ನ್ಯೂಯಾರ್ಕ್: ಕಳೆದೆರಡು ವಾರದಿಂದ ಸಂಪರ್ಕ ಕಳೆದುಕೊಂಡಿದ್ದ ವಾಯೇಜರ್ 2 ಬಾಹ್ಯಕಾಶದ ನೌಕೆಯ ಮರು ಸಂಪರ್ಕ ಸಾಧಿಸುವಲ್ಲಿ ನಾಸಾ ಸಫಲವಾಗಿದೆ. ಫೈಟ್ ಕಂಟ್ರೋಲರ್ ತಪ್ಪನ್ನು ಸರಿಪಡಿಸಿದ ಹಿನ್ನೆಲೆ ಇದರ ಮರು ಸಂಪರ್ಕ ಸಾಧ್ಯವಾಗಿದೆ. ಕಳೆದೆರಡು ವಾರಗಳ ಹಿಂದೆ ವಾಯೇಜರ್ ಸಂರ್ಪಕವನ್ನು ಕಳೆದುಕೊಂಡಿತು. 46 ವರ್ಷದ ಈ ಬಾಹ್ಯಕಾಶ ನೌಕೆಗೆ ನಿಯಂತ್ರಕರು ತಪ್ಪು ಸಂದೇಶವನ್ನು ಕಳುಹಿಸಿದ ಪರಿಣಾಮ ಇದರ ಅಂಟೆನಾ ಭೂಮಿಯಿಂದ ದೂರಕ್ಕೆ ತಿರುಗಿತು. ಇದೀಗ ಅದರ ಸಂಪರ್ಕ ಸಾಧಿಸಲಾಗಿದೆ ಎಂದು ನಾಸಾ ತಿಳಿಸಿದೆ.
ಸಂರ್ಪ ಸಾಧಿಸಿದ ವಾಯೇಜರ್ 2: ಬುಧವಾರ ನಾಸಾದ ಡೀಪ್ ಸ್ಪೆಸ್ ನೆಟ್ವರ್ಕ್ ಈ ಅಂಟೆನಾವನ್ನು ಮತ್ತೆ ಗುರಿಯಾಗಿಸಿ, ಹೊಸ ಕಮಾಂಡ್ ಅನ್ನು ಕಳುಹಿಸಿದರು. ಇದಕ್ಕಾಗಿ ಆಸ್ಟ್ರೇಲಿಯಾದಲ್ಲಿ ದೊಡ್ಡದಾದ ರೆಡಿಯೋ ಡಿಶ್ ಅಂಟೇನಾವನ್ನು ಬಳಕೆ ಮಾಡಿ ಅಧಿಕ ಪ್ರಮಾಣದ ಟ್ರಾನ್ಸಿಮಿಟರ್ ಅನ್ನು ನೀಡಲಾಯಿತು. ವಾಯೇಜರ್ 2 ಬಾಹ್ಯಕಾಶ ನೌಕೆಯನ್ನು 2 ಡಿಗ್ರಿಗೆ ಸ್ಥಳಾಂತರಿಸಬೇಕಿತ್ತು. ಈ ಕಮಾಂಡ್ ವಾಯೇಜರ್ 2ಗೆ ತಲುಪಲು 18 ಗಂಟೆ ಬೇಕಾಯಿತು. 19 ಬಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಈ ಅಂಟೇನಾದ ಮತ್ತೆ ಕಮಾಂಡ್ ಕೇಳುವಂತೆ ಮಾಡಲು ಮತ್ತೊಂದು 18 ಗಂಟೆ ಬೇಕಾಯಿತು.
ಈ ದೀರ್ಘ ಸಮಯದ ಬಳಿಕ ಶುಕ್ರವಾರ ಬಾಹ್ಯಕಾಶ ನೌಕೆ ಮತ್ತೆ ದತ್ತಾಂಶವನ್ನು ಕಳುಹಿಸಲು ಆರಂಭಿಸಿತು ಎಂದು ಕ್ಯಾಲಿಫೋರ್ನಿಯಾದ ಜೆಟ್ ಪ್ರೊಪ್ಯುಲ್ಸನ್ ಲ್ಯಾಬೋರೇಟರಿ ತಿಳಿಸಿದೆ. ಈ ಕುರಿತು ಮಾತನಾಡಿರುವ ಪ್ರಾಜೆಕ್ಟ್ ಮ್ಯಾನೇಜರ್ ಸೂಸೆನ್ ಡೊಡ್, ವಾಯೇಜರ್ ಮರು ಸಂಪರ್ಕಕ್ಕೆ ಸಿಕ್ಕಿದೆ ಎಂದಿದ್ದಾರೆ. ಇದನ್ನು ಪ್ರಾಜೆಕ್ಟ್ ಸೈಟಿಂಸ್ಟ್ ಲಿಂಡಾ ಸ್ಪೈಲ್ಕೆರ್ ಕೂಡ ಅನುಮೋದಿಸಿದ್ದಾರೆ.