ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಇದೀಗ ಗೂಗಲ್ ಮ್ಯಾಪ್ಸ್ ಟು ವೇರ್ ಒಎಸ್ ಸ್ಮಾರ್ಟ್ ವಾಚ್ನಲ್ಲಿ ಹೊಚ್ಚ ಹೊಸ ವೈಶಿಷ್ಟ್ಯ ಪರಿಚಯಿಸಿದ್ದು, ಇದರಲ್ಲಿ ಪೋನ್ಲೆಸ್ ನ್ಯಾವಿಗೇಷನ್ ಸಪೋರ್ಟ್ ಎಂಬ ಹೊಸ ಫೀಚರ್ ಅಳವಡಿಸಲಾಗಿದೆ. ಸ್ಯಾಮ್ ಮೊಬೈಲ್ ವರದಿಯ ಪ್ರಕಾರ ಮೊದಲೆಲ್ಲಾ ಸ್ಮಾರ್ಟ್ವಾಚ್ ಧರಿಸಿಕೊಂಡು ಗೂಗಲ್ ನಕ್ಷೆಯನ್ನು ಬಳಸುವವರು ಮೊಬೈಲ್ ಮತ್ತು ವಾಚ್ ಅನ್ನು ಎರಡನ್ನು ಸಂಪರ್ಕಿಸಬೇಕಾಗಿತ್ತು.
ಹೊಸ ಫೀಚರ್ಸ್ನಲ್ಲಿ ಏನೇನಿದೆ?;ಆದರೆ, ಈ ಒಂದು ಹೊಸ ವೈಶಿಷ್ಟ್ಯದಲ್ಲಿ ಓಎಸ್ (ಆಪರೇಟಿಂಗ್ ಸಿಸ್ಟಮ್) ಚಾಲಿತ ಸ್ಮಾರ್ಟ್ವಾಚ್ ಧರಿಸುವವರು ಗೂಗಲ್ ನಕ್ಷೆಯನ್ನು ಬಳಸುವಾಗ ಟರ್ನ್ ಬೈ ಟರ್ನ್ ನ್ಯಾವಿಗೇಷನ್ಗಾಗಿ ಮೊಬೈಲ್ನ ಅಗತ್ಯವಿರುವುದಿಲ್ಲ. ಸ್ಮಾರ್ಟ್ವಾಚ್ನ ಅತನಿರ್ಮಿತ LTE( ದೀರ್ಘಾವಧಿಯ ವಿಕಸನ) ಸಂಪರ್ಕವನ್ನು ಹೊಂದಿದೆ. ಈ ಹೊಸ ವೈಶಿಷ್ಟ್ಯವನ್ನು ಬಳಕೆದಾರರು ಬಳಸಲು, ಬಳಕೆದಾರರು ಮೊದಲು ತಮ್ಮ ವಾಚ್ನಲ್ಲಿರುವ LTE ಸಕ್ರಿಯನಗೊಳಿಸಿ ವೇರ್ ಓಎಸ್ ಸ್ಮಾರ್ಟ್ ವಾಚ್ನಲ್ಲಿ ಗೂಗಲ್ ನಕ್ಷೆಯನ್ನು ತೆರದು ನಂತರ ಸೆಟ್ಟಿಂಗ್ಗಳಿಗೆ ಹೋಗಿ ಲಾಂಚ್ ಮೋಡ್ ಆಯ್ಕೆ ಮಾಡಬೇಕು. ವರದಿಯ ಪ್ರಕಾರ ಲಾಂಚ್ ಮೋಡ್ ಎಂಬುದು ಸ್ಮಾರ್ಟ್ವಾಚ್ನ ಹೊಸ ಮೆನುವಾಗಿದ್ದು, ಸ್ವಯಂ - ಉಡಾವಣೆ ಮತ್ತು ಸೇವಾ ನಿಯಮಗಳ ನಡುವೆ Google Maps Wear OS ಅಪ್ಲಿಕೇಶನ್ಗೆ ಸೇರಿಸಲಾಗಿದೆ.
ಹೆಚ್ಚುವರಿಯಾಗಿ, ಲಾಂಚ್ ಮೋಡ್ ಮೆನುವಿನಲ್ಲಿ ನ್ಯಾವಿಗೇಶನ್ ಪ್ರಾರಂಭಿಸಲಾಗುವುದು ಎಂಬ ಹೆಡರ್ ಅಡಿ ಬಳಕೆದಾರರು ಎರಡು ಆಯ್ಕೆಗಳನ್ನು ಸ್ಕ್ರೀನ್ನಲ್ಲಿ ಕಾಣಬಹುದು ಮತ್ತು ಅವರು ವಾಚ್ನಲ್ಲಿನ ಅಪ್ಲಿಕೇಶನ್ನಿಂದ ನ್ಯಾವಿಗೇಷನ್ ಪ್ರಾರಂಭಿಸಲು ವಾಚ್ ಓನ್ಲಿ ಆಯ್ಕೆ ಮಾಡಿ ಕೊಳ್ಳಬೇಕಾಗುತ್ತದೆ. ಈ ಆಯ್ಕೆಗಳು Bluetooth(ಬ್ಲೂಟೂತ್) Wi-Fi ಸಾಧನಗಳು ಮತ್ತು ಕೇವಲ LTE ಸಾಧನಗಳಲ್ಲಿ ಮಾತ್ರ ಲಭ್ಯವಿರುತ್ತವೆ. ಇದು ಸರ್ವರ್ ಸೈಡ್ ರೋಲ್ ಔಟ್ ಆಗಿರುವುದರಿಂದ ಬಳಕೆದಾರರು ಅಪ್ಲಿಕೇಶನ್ ಅಥವಾ ಅವರ ವಾಚ್ ಅನ್ನು ನವೀಕರಿಸುವ ಅಗತ್ಯವಿಲ್ಲ ಎಂದು ವರದಿ ಹೇಳುತ್ತದೆ.