ವಾಶಿಂಗ್ಟನ್ (ಅಮೆರಿಕ): ವಾಟ್ಸ್ ಆ್ಯಪ್ ಬಳಕೆದಾರರು ತಮ್ಮ ವಾಟ್ಸ್ ಆ್ಯಪ್ ಖಾತೆಯನ್ನು ಮತ್ತೊಂದು ಸೆಕೆಂಡರಿ ಫೋನ್ ಹಾಗೂ ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ಗೆ ಲಿಂಕ್ ಮಾಡುವ ಸೌಲಭ್ಯವನ್ನು ನೀಡಲಿದೆ. ಸದ್ಯಕ್ಕೆ ಈ ಫೀಚರ್ ಬೀಟಾ ಯೂಸರ್ಸ್ಗೆ ಮಾತ್ರ ಲಭ್ಯವಿದೆ. ಮಾಧ್ಯಮ ವರದಿಯ ಪ್ರಕಾರ ಹೊಸ ವಾಟ್ಸ್ ಆ್ಯಪ್ ಬೀಟಾ ಆ್ಯಂಡ್ರಾಯ್ಡ್ ವರ್ಷನ್ 2.22.24.18 ನಲ್ಲಿ ಕಂಪ್ಯಾನಿಯನ್ ಮೋಡ್ ಇರಲಿದ್ದು, ಇದರ ಮೂಲಕ ಬಳಕೆದಾರರು ತಮ್ಮ ಪ್ರೈಮರಿ ಅಕೌಂಟಿಗೆ ಸೆಕೆಂಡರಿ ಫೋನ್ ಅನ್ನು ಕನೆಕ್ಟ್ ಮಾಡಬಹುದಾಗಿದೆ.
ವಾಟ್ಸ್ ಆ್ಯಪ್ ಬಳಕೆದಾರರು ತಮ್ಮ ಪ್ರಾಥಮಿಕ ಖಾತೆಗೆ ನಾಲ್ಕು ಆ್ಯಂಡ್ರಾಯ್ಡ್ ಫೋನ್‌ಗಳನ್ನು ಲಿಂಕ್ ಮಾಡಲು ಸಾಧ್ಯವಾಗಲಿದೆ ಮತ್ತು ಹೀಗೆ ಲಿಂಕ್ ಮಾಡಲಾದ ಎಲ್ಲ ಫೋನ್‌ಗಳಲ್ಲಿ ಎಲ್ಲ ಸಾಮಾನ್ಯ ಆ್ಯಂಡ್ರಾಯ್ಡ್ ಫೀಚರ್ಗಳನ್ನು ಪಡೆಯಬಹುದು ಮತ್ತು ಎಲ್ಲ ಮೆಸೇಜ್ ಎನ್ಕ್ರಿಪ್ಷನ್ ಆಗಿರುತ್ತವೆ. ಹೊಸ ಫೀಚರ್ನ ಬೀಟಾ ಬಳಕೆದಾರರು ರಜಿಸ್ಟ್ರೇಶನ್ ಸ್ಕ್ರೀನ್ ಮೇಲಿರುವ ಆಯ್ಕೆಗಳ ಮೆನುಗೆ ಹೋಗಿ ಮತ್ತು ಡ್ರಾಪ್‌ಡೌನ್ ಮೆನುವಿನಿಂದ 'Link a device' ಅನ್ನು ಆಯ್ಕೆ ಮಾಡುವ ಮೂಲಕ ಕಂಪ್ಯಾನಿಯನ್ ಮೋಡ್ ಅನ್ನು ಸಕ್ರಿಯಗೊಳಿಸಬಹುದು ಎಂದು ವರದಿ ತಿಳಿಸಿದೆ.