ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಹೊಸ ಫೀಚರ್ ಬಿಡುಗಡೆ ಮಾಡಿದೆ. ಇದು ಗ್ರೂಪ್ ಅಡ್ಮಿನ್‌ಗೆ ಎಲ್ಲರೂ ಕಳುಹಿಸುವ ಮೆಸೇಜ್ ಡಿಲೀಟ್ ಮಾಡುವ ಆಯ್ಕೆಯಾಗಿದೆ. ಕೆಲವು ದಿನಗಳ ಹಿಂದೆ ಗೂಗಲ್ ಪೇ ಬಿಟಾ ಪ್ರೋಗ್ರಾಂ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿತ್ತು.
ವರದಿಗಳ ಪ್ರಕಾರ, ನೀವು ಗ್ರೂಪ್ ಅಡ್ಮಿನ್ ಆಗಿದ್ರೆ, ಅಲ್ಲಿಗೆ ಬರುವ ಪ್ರತಿಯೊಂದು ಸಂದೇಶವನ್ನು ಅಳಿಸಲು ಎಲ್ಲರಿಗೂ ಇದನ್ನು ಅಳಿಸಬಹುದೇ (Delete for everyone) ಎಂಬ ಆಯ್ಕೆ ಬರುತ್ತದೆ. ಅಂದರೆ, ಗ್ರೂಪ್ ಅಡ್ಮಿನ್ ಎಲ್ಲರೂ ಕಳಿಸುವ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ ಹೊಂದಿದ್ದಾರೆ ಎಂದರ್ಥ. ಇದರ ಜೊತೆಗೆ, ಗ್ರೂಪ್‌ನ ಪ್ರತಿಯೊಬ್ಬ ಸದಸ್ಯನೂ ನೀವು ಮೆಸೇಜ್ ಅಳಿಸಿರುವುದನ್ನು ನೋಡಬಹುದಾಗಿದೆ.