ಕರ್ನಾಟಕ

karnataka

ETV Bharat / science-and-technology

Chandrayaan 3: ಚಂದ್ರಯಾನ 3​ ಉಡಾವಣೆಯು ಭಾರತದ ಪಾಲಿಗೆ ಐತಿಹಾಸಿಕ: ವಿಎಸ್​ಎಸ್​ಸಿ ಮಾಜಿ ನಿರ್ದೇಶಕ ಎಂಸಿ ದತ್ತನ್‌

ಚಂದ್ರಯಾನ 3 ಮಿಷನ್​ ಉಡಾವಣೆಯು ಭಾರತದ ಪಾಲಿಗೆ ಐತಿಹಾಸಿಕವಾಗಲಿದ್ದು, ದೇಶವೇ ಹೆಮ್ಮ ಪಡುವಂತಹ ದಿನವಾಗಲಿದೆ ಎಂದು ವಿಎಸ್​ಎಸ್​ಸಿ ಮಾಜಿ ನಿರ್ದೇಶಕ ಎಂಸಿ ದತ್ತನ್‌ ತಿಳಿಸಿದ್ದಾರೆ.

VSSC former director mc dathan about chandrayaan 3 mission
ಚಂದ್ರಯಾನ 3​ ಉಡಾವಣೆಯು ಭಾರತದ ಪಾಲಿಗೆ ಐತಿಹಾಸಿಕ: ವಿಎಸ್​ಎಸ್​ಸಿ ಮಾಜಿ ನಿರ್ದೇಶಕ ಎಂಸಿ ದತ್ತನ್‌

By

Published : Jul 13, 2023, 9:10 PM IST

ತಿರುವನಂತಪುರಂ (ಕೇರಳ): ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಮಿಷನ್​ಗೆ ಕ್ಷಣಗಣನೆ ಶುರುವಾಗಿದೆ. ಜುಲೈ 14ರಂದು ಮಧ್ಯಾಹ್ನ 2.30ರ ಸುಮಾರಿಗೆ ಇಸ್ರೋದ ಬಾಹ್ಯಾಕಾಶ ನೌಕೆ ನಭಕ್ಕೆ ಚಿಮ್ಮಲಿದೆ. ಈ ಮೊದಲು ಭಾರತ ಕೈಗೊಂಡ ಎರಡು ಚಂದ್ರಯಾನ ಯೋಜನೆಗಳ ಬಗ್ಗೆಯೂ ವಿಜ್ಞಾನಿಗಳು ಮೆಲುಕು ಹಾಕುತ್ತಿದ್ದಾರೆ. 2019ರಲ್ಲಿ ಚಂದ್ರನ ಮೇಲೆ ಮೃದು ಲ್ಯಾಂಡಿಂಗ್ ಕಾಣದ ಚಂದ್ರಯಾನ 2ನೇ ಯೋಜನೆಯು ವಿಫಲವಲ್ಲ. ಇದನ್ನು ವೈಫಲ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ವಿಎಸ್​ಎಸ್​ಸಿ ಮಾಜಿ ನಿರ್ದೇಶಕ ಮತ್ತು ಚಂದ್ರಯಾನ 1ರ ಉಡಾವಣಾ ಅಧಿಕಾರ ಮಂಡಳಿಯ ಮುಖ್ಯಸ್ಥ ಎಂಸಿ ದತ್ತನ್‌ ಹೇಳಿದ್ದಾರೆ.

ಐತಿಹಾಸಿಕವಾದ ಚಂದ್ರಯಾನ 3 ಉಡಾವಣೆಯನ್ನು ಭಾರತ ಮಾತ್ರವಲ್ಲದೇ ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ಈ ವಿಷನ್​ ಯಶಸ್ವಿಯಾದರೆ ಚಂದ್ರನ ಮೇಲೆ ಲ್ಯಾಂಡರ್​ ಇಳಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತ ಪಾತ್ರವಾಗಲಿದೆ. ಚಂದ್ರಯಾನ 3 ಮಿಷನ್​ ಬಗ್ಗೆ ವಿಜ್ಞಾನಿ ಎಂಸಿ ದತ್ತನ್‌ ಮಾತನಾಡಿ, ಶುಕ್ರವಾರವು ಭಾರತದ ಪಾಲಿಗೆ ಐತಿಹಾಸಿಕ ದಿನವಾಗಲಿದ್ದು, ದೇಶವೇ ಹೆಮ್ಮ ಪಡುವಂತಹ ದಿನವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Chandrayaan 3: ಚಂದ್ರಯಾನ ಉಡ್ಡಯನಕ್ಕೆ ಕ್ಷಣಗಣನೆ; ತಿರುಪತಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿಜ್ಞಾನಿಗಳ ತಂಡ

ಇದೇ ವೇಳೆ, ಚಂದ್ರಯಾನ 2ರ ಯೋಜನೆಯು ಶೇ.90ರಷ್ಟು ತನ್ನ ಗುರಿಯನ್ನು ಸಾಧಿಸಿತ್ತು. ಆದರೆ, ಲ್ಯಾಂಡಿಂಗ್ ಹಂತದಲ್ಲಿ ಮಾತ್ರ ವಿಫಲವಾಗಿತ್ತು. ಚಂದ್ರಯಾನ 2ರಲ್ಲಿ ನಾವು ಲ್ಯಾಂಡರ್ ರೋವರ್ ವ್ಯವಸ್ಥೆಯನ್ನು ಹೊಂದಿದ್ದೆವು. ಸಾಫ್ಟ್ ಲ್ಯಾಂಡಿಂಗ್​ ಬಗ್ಗೆಯೂ ಯೋಜಿಸಲಾಗಿತ್ತು. ಆದರೆ, ಸಾಫ್ಟ್‌ವೇರ್ ಲಾಜಿಕ್ ನಿಯಂತ್ರಣ ಅಲ್ಗಾರಿದಮ್‌ಗಳಲ್ಲಿನ ಕೆಲವು ದೋಷಗಳಿಂದ ಸುರಕ್ಷಿತವಾಗಿ ಲ್ಯಾಂಡ್​​ ಆಗಲು ಸಾಧ್ಯವಾಗಲಿಲ್ಲ ಎಂದು ಅವರು ವಿವರಿಸಿದ್ದಾರೆ.

ಈಗ ಆ ಎಲ್ಲ ಅಂಶಗಳನ್ನು ಮತ್ತೊಮ್ಮೆ ಅಧ್ಯಯನ ಮಾಡಲಾಗಿದೆ. ಜೊತೆಗೆ ದೋಷಗಳನ್ನು ಸರಿಪಡಿಸಲಾಗಿದೆ. ಚಂದ್ರಯಾನ ಎರಡನೇ ಮಿಷನ್​ಅನ್ನು ಬಳಸಲಾಗಿರುವ ಕಕ್ಷೆಯನ್ನು ಈ ಯೋಜನೆಗೂ ಇಸ್ರೋ ಆಯ್ಕೆ ಮಾಡಿದೆ. ಇಸ್ರೋದ ಅತ್ಯಂತ ಶಕ್ತಿಶಾಲಿ ಉಡಾವಣಾ ವಾಹನವನ್ನು ನಾಳೆಯ ಕಾರ್ಯಾಚರಣೆಗೆ ಬಳಸಲಾಗುವುದು. ಸಂಪೂರ್ಣ ಸ್ವದೇಶಿ ನಿರ್ಮಿತ ಮಾರ್ಕ್ 3 ರಾಕೆಟ್‌ನ 7ನೇ ಮಿಷನ್​ಗೆ ಸಿದ್ಧವಾಗಿದೆ. ಮಾರ್ಕ್ 3 ರಾಕೆಟ್ ಇಸ್ರೋದ ಕಾರ್ಯಾಚರಣೆಗಳಲ್ಲಿ ಸಹಕಾರಿಯಾಗಲಿದೆ ಎಂದು ದತ್ತನ್ ಹೇಳಿದ್ದಾರೆ. ಈ ರಾಕೆಟ್ ನಿರ್ಮಾಣದ ಎಲ್ಲ ಹಂತಗಳಲ್ಲಿ ದತ್ತನ್ ಪ್ರಮುಖ ಪಾತ್ರ ವಹಿಸಿದ್ದರು.

ನಮ್ಮ ರಾಷ್ಟ್ರವು ಈ ಹಿಂದೆಯೂ ಬಾಹ್ಯಾಕಾಶ ವಿಜ್ಞಾನದಲ್ಲಿ ಸಾಕಷ್ಟು ವೈಭವ ಸಾಧಿಸಿತ್ತು. ಆದರೂ, ಚಂದ್ರಯಾನ 1 ಮಿಷನ್‌ನ ಯಶಸ್ಸು ಭಾರತದತ್ತ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿತ್ತು. ಇದರಿಂದ ಇಸ್ರೋಗೆ ಸಾಕಷ್ಟು ಮನ್ನಣೆ ಸಿಕ್ಕಿತ್ತು. ಕಡಿಮೆ ವೆಚ್ಚದಲ್ಲಿ ದೊಡ್ಡ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವ ಇಸ್ರೋದ ವಿಶಿಷ್ಟತೆಯಾಗಿದೆ. ಚಂದ್ರಯಾನ 1ರ ವೆಚ್ಚ 386 ಕೋಟಿ ರೂಪಾಯಿ, ಚಂದ್ರಯಾನ 2ರ ವೆಚ್ಚ 970 ಕೋಟಿ ರೂಪಾಯಿ ಆಗಿತ್ತು. ಈಗ ಚಂದ್ರಯಾನ 3ರ ವೆಚ್ಚ 615 ಕೋಟಿ ರೂಪಾಯಿ ಆಗಿದೆ. ಇದು ಇಡೀ ಜಗತ್ತನ್ನು ಆಶ್ಚರ್ಯಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:India Moon Mission: ಚಂದ್ರಯಾನ 3 ಉಡಾವಣೆ ಕ್ಷಣಗಣನೆ ಆರಂಭ.. ನಭಕ್ಕೆ ಜಿಗಿಯಲು ಸಜ್ಜಾದ ಉಪಗ್ರಹ

ABOUT THE AUTHOR

...view details