ಹೈದರಾಬಾದ್:ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ಆ್ಯಪ್ ದೇಶದಲ್ಲಿ ನವೆಂಬರ್ ತಿಂಗಳೊಂದರಲ್ಲೇ 71 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಈ ಪೈಕಿ 19.52 ಲಕ್ಷ ಬಳಕೆಯಾಗದ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ.
ಸಾಮಾಜಿಕ ಮಾಧ್ಯಮಗಳ ನಿಯಮ ಉಲ್ಲಂಘನೆ, ವೈಯಕ್ತಿಕ ತೋಜೋವಧೆಯಂತಹ ಆರೋಪಗಳ ಆಧಾರದ ಮೇಲೆ ಹೊಸ ಐಟಿ ನಿಯಮಗಳು- 2021 ಪ್ರಕಾರ ಕ್ರಮ ಜರುಗಿಸಲಾಗಿದೆ. ಒಂದೇ ತಿಂಗಳಲ್ಲಿ ಇಷ್ಟು ಪ್ರಮಾಣದ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಕಂಪನಿ ಹೇಳಿದೆ.
ತನ್ನ ಮಾಸಿಕ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಾಮಾಜಿಕ ಮಾಧ್ಯಮ ಕಂಪನಿ, ನವೆಂಬರ್ 1 ರಿಂದ 30 ರ ನಡುವೆ 71,96,000 ಖಾತೆಗಳನ್ನು ದೂರಿನ ಆಧಾರದ ಮೇಲೆ ನಿಷೇಧಿಸಿದ್ದರೆ, ಈ ಪೈಕಿ ಸುಮಾರು 19,54,000 ಖಾತೆಗಳು ಬಳಕೆಯಾಗದೇ ಉಳಿದ ಖಾತೆಗಳಿಗೆ ನಿರ್ಬಂಧ ಹೇರಲಾಗಿದೆ. ಭಾರತದಲ್ಲಿ 500 ಮಿಲಿಯನ್ ವಾಟ್ಸ್ಆ್ಯಪ್ ಬಳಕೆದಾರರು ಇದ್ದಾರೆ. ಇದರಲ್ಲಿ 8841 ಖಾತೆಗಳ ಮೇಲೆ ದೂರುಗಳು ಬಂದಿವೆ ಎಂದು ಅದು ಮಾಹಿತಿ ನೀಡಿದೆ.
ಕಂಪನಿ ಬಿಡುಗಡೆ ಮಾಡಿದ ಅಕೌಂಟ್ಸ್ ಆಕ್ಷನ್ಡ್ ವರದಿಯಲ್ಲಿ ತಿಳಿಸಿದಂತೆ, ಸರ್ಕಾರ ಮತ್ತು ಬಳಕೆದಾರರು ನೀಡಿದ ದೂರಿನ ಮೇರೆಗೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಖಾತೆಯನ್ನು ನಿಷೇಧಿಸುವ, ನಿಷೇಧಿತ ಖಾತೆಯನ್ನು ಮರುಸ್ಥಾಪಿಸುವ ಬಗ್ಗೆ ಕ್ರಮ ವಹಿಸಲಾಗಿದೆ.