ಬೆಂಗಳೂರು :ಅಕ್ಟೋಬರ್ ತಿಂಗಳಲ್ಲಿ ವಾಟ್ಸ್ಆ್ಯಪ್ ಭಾರತದಲ್ಲಿ 75 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ರದ್ದುಗೊಳಿಸಿದೆ. ಬಳಕೆದಾರರ ಕುಂದುಕೊರತೆಗಳು, ಭಾರತೀಯ ಕಾನೂನುಗಳು ಅಥವಾ ವಾಟ್ಸ್ಆ್ಯಪ್ನ ಸೇವಾ ನಿಯಮಗಳ ಉಲ್ಲಂಘನೆಗೆ ಪ್ರತಿಕ್ರಿಯೆಯಾಗಿ ಕೈಗೊಂಡ ಕ್ರಮದ ಮಾಸಿಕ ಮಾಸಿಕ ವರದಿಯಲ್ಲಿ ವಾಟ್ಸ್ ಆ್ಯಪ್ ಈ ವಿಷಯ ತಿಳಿಸಿದೆ. ವರದಿಯ ಪ್ರಕಾರ ಖಾತೆಗಳನ್ನು ದುರುಪಯೋಗಪಡಿಸಿಕೊಂಡ ಕಾರಣದಿಂದ ಅಕ್ಟೋಬರ್ 1, 2023 ರಿಂದ ಅಕ್ಟೋಬರ್ 31, 2023ರ ಅವಧಿಯಲ್ಲಿ ವಾಟ್ಸ್ಆ್ಯಪ್ ಭಾರತದಲ್ಲಿ ಒಟ್ಟು 75,48,000 ಖಾತೆಗಳನ್ನು ನಿಷೇಧಿಸಿದೆ.
ಮೆಟಾದ ತ್ವರಿತ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸ್ಆ್ಯಪ್ ವರದಿಯು ನಿರ್ದಿಷ್ಟ ಖಾತೆಗಳ ದುರುಪಯೋಗವನ್ನು ತಡೆಗಟ್ಟುವಿಕೆಯ ಬಗ್ಗೆ ಮಾಹಿತಿ ನೀಡಿದೆ. ವರದಿಯ ಅವಧಿಯಲ್ಲಿ ವಾಟ್ಸ್ಆ್ಯಪ್ಗೆ ಒಟ್ಟು 9,063 ದೂರುಗಳು ಬಂದಿವೆ ಎಂದು ವರದಿಯಾಗಿದೆ. ಹೆಚ್ಚಿನ ದೂರುಗಳು ಖಾತೆ ನಿಷೇಧ ತೆರವುಗೊಳಿಸುವುದಕ್ಕೆ (4,771) ಗೆ ಸಂಬಂಧಿಸಿವೆ. ಅಕೌಂಟ್ ಸಪೋರ್ಟ್, ಇತರ ಸಪೋರ್ಟ್, ಪ್ರಾಡಕ್ಟ್ ಸಪೋರ್ಟ್ ಮತ್ತು ಸುರಕ್ಷತೆ ಮುಂತಾದ ವಿಷಯಗಳ ಬಗ್ಗೆಯೂ ದೂರುಗಳು ಬಂದಿವೆ. ಒಟ್ಟು ದೂರುಗಳನ್ನು ಆಧರಿಸಿ 12 ಖಾತೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು, ದೂರಿನ ಸ್ವರೂಪದ ಆಧಾರದ ಮೇಲೆ ಇವನ್ನು ನಿಷೇಧಿಸಲಾಗಿದೆ ಅಥವಾ ಖಾತೆ ಪುನಃಸ್ಥಾಪನೆ ಮಾಡಲಾಗಿದೆ.
ಹೆಚ್ಚುವರಿಯಾಗಿ, ಕುಂದುಕೊರತೆ ಮೇಲ್ಮನವಿ ಸಮಿತಿಯಿಂದ (ಜಿಎಸಿ) ಸ್ವೀಕರಿಸಿದ ಆದೇಶಗಳ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ ಅವಧಿಯಲ್ಲಿ ಐದು ಆದೇಶಗಳು ತನಗೆ ಬಂದಿವೆ ಎಂದು ವಾಟ್ಸ್ಆ್ಯಪ್ ಹೇಳಿದೆ. ಸೆಪ್ಟೆಂಬರ್ 1, 2023 ರಿಂದ ಸೆಪ್ಟೆಂಬರ್ 30, 2023 ರವರೆಗೆ ಒಟ್ಟು 7,111,000 ವಾಟ್ಸ್ ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿತ್ತು.