ವಾಷಿಂಗ್ಟನ್: ಬ್ರಹ್ಮಾಂಡ ಆರಂಭಿಕ ಹಂತದಲ್ಲಿದ್ದಾಗ ಸುಮಾರು 700 ಗೆಲಾಕ್ಸಿಗಳಿದ್ದವು ಎಂಬ ಅಂಶವನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಪತ್ತೆ ಹಚ್ಚಿದೆ. ಈ ವಿಚಾರ ಈ ಮೊದಲು ತಿಳಿದಿರಲಿಲ್ಲ ಎಂಬ ಅಂಶ ಗಮನಾರ್ಹವಾಗಿದೆ.
ಬಿಗ್ ಬ್ಯಾಂಗ್ ನಂತರ ಲಕ್ಷಾಂತರ ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದ ಗೆಲಾಕ್ಸಿಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ. ಇದು ರಿಯೊನೈಸೇಶನ್ ಯುಗ ಎಂದು ಕರೆಯಲ್ಪಡುವ ಕಾಲಘಟ್ಟದ ನಿರ್ಣಾಯಕ ಸಮಯವಾಗಿತ್ತು. ಮಹಾಸ್ಫೋಟದ ನಂತರ ನೂರಾರು ಮಿಲಿಯನ್ ವರ್ಷಗಳವರೆಗೆ, ಬ್ರಹ್ಮಾಂಡವು ಅನಿಲ ಮತ್ತು ಮಂಜಿನಿಂದ ತುಂಬಿತ್ತು. ಅದು ಶಕ್ತಿಯುತ ಬೆಳಕಿಗೆ ಅಪಾರದರ್ಶಕವಾಗಿತ್ತು. ಬಿಗ್ ಬ್ಯಾಂಗ್ ನಂತರ ಹಾಗೂ ಆ ಬಳಿಕದ ಒಂದು ಶತಕೋಟಿ ವರ್ಷಗಳ ಕಾಲಾನಂತರ ಮಂಜು ತೆರವುಗೊಂಡಿದ್ದರಿಂದ ಬ್ರಹ್ಮಾಂಡವು ಪಾರದರ್ಶಕವಾಯಿತು ಎನ್ನಲಾಗಿದೆ. ಹೀಗೆ ನಿರಂತರವಾಗಿ ನಡೆದ ಈ ಪ್ರಕ್ರಿಯೆಯನ್ನು ರಿಯೋನೈಸೇಶನ್ ಎಂದು ಕರೆಯಲಾಗುತ್ತದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
ಟಕ್ಸನ್‌ನಲ್ಲಿರುವ ಅರಿಜೋನಾ ವಿಶ್ವವಿದ್ಯಾನಿಲಯದ ಕೆವಿನ್ ಹೈನ್‌ಲೈನ್ ಮತ್ತು ಅವರ ತಂಡವು ವೆಬ್‌ನ NIRCam (ಸಮೀಪ-ಇನ್‌ಫ್ರಾರೆಡ್ ಕ್ಯಾಮೆರಾ) ಉಪಕರಣವನ್ನು ಬಳಸಿ 370 ಮಿಲಿಯನ್ ಮತ್ತು 650 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದ್ದ 700 ಕ್ಕೂ ಹೆಚ್ಚು ಗೆಲಾಕ್ಸಿಗಳನ್ನು ಗುರುತಿಸುವಲ್ಲಿ ಸಫಲರಾಗಿದ್ದಾರೆ.
ಇಷ್ಟೊಂದು ಗೆಲಾಕ್ಸಿಗಳನ್ನು ವೆಬ್ ಉಡಾವಣೆಯ ಮೊದಲೇ ಗುರುತಿಸಲಾಗಿತ್ತು. ವೆಬ್ ಉಡಾವಣೆಯಾದ ಬಳಿಕ ಸೊಗಸಾದ ರೆಸಲ್ಯೂಶನ್ ಮತ್ತು ಸೂಕ್ಷ್ಮತೆಯನ್ನು ಗುರುತಿಸುವ ಪರಿಕರಗಳ ಮೂಲಕ ದೂರದ ಗೆಲಾಕ್ಸಿಗಳ ಉತ್ತಮ ನೋಟವನ್ನು ಪಡೆಯಲು ವೆಬ್‌ನ ಎನ್ಐಆರ್ ಕ್ಯಾಮ್ ಸಹಾಯ ಮಾಡಿತು ಎಂದು ಬಾಹ್ಯಾಕಾಶ ವಿಜ್ಞಾನಿಗಳು ಹೇಳಿದ್ದಾರೆ.