ಸ್ಯಾನ್ ಫ್ರಾನ್ಸಿಸ್ಕೋ (ಯು.ಎಸ್): ಸ್ಪೇಸ್ ಎಕ್ಸ್‌ನ ಸ್ಟಾರ್‌ಶಿಪ್ ರಾಕೆಟ್ ಡಿಸೆಂಬರ್ನಲ್ಲಿ ಮೊದಲ ಎತ್ತರದ ಪರೀಕ್ಷಾ ಹಾರಾಟದಲ್ಲಿ ಲ್ಯಾಂಡಿಂಗ್ ಸಂದರ್ಭದಲ್ಲಿ ಸ್ಫೋಟಗೊಂಡಿದ್ದು, ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಇದರ ಪರಿಶೀಲನೆ ನಡೆಸುತ್ತಿದೆ. ಸ್ಪೇಸ್ ಎಕ್ಸ್ ತನ್ನ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪರೀಕ್ಷಾ ಪರವಾನಿಗೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಎಫ್‌ಎಎ ತಿಳಿಸಿದೆ.
"ತನ್ನ ಉಡಾವಣಾ ಪರವಾನಿಗೆಯನ್ನು ಮಾರ್ಪಡಿಸುವ ಅರ್ಜಿಯ ಭಾಗವಾಗಿ ಸ್ಪೇಸ್ ಎಕ್ಸ್ ಕಂಪನಿಯು ಒದಗಿಸಿದ ಹೆಚ್ಚುವರಿ ಮಾಹಿತಿಯನ್ನು ಎಫ್‌ಎಎ ಕಡೆಯಿಂದ ಮೌಲ್ಯಮಾಪನ ಮಾಡಲಾಗುವುದು" ಎಂದು ಎಫ್‌ಎಎ ವಕ್ತಾರ ಸ್ಟೀವ್ ಕುಲ್ಮ್ ಹೇಳಿದರು.
"ನಿಯಂತ್ರಕ ಅವಶ್ಯಕತೆಗಳನ್ನು ಅನುಸರಿಸಲು ಸ್ಪೇಸ್ ಎಕ್ಸ್ ಅಗತ್ಯ ಕ್ರಮಗಳನ್ನು ಕೈಗೊಂಡ ಬಳಿಕ ನಮಗೆ ಸರಿಯೆನಿಸಿದ ನಂತರವೇ ನಾವು ಮಾರ್ಪಾಡನ್ನು ಅನುಮೋದಿಸುತ್ತೇವೆ" ಎಂದು ಅವರು ಹೇಳಿದರು.