ಕರ್ನಾಟಕ

karnataka

ETV Bharat / science-and-technology

ಮೆಟಾದ ಭಾರತದ ಗ್ಲೋಬಲ್​ ಬ್ಯುಸಿನೆಸ್​ ನಿರ್ದೇಶಕರಾಗಿ ವಿಕಾಸ್​ ಪುರೋಹಿತ್​​ ನೇಮಕ - ಮೆಟಾದ ಭಾರತದ ಗ್ಲೋಬಲ್​ ಬ್ಯುಸಿನೆಸ್​ ಗ್ರೂಪ್​

ಬೆಂಗಳೂರು ಐಐಎಂನ ಮಾಜಿ ವಿದ್ಯಾರ್ಥಿ ಮೆಟಾ ಬ್ಯುಸಿನೆಸ್​ ಮುಖ್ಯಸ್ಥ - ಜಾಹೀರಾತು ಏಜೆನ್ಸಿ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ - ಮೆಟಾ ಜಾಹೀರಾತು ಬ್ಯುಸಿನೆಸ್​ನ ಮುಖ್ಯಸ್ಥರಿಗೆ ವರದಿ

ಮೆಟಾ ಗ್ಲೋಬಲ್​ ಬ್ಯುಸಿನೆಸ್​ ನಿರ್ದೇಶಕರಾಗಿ ವಿಕಾಸ್​ ಪುರೋಹಿತ್​​ ನೇಮಕ
vikas-purohit-appointed-as-meta-global-business-director

By

Published : Jan 9, 2023, 4:19 PM IST

ನವದೆಹಲಿ:ಮೆಟಾದ ಭಾರತದ ಗ್ಲೋಬಲ್​ ಬ್ಯುಸಿನೆಸ್​ ಗ್ರೂಪ್​ ನಿರ್ದೇಶಕರಾಗಿ ವಿಕಾಸ್​ ಪುರೋಹಿತ್​​ ನೇಮಕಗೊಂಡಿದ್ದಾರೆ. ದೇಶದ ಪ್ರಮುಖ ಜಾಹೀರಾತು ಮತ್ತು ಏಜೆನ್ಸಿಗಳೊಂದಿಗೆ ಕಂಪನಿ ಮುನ್ನಡೆಸುವಲ್ಲಿ ಅವರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಂಸ್ಥೆ ಸೋಮವಾರ ತಿಳಿಸಿದೆ. ಪುರೋಹಿತ್​ ಅವರು ಭಾರತದ ಮೆಟಾ ಜಾಹೀರಾತು ಬ್ಯುಸಿನೆಸ್​ನ ಮುಖ್ಯಸ್ಥರಾಗಿರುವ ಅರುಣ್​ ಶ್ರೀನಿವಾಸ್​ ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ ಎಂದು ಮೆಟಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀನಿವಾಸ್​​, ವಿಕಾಸ್​ ಅವರನ್ನು ಸ್ವಾಗತಿಸಲು ತಾವು ಉತ್ಸುಕರಾಗಿದ್ದು, ಅವರು ತಮ್ಮ ತಂಡವನ್ನು ಸೇರಲಿದ್ದು, ಮೆಟಾ ಫ್ಲಾಟ್​ಫಾರ್ಮ್​ ಬ್ಯುಸಿನೆಸ್​ ವೃದ್ದಿ ಜೊತೆ ಭಾರತದ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡಲಿದೆ. ದೇಶದಲ್ಲಿ ಡಿಜಿಟಲ್​ ಜಾಹೀರಾತಿನ ಪರಿಸ್ಥಿತಿ ನಿರ್ಮಾಣ ಮಾಡಲಿದೆ ಎಂದಿದ್ದಾರೆ. ಪುರೋಹಿತ್​​ ಮೆಟಾ ವರ್ಕ್​ನ ಮುಖ್ಯಸ್ಥರಾಗಿರಲಿದ್ದಾರೆ.

ಡಿಜಿಟಲ್​ ಟೂಲ್​ ಅಳವಡಿಕೆ: ಇದರ ಜೊತೆಯಲ್ಲಿಯೇ ಅವರು, ಮೆಟಾದ ಭಾರತದ ಪ್ರಮುಖ ಆದಾಯದ ಬೆಳವಣಿಗೆಯ ಪ್ರಮುಖ ಬ್ರಾಂಡ್​ಗಳು ಮತ್ತು ಏಜೆನ್ಸಿಗಳೊಂದಿಗೆ ಸಂಸ್ಥೆಯ ಕಾರ್ಯತಂತ್ರದ ಸಂಬಂಧ ಅನುಸಾರ ಕಾರ್ಯ ನಿರ್ವಹಿಸಲಿದ್ದಾರೆ. ಅತಿದೊಡ್ಡ ಜಾಹೀರಾತುದಾರರು ಮತ್ತು ಏಜೆನ್ಸಿಗಳ ಡಿಜಿಟಲ್ ಉಪಕರಣಗಳ ಅಳವಡಿಕೆ ವೇಗಗೊಳಿಸಲು ಸೃಜನಶೀಲ ಪರಿಸರ ವ್ಯವಸ್ಥೆಗಳು ನಿರ್ಮಾಣ ಮಾಡಲಿದ್ದಾರೆ. ಸಂಸ್ಥೆಯ ಪ್ರಮುಖ ಬ್ಯುಸಿನೆಸ್ ವರ್ಟಿಕಲ್​, ಏಜೆನ್ಸಿ ತಂಡ ಮತ್ತು ಬ್ಯುಸಿನೆಸ್​ ಸಲ್ಯೂಷನ್​ ಟೀಮ್​ಗಳು ಇವರಿಗೆ ವರದಿ ಮಾಡಿಕೊಳ್ಳಲಿದೆ.

ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿರುವ ಪುರೋಹಿತ್​​ ಸೀನಿಯರ್​​ ಬ್ಯುಸಿನೆಸ್​, ಸೇಲ್ಸ್​ ಮತ್ತು ಮಾರ್ಕೆಂಟಿಂಗ್​ ರೋಲ್​ಗಳಲ್ಲಿ 20 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಟಾಟಾಕ್ಲಿಕ್ಯೂ, ಅಮೆಜಾನ್​, ರಿಲಯನ್ಸ್​ ಬ್ರಾಂಡ್ಸ್​​, ಆದಿತ್ಯ ಬಿರ್ಲಾ ಗ್ರೂಪ್​ ಮತ್ತು ಟಾಮಿ ಹಿಲ್ಫಿಗರ್​ನಲ್ಲಿ ಕಾರ್ಯ ಮಾಡಿದ ಅನುಭವ ಪಡೆದಿದ್ದಾರೆ. ಮೆಟಾಗೆ ಸೇರುವ ಮುನ್ನ ಅವರು ಟಾಟಾ ಕ್ಲಿಕ್ಯೂ​​ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದಿತ್ಯ ಬಿರ್ಲಾ ಗ್ರೂಪ್​ಗೆ ಸೇರುವ ಮೂಲಕ ಅವರು ತಮ್ಮ ವೃತ್ತಿಯನ್ನು ಆರಂಭಿಸಿದ್ದರು.

ಯಾರು ಈ ವಿಕಾಸ್​​?:1996- 2000ದಲ್ಲಿ ವಾರಾಣಸಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಬಿಎಚ್​ಯು)ನ ಮೆಕಾನಿಕಲ್​ ಇಂಜಿನಿಯರಿಂಗ್​ನಲ್ಲಿ ಬಿಟೆಕ್​ ಪದವಿಯನ್ನು ಅವರು ಪಡೆದಿದ್ದಾರೆ. 2002ರಲ್ಲಿ ಆದಿತ್ಯ ಬಿರ್ಲಾ ಗ್ರೂಪ್​ನಲ್ಲಿ ಮ್ಯಾನೇಜ್​ಮೆಂಟ್​ ಟ್ರೈನಿಯಾಗಿ ವೃತ್ತಿ ಆರಂಭಿಸಿದ ಅವರು, ಬಳಿಕ ಟಾಮಿ ಹಿಲ್​ಫಿಗರ್​ ಬಳಿಕ ರಿಲಯನ್ಸ್​ ಬ್ರಾಂಡ್​ನ ರಿಟೈಲ್​ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಮೆಟಾದ ಇಂಡಿಯಾ ಘಟಕವು 2021-22 ರ ಹಣಕಾಸು ವರ್ಷದಲ್ಲಿ ರೂ 297 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ರೂ 128.2 ಕೋಟಿ ಲಾಭದಿಂದ 132 ಶೇಕಡಾ ಹೆಚ್ಚಳವಾಗಿದೆ. ಹಣಕಾಸು ವರ್ಷದಲ್ಲಿ ಒಟ್ಟು ಆದಾಯವು ರೂ 2,324 ಕೋಟಿಗೆ ಏರಿತ್ತು. ಹಿಂದಿನ ಹಣಕಾಸು ವರ್ಷದಲ್ಲಿ ರೂ 1,485.1 ಕೋಟಿಯಿಂದ ಶೇ 56.5 ಜಿಗಿತವನ್ನು ಕಂಡಿದ್ದು, ಈ ಬಾರಿಯ ಒಟ್ಟು ಜಾಹೀರಾತು ಆದಾಯವು ಈ ಅವಧಿಯಲ್ಲಿ 16,189 ಕೋಟಿ ರೂ. ಆಗಿದೆ.

ಇದನ್ನೂ ಓದಿ: ಇಂದು ಮಾರುಕಟ್ಟೆಗೆ ಅಗ್ಗದ ಮಹೀಂದ್ರಾ ಥಾರ್ ಲಗ್ಗೆ​! ಬೆಲೆ, ವಿಶೇಷತೆ ಹೀಗಿದೆ..

ABOUT THE AUTHOR

...view details