ನವದೆಹಲಿ:ಐಟಿ ನಿಯಮ 2021 ಅಡಿ ವಾಟ್ಸ್ಆ್ಯಪ್ 23 ಲಕ್ಷ ನಕಲಿ ಖಾತೆಯನ್ನು ಭಾರತದಲ್ಲಿ ರದ್ದು ಮಾಡಿದೆ ಎಂದು ತಿಳಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ಹಾಕಲು ಮಾರ್ಪಡಿಸಲಾಗಿದೆ. ಅಕ್ಟೋಬರ್ 1ರಿಂದ ಅಕ್ಟೋಬರ್ 31ರೊಳಗೆ 23,24,00 ವಾಟ್ಸ್ಆ್ಯಪ್ ಖಾತೆ ಬ್ಯಾನ್ ಮಾಡಲಾಗಿದೆ. ಇದರಲ್ಲಿ 8,11,00 ಖಾತೆಗಳು ಸಕ್ರಿಯವಾಗಿ ರದ್ದುಗೊಳಿಸಲಾಗಿದೆ.
ದೇಶದಲ್ಲಿ 400 ಮಿಲಿಯನ್ ಬಳಕೆದಾರರು ವಾಟ್ಸ್ಆ್ಯಪ್ ಬಳಕೆ ಮಾಡುತ್ತಿದ್ದು, 701 ದೂರುಗಳನ್ನು ನಾವು ಪಡೆದಿದ್ದೇವೆ. 34ಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ವಕ್ತಾರ ತಿಳಿಸಿದ್ದಾರೆ. ಹೊಸ ಮಾಸಿಕ ವರದಿ ಅನುಸಾರ 2.3 ಮಿಲಿಯನ್ ಖಾತೆಯನ್ನು ವಾಟ್ಸ್ಆ್ಯಪ್ ಬ್ಯಾನ್ ಮಾಡಿದೆ.