ಅಡಿಲೇಡ್ (ಆಸ್ಟ್ರೇಲಿಯಾ): ನಮಗೆ ಕಿರಿಕಿರಿ ಉಂಟು ಮಾಡುವ ಸಂಬಂಧಿಕರೊಂದಿಗೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂದು ನಾವು ಸುಲಭವಾಗಿ ಹೇಳುತ್ತೇವೆ. ಕೆಲವೊಮ್ಮೆ ನಾವು ಈ ಕೆಲ ಜನರೊಂದಿಗೆ ಭೂಮಿಯ ಮೇಲೆ ಹೇಗೆ ಸಂಬಂಧಿಸಿದ್ದೇವೆ ಎಂದೂ ಆಶ್ಚರ್ಯ ಪಡುತ್ತವೆ. ಅದಾಗ್ಯೂ, ವಿಕಸನೀಯ ಪರಿಭಾಷೆಯಲ್ಲಿ ನಾವು ಸಾಕಷ್ಟು ವರ್ಷಗಳ ಹಿಂದಕ್ಕೆ ಹೋದರೆ ನಾವೆಲ್ಲರೂ ಕೂಡ ಪೂರ್ವಜರನ್ನು ಹಂಚಿಕೊಳ್ಳುತ್ತೇವೆ. ಇದರರ್ಥ ನಮ್ಮ ದೇಹದಲ್ಲಿನ ಅನೇಕ ವೈಶಿಷ್ಟ್ಯಗಳು ನಮ್ಮ ಕುಟುಂಬ ವೃಕ್ಷದಲ್ಲಿ ಸಾವಿರಾರು ಅಥವಾ ಲಕ್ಷಾಂತರ ವರ್ಷಗಳ ಹಿಂದೆಯೇ ವಿಸ್ತರಿಸಿಕೊಂಡಿವೆ.
ಜೀವಶಾಸ್ತ್ರದಲ್ಲಿ ಹೋಮಾಲಜಿ ಎಂಬ ಪದವು ಪೂರ್ವಜರ ಮೂಲದ ಆಧಾರದ ಮೇಲೆ ದೇಹ ಸಂರಚನೆಯ ಹೋಲಿಕೆಗೆ ಸಂಬಂಧಿಸಿದೆ. ಇದನ್ನು ತಿಳಿಯಬೇಕಾದರೆ ಮಾನವನ ಕೈ, ಬಾವಲಿ ರೆಕ್ಕೆ ಮತ್ತು ತಿಮಿಂಗಿಲ ಫ್ಲಿಪ್ಪರ್‌ನ ಸಾಮ್ಯತೆಗಳ ಬಗ್ಗೆ ಒಮ್ಮೆ ಯೋಚಿಸಿ. ಇವೆಲ್ಲವೂ ವಿಶೇಷ ಕಾರ್ಯಗಳನ್ನು ಹೊಂದಿವೆ. ಆದರೆ, ಮೂಳೆಗಳ ಆಧಾರವಾಗಿರುವ ದೇಹದ ಯೋಜನೆ ಒಂದೇ ಆಗಿರುತ್ತದೆ. ಇದು ಕೀಟಗಳು ಮತ್ತು ಪಕ್ಷಿಗಳಲ್ಲಿನ ರೆಕ್ಕೆಗಳಂತಹ ರಚನೆಗಳಿಂದ ಭಿನ್ನವಾಗಿದೆ. ಅವು ಒಂದೇ ರೀತಿಯ ಕಾರ್ಯವನ್ನು ನಿರ್ವಹಿಸುತ್ತಿದ್ದರೂ ಡ್ರಾಗನ್ ಫ್ಲೈನ ರೆಕ್ಕೆಗಳು ಮತ್ತು ಗಿಳಿಯ ರೆಕ್ಕೆಗಳು ಸ್ವತಂತ್ರವಾಗಿ ಹುಟ್ಟಿಕೊಂಡಿವೆ. ಹಾಗೆ ಇವು ವಿಕಸನೀಯ ಮೂಲವನ್ನು ಹಂಚಿಕೊಳ್ಳುವುದಿಲ್ಲ. ಇಂದು ಮಾನವರಲ್ಲಿ ಕಂಡುಬರುವ ಪುರಾತನ ಗುಣಲಕ್ಷಣಗಳ ಐದು ಉದಾಹರಣೆಗಳು ಹೀಗಿವೆ..
ಒಂದು ಹೆಜ್ಜೆ: ನಮ್ಮನ್ನು ಮನುಷ್ಯರನ್ನಾಗಿ ಮಾಡುವುದು ಯಾವುದು ಎಂಬ ಪ್ರಶ್ನೆ ಶತಮಾನಗಳಿಂದಲೂ ವಿಜ್ಞಾನಿಗಳು ಹಾಗೂ ವಿದ್ವಾಂಸರನ್ನು ಕಾಡುತ್ತಿದೆ. ಇಂದು ಮನುಷ್ಯ ಯಾರು ಮತ್ತು ಯಾರು ಅಲ್ಲ ಎಂದು ಹೇಳುವುದು ತುಲನಾತ್ಮಕವಾಗಿ ಸರಳವಾಗಿದೆ ಎಂದು ತೋರುತ್ತದೆ. ಆದರೆ, ಪಳೆಯುಳಿಕೆ ದಾಖಲೆಯ ಮೂಲಕ ನೋಡಿದಾಗ, ವಿಷಯಗಳು ಬಹಳ ಬೇಗನೆ ಸ್ಪಷ್ಟವಾಗುತ್ತವೆ.
ಮಾನವನ ರಚನೆಯು ಮೂರು ಲಕ್ಷ ವರ್ಷಗಳ ಹಿಂದಿನ ನಮ್ಮ ಸ್ವಂತ ಜಾತಿಗಳಾದ ಹೋಮೋ ಸೇಪಿಯನ್ಸ್‌ನ ಮೂಲದಿಂದ ಪ್ರಾರಂಭವಾಗುತ್ತದೆಯೇ?, ಅಥವಾ ನಾವು ಪೂರ್ವ ಆಫ್ರಿಕಾದ ಲೂಸಿ (ಆಸ್ಟ್ರಲೋಪಿಥೆಕಸ್ ಅಫರೆನ್ಸಿಸ್) ನಂತಹ ಪೂರ್ವಜರ ಮೂವತ್ತು ಲಕ್ಷ ವರ್ಷಗಳ ಹಿಂದಕ್ಕೆ ವಿಸ್ತರಿಸಬೇಕೇ?, ಅಥವಾ ಮಂಗನಿಂದ ಮಾನವ ಎಂಬ ಪರಿಕಲ್ಪನೆಗೆ ಸಂಬಂಧಿಸಿರುವುದೇ?. ಹೀಗೆ ಮೂರು ರೀತಿಯ ತರ್ಕಗಳು ಕಾಡುತ್ತಿವೆ. ಆದರೆ, ಮಾನವನ ಜನ್ಮವನ್ನು ಗುರುತಿಸಲು ನೀವು ಇದರಲ್ಲಿ ಯಾವುದೇ ಗೆರೆಯನ್ನು ಎಳೆದರೂ ಒಂದಂತೂ ಖಚಿತ. ಬೈಪೆಡಲಿಸಂ ಎಂದು ಕರೆಯಲ್ಪಡುವ ಎರಡು ಕಾಲುಗಳ ಮೇಲೆ ನಡೆಯುವ ಕ್ರಿಯೆಯು ನಮ್ಮ ಪೂರ್ವಜರ ಶ್ರೇಷ್ಠ ಹೆಜ್ಜೆಗಳಲ್ಲಿ ಒಂದಾಗಿದೆ.
ನಮ್ಮ ಅಸ್ಥಿಪಂಜರದ ಪ್ರತಿಯೊಂದು ಭಾಗವು ನಾಲ್ಕು ಕಾಲುಗಳ ಮೇಲೆ ನಡೆಯುವುದರಿಂದ ನೇರವಾಗಿ ನಿಲ್ಲಲು ಪ್ರಭಾವಿತವಾಗಿದೆ. ಈ ರೂಪಾಂತರಗಳು ಪಾದದ ಮೂಳೆಗಳು, ಸೊಂಟದ ಮೂಳೆಗಳು, ಮೊಣಕಾಲುಗಳು, ಕಾಲುಗಳು ಮತ್ತು ಬೆನ್ನುಮೂಳೆಯ ಜೋಡಣೆ ಮತ್ತು ಗಾತ್ರವನ್ನು ಒಳಗೊಂಡಿವೆ. ಮುಖ್ಯವಾಗಿ, ನಾವು ನೆಟ್ಟಗೆ ನಡೆಯಲು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ನಮ್ಮ ಮೆದುಳಿನ ಗಾತ್ರದಲ್ಲಿ ತ್ವರಿತ ಹೆಚ್ಚಳವು ಸಂಭವಿಸಿದೆ ಎಂದು ಪಳೆಯುಳಿಕೆ ತಲೆಬುರುಡೆಗಳಿಂದ ನಮಗೆ ತಿಳಿಯುತ್ತದೆ.
ನಮ್ಮ ದೊಡ್ಡ ಮೆದುಳಿನ ಶಿಶುಗಳು ವಿಶಾಲವಾದ ಜನ್ಮ ಕಾಲುವೆಯ ಮೂಲಕ ಹೊಂದಿಕೊಳ್ಳಲು ಅನುವು ಮಾಡಿಕೊಡಲು ಪೆಲ್ವಿಸ್ (ಶ್ರೋಣಿಯ)ಗೆ ಬದಲಾವಣೆಗಳು ಬೇಕಾಗುತ್ತವೆ. ನಮ್ಮ ವಿಶಾಲವಾದ ಶ್ರೋಣಿಯ (ಕೆಲವೊಮ್ಮೆ ಇಲಿಯಾಕ್ ಫ್ಲೇರಿಂಗ್ ಎಂದು ಕರೆಯಲ್ಪಡುತ್ತದೆ) ಒಂದು ಏಕರೂಪದ ಲಕ್ಷಣವಾಗಿದೆ. ಇದು ಆರಂಭಿಕ ಪಳೆಯುಳಿಕೆ ಮಾನವರ ಹಲವಾರು ವಂಶಾವಳಿಗಳೊಂದಿಗೆ ಮತ್ತು ಇಂದು ವಾಸಿಸುವ ಎಲ್ಲರೊಂದಿಗೆ ಹಂಚಿಕೊಳ್ಳತ್ತದೆ. ನಮ್ಮ ಮೆದುಳುಗಳು ಕಲೆ, ಸಂಸ್ಕೃತಿ ಮತ್ತು ಭಾಷೆಗೆ ಉತ್ತೇಜನ ನೀಡಿತು. ಇವೇ ನಮ್ಮನ್ನು ಮಾನವನನ್ನಾಗಿ ಮಾಡುವುದನ್ನು ಪರಿಗಣಿಸುವಾಗ ಪ್ರಮುಖ ಪರಿಕಲ್ಪನೆಗಳಾಗಿವೆ.
ತಲೆಯಲ್ಲಿ ಒಂದು ರಂಧ್ರ: ನಿಮ್ಮ ಕಣ್ಣುಗುಡ್ಡೆಗಳು ತಮ್ಮ ಕಕ್ಷೆಗಳಲ್ಲಿ ಕುಳಿತುಕೊಳ್ಳುವುದರ ಜೊತೆಗೆ ನಿಮ್ಮ ತಲೆಬುರುಡೆಯಲ್ಲಿ ನೀವು ಇತರ ದೊಡ್ಡ ರಂಧ್ರಗಳನ್ನು (ಫೆನೆಸ್ಟ್ರೇ ಎಂದು ಕರೆಯಲಾಗುತ್ತದೆ) ಹೊಂದಿರುವುದನ್ನು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಮಾನವ ತಲೆಬುರುಡೆಯ ಪ್ರತಿ ಬದಿಯಲ್ಲಿ ಒಂದು ರಂಧ್ರ ಕಂಡುಬರುತ್ತದೆ. ಇದು 300 ಮಿಲಿಯನ್ ವರ್ಷಗಳ ಹಿಂದೆ ನಮ್ಮ ಸಾಮಾನ್ಯ ಪೂರ್ವಜರೊಂದಿಗೆ ನಮ್ಮನ್ನು ಒಂದುಗೂಡಿಸುತ್ತದೆ.