ನವದೆಹಲಿ:ಕಳೆದ ವರ್ಷದಲ್ಲಿ(2021) ಕೆಟ್ಟ ನಿರ್ವಹಣೆ, ನಿಯಮಗಳನ್ನು ಮೀರಿ ಅಸ್ತಿತ್ವದಲ್ಲಿದ್ದ 18.58 ಲಕ್ಷ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಮೆಟಾ ಒಡೆತನದ ವಾಟ್ಸ್ಆ್ಯಪ್ ತಿಳಿಸಿದೆ.
2021 ರಿಂದ 2022 ರ ಜನವರಿ ತಿಂಗಳವರೆಗೆ ಪ್ರಕಟವಾದ ವರದಿಯ ಅನುಸಾರ, ವಾಟ್ಸ್ಆ್ಯಪ್ ಕಂಪನಿಗೆ ಈವರೆಗೂ 495 ದೂರುಗಳು ಬಂದಿವೆ. ಇವುಗಳ ಪ್ರಕಾರ ಮತ್ತು 2021 ಹೊಸ ಐಟಿ ಕಾಯ್ದೆಯ ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಾಟ್ಸ್ಆ್ಯಪ್ ವಕ್ತಾರರು ತಿಳಿಸಿದ್ದಾರೆ.
ಇನ್ನು ಜನವರಿಯಲ್ಲೇ 1.8 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ. ಇದು ನಿಂದನೆ, ಅಪಪ್ರಚಾರ ಆರೋಪದ ಮೇಲೆ ನಿಷೇಧ ಹೇರಿದ ಖಾತೆಗಳಾಗಿವೆ. ನಿಂದನೆ ಮತ್ತು ಅಪಪ್ರಚಾರವನ್ನು ತಡೆಯುವಲ್ಲಿ ಕಂಪನಿ ಶ್ರಮಿಸುತ್ತದೆ ಎಂದು ಅದು ತಿಳಿಸಿದೆ. ಮೆಟಾಗೆ ಬಂದ ದೂರುಗಳ ಆಧಾರದ ಮೇಲೆ ಜನವರಿಯಲ್ಲಿ ಫೇಸ್ಬುಕ್ನ 11.6 ಮಿಲಿಯನ್ ಖಾತೆ, ಇನ್ಸ್ಟಾಗ್ರಾಮ್ನ 3.2 ಮಿಲಿಯನ್ ಖಾತೆಗಳನ್ನು ತಡೆಹಿಡಿದಿತ್ತು.
ಓದಿ:ಜಗತ್ತಿನ ಅತ್ಯುತ್ತಮ ಹ್ಯಾಕರ್‌ಗಳನ್ನು ಹೊಂದಿದ್ದರೂ ಉಕ್ರೇನ್ ಮೇಲೆ ಸೈಬರ್ ದಾಳಿ ಮಾಡದ ರಷ್ಯಾ..!