ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್ ಸಿಇಒ ಎಲಾನ್ ಮಸ್ಕ್ ತಮ್ಮ ಬಳಕೆದಾರರಿಗೆ ಮೇಲಿಂದ ಮೇಲೆ ಗುಡ್ ನ್ಯೂಸ್ ನೀಡುತ್ತಿದ್ದಾರೆ. ಮೊದಲು ಟ್ವಿಟ್ಟರ್ ಬ್ಲೂಟಿಕ್ ಗೆ ಹಣ ಪಾವತಿಸಿ ಚಂದದಾರಿಕೆ ಪಡೆಯಲು ಅವಕಾಶ ನೀಡಿತ್ತು. ಇದೀಗ ಅದೇ ಬ್ಲೂಟಿಕ್ ಹೊಂದಿರುವವರು ಹಣಗಳಿಸಬಹುದಾಗಿದೆ. ಹೌದು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಚಂದಾದಾರಿಕೆಗಳನ್ನು ಸ್ಪಿನ್ ಮಾಡಲು ಅವಕಾಶ ನೀಡಿದ್ದು, ಇದರಿಂದ ಬ್ಲೂಟಿಕ್ ಹೊಂದಿರುವ ಬಳಕೆದಾರರು ಉದಾಹರಣೆಗೆ ಬೇರೆಯವರ ಜಾಹೀರಾತನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳುವುದರ ಜೊತೆಗೆ ಜಾಹೀರಾತು ನೀಡಿದವರಿಗೆ ಇಂತಿಷ್ಟು ಚಾರ್ಜ್ ಮಾಡಬಹುದು. ಅಂದರೆ ಬ್ಲೂಟಿಕ್ ಹೊಂದಿರುವವರು ತಮ್ಮ ಖಾತೆಯಲ್ಲಿ ಬೇರೆಯವರು ಯಾವುದೇ ಜಾಹಿರಾತು, ವ್ಯಾಪಾರದ ಕುರಿತಾಗಿಯೂ ಪೋಸ್ಟ್ ಹಾಕಿಕೊಳ್ಳಲು ನೀಡಿದರೆ ಅವರಿಂದ ನಿಮಗೆ ಹಣ ಪಾವತಿಸಿಕೊಳ್ಳಲು ಟ್ವಿಟರ್ ಸಿಇಒ ಎಲಾನ್ ಮಸ್ಕ್ ಹೊಸದಾದ ಅವಕಾಶ ನೀಡಿದ್ದಾರೆ.
ಮೊದಲು ಟ್ವಿಟ್ಟರ್ನ ಎಲ್ಲಾ ಬಳಕೆದಾರರಿಗೆ 300 ಕ್ಕಿಂತ ಕಡಿಮೆ ಅಕ್ಷರಗಳಿಗೆ ಮಾತ್ರ ಬರೆದು ಹಾಕಿಕೊಳ್ಳುವ ಮಿತಿ ಇತ್ತು. ಆದರೆ ಇದೀಗ ಚಂದಾದಾರಿಕೆ ಇರುವವರು ತಮ್ಮ ಖಾತೆಯಲ್ಲಿ 4000 ಅಕ್ಷರಗಳಷ್ಟು ಬರೆದುಕೊಳ್ಳಲು ಅವಕಾಶ ನೀಡಿದೆ. ಇದರ ಮೂಲಕ ಬ್ಲೂಟಿಕ್ ಹೊಂದಿರುವ ಬಳಕೆದಾರರು ಸುದೀರ್ಘ ಟ್ವೀಟ್ ಅನ್ನು ಪೋಸ್ಟ್ ಮಾಡಬಹುದಾಗಿದೆ. ಈ ಕುರಿತು ಮಸ್ಕ್ ದೀರ್ಘ ಟ್ವೀಟ್‌ನ ಉತ್ತಮ ಬಳಕೆ ಏನೆಂದರೆ ಇನ್ನು ಮುಂದೆ ನೀವು ಮೂಲ ಫಾರ್ಮ್ಯಾಟಿಂಗ್‌ನೊಂದಿಗೆ ಹೆಚ್ಚು ದೀರ್ಘವಾದ ಯಾವುದೇ ವಿಷಯವನ್ನು Twitter ನಲ್ಲಿ ಪೋಸ್ಟ್ ಮಾಡಬಹುದು, ಜೊತೆಗೆ ನಾವು ಚಂದಾದಾರಿಕೆಯನ್ನು ಕೂಡ ಈ ದಿನಗಳಲ್ಲಿ ಹೆಚ್ಚಿಸುತ್ತಿದ್ದೇವೆ ಎಂದಿದ್ದಾರೆ.