ನವದೆಹಲಿ: ಹಲವು ಹೊಸ ಬೆಳವಣಿಗೆ ಮತ್ತು ಬಳಕೆದಾರರ ಸ್ನೇಹಿಯಾಗಲು ಸಂದೇಶವಾಹರ ಎಕ್ಸ್ ಮುಂದಾಗುತ್ತಿದೆ. ಎಕ್ಸ್ ಇದೀಗ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಅದುವೇ ವಿಡಿಯೋ ಕಾಲ್. ಚೀನಾದ 'ವಿ ಚಾಟ್ನಂತೆ ಎವರಿಥಿಂಗ್ ಆ್ಯಪ್' ಮಾದರಿಯಲ್ಲಿ ಇದನ್ನು ಗುರಿಯಾಗಿಸಿಕೊಂಡು ಈ ಹೊಸ ಫೀಚರ್ ಪರಿಚಯಿಸುತ್ತಿದೆ. ಅದರ ಅನುಸಾರ ಮೈಕ್ರೋಬ್ಲಾಗಿಂಗ್ ತಾಣವಾಗಿರುವ ಎಕ್ಸ್ನಲ್ಲಿ ಇದೀಗ ವಿಡಿಯೋ ಕಾಲ್ ಆಯ್ಕೆಯನ್ನು ಬಳಕೆದಾರರಿಗೆ ಶೀಘ್ರವಾಗಿ ನೀಡುವುದಾಗಿ ಎಕ್ಸ್ ಸಿಇ ಯಾಕೊರಿನೊ ತಿಳಿಸಿದ್ದಾರೆ.
ಸಿಎನ್ಬಿಸಿಗೆ ಈ ಕುರಿತು ಮಾತನಾಡಿರುವ ಎಕ್ಸ್ ಕಾರ್ಪ್ ಸಿಇಒ ಲಿಂಡಾ ಯಕೊರಿನೊ, ನಿಮ್ಮ ಫೋನ್ ನಂಬರ್ ನೀಡದೇ ಎಕ್ಸ್ನಲ್ಲಿರುವ ನಿಮ್ಮ ಸ್ನೇಹಿತರಿಗೆ ಇದೀಗ ವಿಡಿಯೋ ಚಾಟ್ ಮಾಡಿ ಮಾತನಾಡಬಹುದು ಎಂದಿದ್ದಾರೆ. ಇದೇ ವೇಳೆ ಅವರು ಜಾಲತಾಣದಲ್ಲಿ ದೀರ್ಘ ವಿಡಿಯೋ ಮತ್ತು ಬಳಕೆದಾರರ ಸಬ್ಸ್ಕ್ರಿಪ್ಷನ್ ಮತ್ತು ಡಿಜಿಟಲ್ ಪೇಮೆಂಟ್ಗಳ ಕುರಿತು ಮಾತನಾಡಿದ್ದಾರೆ.
ಹಕ್ಕಿಯ ಲೋಗೊ ಬದಲಾಗಿ ಎಕ್ಸ್ ಎಂಬ ಲೋಗವನ್ನು ಡಿಸೈನ್ ಮಾಡಿರುವ ಆ್ಯಂಡ್ರೆ ಕೊನ್ವೆ ಕೂಡ 'ಯಾರನ್ನೋ ಸುಮ್ಮನೆ ಎಕ್ಸ್ ಕರೆದಿದೆ' ಟ್ವೀಟ್ ಮೂಲಕ ಈ ವಿಡಿಯೋ ಕರೆಯ ಆಪ್ಷನ್ ನೀಡುವ ಸುಳಿವನ್ನು ಈ ಮೂಲಕ ನೀಡಿದ್ದರು. ಇದೀಗ ಸಿಇಒ ಯಾಕೊರಿನೊ ವಾಯ್ಸ್ ಕಾಲ್ಸ್ ಅಥವಾ ವಿಡಿಯೋ ಕಾಲ್ ಅಥವಾ ಎರಡನ್ನು ಎಕ್ಸ್ ಮೈಕ್ರೋಬ್ಲಾಗಿಂಗ್ನಲ್ಲಿ ಅಳವಡಿಸುವ ಸುಳಿವನ್ನು ನೀಡಿದ್ದಾರೆ.
ಮಾಸ್ಕ್ ಯಾವಾಗಲೂ ಚೀನಾದ ವಿಚಾಟ್ನಂತೆ ಎಲ್ಲವೂ ಹೊಂದಿರುವ ಆ್ಯಪ್ ಆಗಿ ಟ್ವಿಟರ್ ಅನ್ನು ರೂಪಿಸಲು ಇಚ್ಛೆ ಹೊಂದಿದ್ದರು. ಟ್ವಿಟರ್ ಅನ್ನು ಖರೀದಿಸುವ ಮೂಲಕ ಅದರಲ್ಲಿ ಎಲ್ಲ ತಂತ್ರಜ್ಞಾನದ ಸೌಲಭ್ಯ ಬಳಕೆದಾರರಿಗೆ ಒಂದೇ ತಾಣದಲ್ಲಿ ಸಿಗುವಂತೆ ರೂಪಿಸುವುದಾಗಿ ಕಳೆದ ಅಕ್ಟೋಬರ್ನಲ್ಲಿ ಘೋಷಿಸಿದ್ದರು. ಇದೇ ಕಾರಣಕ್ಕೆ 44 ಬಿಲಿಯನ್ ಕೊಟ್ಟು ಮಸ್ಕ್ ಟ್ವಿಟರ್ ಖರೀದಿಸಿದ್ದರು.