ನವದೆಹಲಿ: ವೊಡಾಫೋನ್ ಐಡಿಯಾದ ಸುಮಾರು 20 ಮಿಲಿಯನ್ ಗ್ರಾಹಕರ ಕರೆ ಡೇಟಾ ದಾಖಲೆಗಳನ್ನು ಸೈಬರ್ ಅಪರಾಧಿಗಳು ಸೋರಿಕೆ ಮಾಡಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ಸಂಶೋಧನಾ ಸಂಸ್ಥೆಯೊಂದು ಆರೋಪಿಸಿದೆ. ಆದರೆ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಟೆಲಿಕಾಂ ಆಪರೇಟರ್ ನಿರಾಕರಿಸಿದೆ.
ಕಂಪನಿಯ ವ್ಯವಸ್ಥೆಗಳಲ್ಲಿನ ದೋಷಗಳಿಂದಾಗಿ 20.6 ಮಿಲಿಯನ್ ಪೋಸ್ಟ್‌ಪೇಯ್ಡ್ Vi ಗ್ರಾಹಕರ ಕರೆ ಡೇಟಾ ದಾಖಲೆಗಳು ಸೋರಿಕೆಯಾಗಿದೆ ಎಂದು ಸೈಬರ್ - ಸೆಕ್ಯುರಿಟಿ ಸಂಶೋಧನಾ ಸಂಸ್ಥೆ ಸೈಬರ್‌ಎಕ್ಸ್ 9 ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಡೇಟಾ ಸೋರಿಕೆಯಾಗಿದ್ದು, ಕರೆ ಸಮಯ, ಕರೆ ಅವಧಿ, ಕರೆ ಮಾಡಿದ ಸ್ಥಳ, ಚಂದಾದಾರರ ಪೂರ್ಣ ಹೆಸರು, ವಿಳಾಸ, SMS ವಿವರಗಳು ಸೇರಿದಂತೆ ರೋಮಿಂಗ್ ವಿವರಗಳು ಸಹ ಒಳಗೊಂಡಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.