ಇಂದು ಆಕಾಶದಲ್ಲೊಂದು ವಿಶೇಷತೆಯಿದೆ. ಈ ವರ್ಷದ ಚಳಿಗಾಲದ ಕೊನೆಯ ಪೂರ್ಣಚಂದ್ರನನ್ನು ಖಗೋಳಪ್ರಿಯರು ವೀಕ್ಷಿಸಬಹುದಾಗಿದೆ. ರಾತ್ರಿ ಸುಮಾರು 12.35ಕ್ಕೆ ನೀವು ಹೊರಬಂದರೆ ಆಕಾಶವನ್ನು ನೋಡಿದರೆ, ಆ ಚಂದ್ರನನ್ನು ನಿಮ್ಮ ಕಣ್ಣಿಗೆ ಬೀಳಲಿದೆ. ಈ ಚಂದ್ರನನ್ನು 'ಹುಳ ಚಂದ್ರ' (Worm Moon) ಎಂದು ಕರೆಯಲಾಗುತ್ತದೆ.
ಹೌದು. ಚಳಿಗಾಲ ಕೊನೆಯಾಗಲು ಎರಡು ದಿನ ಬಾಕಿಯಿದೆ. ಮಾರ್ಚ್ 20ರಂದು ಚಳಿಗಾಲ ಕೊನೆಯಾಗಿ ವಸಂತಕಾಲ ಆರಂಭವಾಗಲಿದೆ. ವಸಂತಕಾಲ ಆರಂಭವಾಗುವ ಎರಡು ದಿನಗಳ ಮುಂಚೆ ಅಂದ್ರೆ ಇಂದು, ಭಾರತ ಸೇರಿದಂತೆ ಭೂಮಿಯ ಉತ್ತರ ಗೋಳಾರ್ಧದಲ್ಲಿರುವ ಜನರಿಗೆ ಈ ಅಪರೂಪದ ಚಂದ್ರ ಕಾಣಿಸಿಕೊಳ್ಳಲಿದ್ದು, ಶನಿವಾರ ಬೆಳಗ್ಗೆಯವರೆಗೂ ಈ ಪೂರ್ಣ ಚಂದ್ರ ಇರಲಿದ್ದು, ಅತ್ಯಂತ ಪ್ರಕಾಶಮಾನವಾಗಿ ಹೊಳೆಯಲಿದ್ದಾನೆ ಎಂದು ನಾಸಾ ಹೇಳಿದೆ.
ಏನಿದು ಹುಳ ಚಂದ್ರ?:ಅಮೆರಿಕದ ಕೆಲವು ಬುಡಕಟ್ಟು ಸಮುದಾಯಗಳು ಚಳಿಗಾಲದ ಕೊನೆಯ ಪೂರ್ಣ ಚಂದ್ರನನ್ನು ಹುಳ ಚಂದ್ರ ಎಂದು ಕರೆದಿದ್ದು, ಈಗಲೂ ಅದೇ ಹೆಸರು ಬಳಕೆಯಲ್ಲಿದೆ. ಇದರ ಜೊತೆಗೆ ಜನವರಿ 17ರಲ್ಲಿ ಕಾಣಿಸಿಕೊಳ್ಳುವ ಚಂದ್ರನನ್ನು ತೋಳ ಚಂದ್ರ (Wolf Moon) ಮತ್ತು ಫೆಬ್ರವರಿ 16ರಂದು ಕಾಣಿಸಿಕೊಳ್ಳುವ ಚಂದ್ರನನ್ನು ಹಿಮ ಚಂದ್ರ (Snow Moon) ಎಂದು ಕರೆಯಾಗುತ್ತದೆ.
ಹಲವಾರು 'ಹುಳ ಚಂದ್ರ' ಸಿದ್ಧಾಂತಗಳು..: ಹುಳ ಚಂದ್ರನ ಪದದ ಹಿಂದೆ ಹಲವಾರು ಸಿದ್ಧಾಂತಗಳಿವೆ. ಮಾರ್ಚ್ ಈ ಅವಧಿಯಲ್ಲಿ ಮಣ್ಣಿನಲ್ಲಿ ಉಷ್ಣತೆ ಹೆಚ್ಚಿರುವ ಕಾರಣದಿಂದ ಮಣ್ಣಿನಲ್ಲಿರುವ ಎರೆಹುಳಗಳು ಹೊರಗೆ ಬರುತ್ತವೆ. ಆದ್ದರಿಂದ ಈ ಚಂದ್ರನಿಗೆ ಹುಳಚಂದ್ರ ಎಂದು ಹೆಸರಿಡಲಾಗಿದೆ ಎನ್ನಲಾಗಿದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಈ ಅವಧಿಯಲ್ಲಿ ಮರಗಳ ತೊಗಟೆಯಿಂದ ಜೀರುಂಡೆಗಳ ಮರಿಗಳು ಹೊರಬರುತ್ತವೆ. ಆದ್ದರಿಂದ ಹುಳ ಚಂದ್ರ ಎಂದು ನಾಮಕರಣ ಮಾಡಲಾಗಿದೆ ಎಂದು ನ್ಯೂಸ್ವೀಕ್ ವರದಿ ಮಾಡಿದೆ.
ಇದನ್ನೂ ಓದಿ:ಕಾಳ್ಗಿಚ್ಚಿನ ಹೊಗೆ ಓಝೋನ್ ಪದರವನ್ನು ನಾಶಪಡಿಸುತ್ತದೆ: ಸಂಶೋಧನೆ