ನವದೆಹಲಿ : 2023 ರಲ್ಲಿ ವಿವೊ ಇಂಡಿಯಾ ಕಂಪನಿಯು 10 ಲಕ್ಷಕ್ಕಿಂತಲೂ ಹೆಚ್ಚು 'ಮೇಡ್ ಇನ್ ಇಂಡಿಯಾ' ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಲಿದೆ ಕಂಪನಿ ಗುರುವಾರ ಹೇಳಿದೆ. ತನ್ನ ಇಂಡಿಯಾ ಇಂಪ್ಯಾಕ್ಟ್ ವರದಿಯ ಎರಡನೇ ಆವೃತ್ತಿಯಲ್ಲಿ, ಕಂಪನಿಯು ತನ್ನ ಮೊದಲ 'ಮೇಡ್ ಇನ್ ಇಂಡಿಯಾ' ಸ್ಮಾರ್ಟ್‌ಫೋನ್ ಶಿಪ್‌ಮೆಂಟ್ ಅನ್ನು ಥೈಲ್ಯಾಂಡ್ ಮತ್ತು ಸೌದಿ ಅರೇಬಿಯಾಕ್ಕೆ 2022 ರಲ್ಲಿ ರಫ್ತು ಮಾಡಿದೆ ಎಂದು ಹೇಳಿಕೊಂಡಿದೆ. 7,500 ಕೋಟಿ ರೂಪಾಯಿ ಪ್ರಸ್ತಾವಿತ ಹೂಡಿಕೆ ಯೋಜನೆಯ ಭಾಗವಾಗಿ, ವಿವೊ 2023 ರ ಅಂತ್ಯದ ವೇಳೆಗೆ 3,500 ಕೋಟಿ ರೂಪಾಯಿಗಳ 1ನೇ ಹಂತದ ಹೂಡಿಕೆಯನ್ನು ಪೂರ್ಣಗೊಳಿಸುವ ಹಾದಿಯಲ್ಲಿದೆ. ಇದು 2024ರ ಆರಂಭದ ವೇಳೆಗೆ ಕಂಪನಿಯ ಹೊಸ 'ಅತ್ಯಾಧುನಿಕ' ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.
ಸ್ಥಳೀಯ ಮೌಲ್ಯ ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ಗಂಭೀರ ಪ್ರಯತ್ನಗಳು, ಉತ್ಪಾದನಾ ವಿಸ್ತರಣೆ, ಡಿಜಿಟಲ್ ಡಿವೈಡ್ ಕಡಿಮೆ ಮಾಡುವಲ್ಲಿ ನಮ್ಮ ಕೊಡುಗೆಯು ಭಾರತದ ಮಾರುಕಟ್ಟೆಯ ಬಗ್ಗೆ ನಾವು ಹೊಂದಿರುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ ಮತ್ತು ಭಾರತೀಯ ಸ್ಮಾರ್ಟ್‌ಫೋನ್ ಪರಿಸರ ವ್ಯವಸ್ಥೆಯಲ್ಲಿ ನಮ್ಮನ್ನು ಅಸಾಧಾರಣ ಶಕ್ತಿಯನ್ನಾಗಿ ಮಾಡುತ್ತದೆ ಎಂದು ವಿವೊದ ಬ್ರ್ಯಾಂಡ್ ಸ್ಟ್ರಾಟಜಿ ಮುಖ್ಯಸ್ಥ ಯೋಗೇಂದ್ರ ಶ್ರೀರಾಮುಲ ತಿಳಿಸಿದ್ದಾರೆ.
ಇದಲ್ಲದೆ, ರಾಷ್ಟ್ರವನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ಭಾರತ ಸರ್ಕಾರದ ಗುರಿಗೆ ಅನುಗುಣವಾಗಿ, ನಾವು ಮೊದಲ ಶಿಪ್‌ಮೆಂಟ್ ಅನ್ನು ಥೈಲ್ಯಾಂಡ್ ಮತ್ತು ಸೌದಿ ಅರೇಬಿಯಾಕ್ಕೆ ರಫ್ತು ಮಾಡುವ ಮೂಲಕ ಭಾರತಕ್ಕೆ ನಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ. ನಾವು 2023 ರಲ್ಲಿ 1 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡುವ ಹಾದಿಯಲ್ಲಿದ್ದೇವೆ ಎಂದು ಅವರು ಹೇಳಿದರು.