ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಯ ಪ್ರಕರಗಳು ದೇಶಾದ್ಯಂತ ಹೆಚ್ಚಾಗುತ್ತಿವೆ. ಈ ಹಿಂದೆ ನಕಲಿ ಸಹಿ ಮಾಡಿ ಬ್ಯಾಂಕ್ನಿಂದ ವಂಚಕರು ಹಣ ಎಗರಿಸುತ್ತಿದ್ದಾರೆ. ಈಗ, ಸುಧಾರಿತ ತಂತ್ರಜ್ಞಾನದ ಯುಗದಲ್ಲಿ ವಂಚಕರೂ ಬುದ್ಧಿವಂತರಾಗಿದ್ದಾರೆ. ಅವರು ನಮ್ಮ ಗುರುತಿನ ಪರಿಶೀಲನೆ(ಐಡೆಂಟಿಟಿ ವೆರಿಫಿಕೇಷನ್) ಅಥವಾ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದ್ದಾರೆ ಮತ್ತು ನಮ್ಮ ಬ್ಯಾಂಕ್ ಖಾತೆಗಳಿಂದ ಕ್ಷಣಾರ್ಧದಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ. ಜೊತೆ ನಮಗೇ ತಿಳಿಯದಂತೆ ನಮ್ಮ ಹೆಸರಲ್ಲಿ ಸಾಲವನ್ನೂ ಪಡೆದುಕೊಳ್ಳುತ್ತಿದ್ದಾರೆ.
ಅನ್ಯ ವ್ಯಕ್ತಿಗಳೊಂದಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ:ಆದ್ದರಿಂದ, ನಾವು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಬೇಕು. ನಿಮ್ಮ ಪ್ಯಾನ್, ಆಧಾರ್, ಬ್ಯಾಂಕ್ ಖಾತೆ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ಯಾವುದೇ ಸಂದರ್ಭದಲ್ಲೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ಫೋನ್ನಲ್ಲಿ, ವಿಶೇಷವಾಗಿ ಆನ್ ಲೈಲ್ನಲ್ಲಿ ನಿಮ್ಮನ್ನು ಸಂಪರ್ಕಿಸುವ ಯಾರನ್ನೂ ನಂಬಬೇಡಿ. ಗುರುತು (ವೈಯಕ್ತಿಕ ಮಾಹಿತಿ) ಕಳವು ನಿಮ್ಮನ್ನು ಆರ್ಥಿಕವಾಗಿ ಮೋಸಗೊಳಿಸಲು ಕಳ್ಳರಿಗೆ ಆಯುಧವಾಗುತ್ತದೆ ಎಂದು ಅರಿತುಕೊಳ್ಳಿ.
ನೀವು ಎಷ್ಟು ಸಾಲಗಳು ಮತ್ತು ಕಾರ್ಡ್‌ಗಳನ್ನು ಹೊಂದಿರುವಿರಿ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಲು ಬಯಸಿದರೆ, ಕ್ರೆಡಿಟ್ ವರದಿಗಳು ನಿಮಗೆ ಸಹಾಯ ಮಾಡುತ್ತವೆ. ನಮ್ಮ ದೇಶದಲ್ಲಿ ಮುಖ್ಯವಾಗಿ ಮೂರು ಕ್ರೆಡಿಟ್ ಬ್ಯೂರೋಗಳಿವೆ. ಅವುಗಳೆಂದರೆ ಸಿಬಿಲ್, ಎಕ್ಸ್‌ಪೀರಿಯನ್ ಮತ್ತು ಇಕ್ವಿಫ್ಯಾಕ್ಸ್. ಪ್ರತಿ ಕ್ರೆಡಿಟ್ ಬ್ಯೂರೋದಲ್ಲಿ ವರ್ಷಕ್ಕೊಮ್ಮೆ ನಿಮ್ಮ ಕ್ರೆಡಿಟ್ ವರದಿಗಳನ್ನು ಪಡೆಯಬಹುದು. ನೀವು ಯಾವುದೇ ಅನಧಿಕೃತ ಖಾತೆಗಳನ್ನು ಪತ್ತೆ ಹಚ್ಚಿದರೆ, ತಕ್ಷಣವೇ ಆ ಬಗ್ಗೆ ಕ್ರೆಡಿಟ್ ಬ್ಯೂರೋಗಳಿಗೆ ದೂರು ನೀಡಿ. ಈ ಮೂಲಕ ನಿಮ್ಮ ಅನಧಿಕೃತ ಖಾತೆಗಳನ್ನು ರದ್ದುಪಡಿಸಿಕೊಳ್ಳಬಹುದು.
ಆಗಾಗ್ಗೆ ಕ್ರೆಡಿಟ್ ವರದಿಯನ್ನು ಪರಿಶೀಲಿಸಿ:ಎಲ್ಲ ಮೂರು ಕ್ರೆಡಿಟ್ ಬ್ಯೂರೋಗಳಲ್ಲಿ ವಂಚನೆಯ ಎಚ್ಚರಿಕೆಯನ್ನು ನೀಡಬಹುದು. ನಿಮ್ಮ ಹೆಸರಿನಲ್ಲಿ ಯಾವುದೇ ಲೋನ್ ಅಪ್ಲಿಕೇಶನ್ ಬಂದರೆ ಅಥವಾ ಕೆಲವರು ನಿಮ್ಮ ಗುರುತಿನ ವಿವರಗಳನ್ನು ಬಳಸಿಕೊಂಡು ಖಾತೆಯನ್ನು ತೆರೆಯಲು ಪ್ರಯತ್ನಿಸಿದರೆ ಆಗ ನಿಮಗೆ ಸಂದೇಶ ರವಾನೆಯಾಗುತ್ತದೆ. ಇದು ವಂಚನೆಯಿಂದ ರಕ್ಷಣೆ ನೀಡುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸುವ ಸೈಬರ್ ಅಪರಾಧಿಗಳು ತಕ್ಷಣ ನಿಮ್ಮ ಮಾಹಿತಿಯನ್ನು ಬಳಸುವುದಿಲ್ಲ. ಅವರು ತಿಂಗಳುಗಳ ಕಾಲ ಕಾಯುತ್ತಾರೆ. ಅದರ ನಂತರವೇ, ಅವರು ನಿಮ್ಮನ್ನು ವಂಚಿಸುತ್ತಾರೆ. ಹಾಗಾಗೀ ಕಾಲಕಾಲಕ್ಕೆ ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸುವುದು ಅತ್ಯಗತ್ಯ.
ಪ್ರಸ್ತುತ ದಿನಗಳಲ್ಲಿ ಆನ್‌ಲೈನ್ ಮತ್ತು ಸಾಮಾಜಿಕ ವೇದಿಕೆಗಳ ಮೂಲಕ ಪ್ಯಾನ್ ಮತ್ತು ಆಧಾರ್ ಮಾಹಿತಿಯನ್ನು ಕಳುಹಿಸುವುದು ತುಂಬಾ ಸಾಮಾನ್ಯವಾಗಿದೆ. ಇದನ್ನು ಮೊದಲು ನಿಲ್ಲಿಸಬೇಕು. ತೀರಾ ತುರ್ತು ಸಂದರ್ಭದಲ್ಲಿ, ಈ ವಿವರಗಳನ್ನು ತಿಳಿದಿರುವ ವ್ಯಕ್ತಿಗಳಿಗೆ ಮಾತ್ರ ಕಳುಹಿಸಬೇಕು. ಆನ್‌ಲೈನ್ ಬ್ಯಾಂಕ್ ಖಾತೆಗಳಿಗೆ ಸಂಖ್ಯೆಗಳು ಮತ್ತು ಚಿಹ್ನೆಗಳೊಂದಿಗೆ ಬಲವಾದ ಪಾಸ್‌ವರ್ಡ್‌ಗಳನ್ನು ಇಡಬೇಕು.
ಮಾಹಿತಿ ಕಳುವಾದರೆ ದೂರು ದಾಖಲಿಸಿ:ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ನಿಮ್ಮ ವೈಯಕ್ತಿಕ ಮಾಹಿತಿ ಕಳ್ಳರ ಕೈಗೆ ಸಿಕ್ಕರೆ, ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಎಫ್ಐಆರ್ ದಾಖಲಿಸಿ. ಮೂರು ಪ್ರಮುಖ ಕ್ರೆಡಿಟ್ ಬ್ಯೂರೋಗಳನ್ನು ಸಂಪರ್ಕಿಸುವ ಮೂಲಕ ಕ್ರೆಡಿಟ್ ಫ್ರೀಜ್ ಮಾಡಬಹುದು. ಇದು ನಿಮ್ಮ ಅನುಮತಿಯಿಲ್ಲದೇ ನಿಮ್ಮ ಕ್ರೆಡಿಟ್ ವರದಿಯನ್ನು ವೀಕ್ಷಿಸುವುದನ್ನು ತಡೆಯುತ್ತದೆ. ಇದು ಕಳ್ಳರು ನಿಮ್ಮ ಹೆಸರಿನಲ್ಲಿ ಖಾತೆ ತೆರೆಯುವುದನ್ನು ತಡೆಯುತ್ತದೆ. ಗುರುತಿನ ಕಳ್ಳತನದ ಬಗ್ಗೆ ನೀವು ಖಾತೆ ಹೊಂದಿರುವ ಬ್ಯಾಂಕಿಗೆ ಸಂರ್ಪಕಿಸಿ ಮಾಹಿತಿ ನೀಡಿ.
ಇದನ್ನೂ ಓದಿ:AI ನಿಂದ ಉದ್ಯೋಗ ನಷ್ಟ ಸಾಧ್ಯತೆ: ಆದರೂ ಅನುಕೂಲಗಳೇ ಹೆಚ್ಚು!