು ಪಾಸ್‌ವರ್ಡ್‌ ಹಾಕಿ ರಕ್ಷಿಸಬಹುದು. ಮತ್ತು ಅವುಗಳನ್ನು ಪ್ರತ್ಯೇಕ ಫೋಲ್ಡರ್‌ನಲ್ಲಿ ಸುರಕ್ಷಿತವಾಗಿಡಬಹುದು. ಇದರ ಜೊತೆ ತನ್ನ ಸಂದೇಶ ಕಳುಹಿಸುವಿಕೆಯ ಅನುಭವವನ್ನು ನಿರಂತರವಾಗಿ ಸುಧಾರಿಸುವ ಪ್ರಯತ್ನದಿಂದ, ಇತ್ತೀಚಿಗೆ ವಾಟ್ಸ್​​ಆ್ಯಪ್​​ ​, ಸಂಪಾದಿಸುವ ಸಂದೇಶ ಬಟನ್ ಆಯ್ಕೆಯನ್ನು ಪ್ರಾರಂಭಿಸಿದೆ.

ಇದನ್ನೂ ಓದಿ:ಏಪ್ರಿಲ್​ನಲ್ಲಿ 74 ಲಕ್ಷ ಅಕೌಂಟ್​ಗಳನ್ನು ಬ್ಯಾನ್ ಮಾಡಿದ ವಾಟ್ಸ್‌ಆ್ಯಪ್

ABOUT THE AUTHOR

...view details