ಲಂಡನ್ (ಇಂಗ್ಲೆಂಡ್):ಅನೇಕ ಗ್ರಾಹಕ ಉತ್ಪನ್ನಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್‌ಗಳ ಬದಲಾಗಿ ಬಳಸಬಲ್ಲ, ಸಸ್ಯ ಆಧಾರಿತ, ಸುಸ್ಥಿರ, ಸ್ಕೇಲೇಬಲ್ ವಸ್ತುವನ್ನು ಸಂಶೋಧಕರು ರಚಿಸಿದ್ದಾರೆ. ಬ್ರಿಟನ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು, ಪ್ರಕೃತಿಯ ಪ್ರಬಲ ವಸ್ತುಗಳಲ್ಲಿ ಒಂದಾದ ಜೇಡ ರೇಷ್ಮೆಯ ಮೂಲಕ ಪಾಲಿಮರ್ ಫಿಲ್ಮ್ ಸೃಷ್ಟಿಸಿದ್ದಾರೆ.
ಹೊಸ ವಸ್ತುವು ಇಂದು ಬಳಕೆಯಲ್ಲಿರುವ ಅನೇಕ ಸಾಮಾನ್ಯ ಪ್ಲಾಸ್ಟಿಕ್‌ಗಳಂತೆ ಪ್ರಬಲವಾಗಿದೆ ಮತ್ತು ಅನೇಕ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಇದನ್ನು ಬಳಸಬಹುದಾಗಿದೆ.