ವಾಶಿಂಗ್ಟನ್ (ಅಮೆರಿಕ): ಸೋಶಿಯಲ್ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ ಆಗಿರುವ ಟ್ವಿಟರ್ ಈಗ ಬಳಕೆದಾರರ ಅನುಕೂಲಕ್ಕಾಗಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಿದೆ. ಥ್ರೇಡ್ನಲ್ಲಿರುವ ಯಾವುದೇ ಮೆಸೇಜಿಗೆ ಬಳಕೆದಾರರು ಇನ್ನು ಮುಂದೆ ಇಮೋಜಿಯೊಂದಿಗೆ ಡೈರೆಕ್ಟ್ ಮೆಸೇಜ್ ಕಳುಹಿಸಬಹುದು. ಅಲ್ಲದೆ ಮುಂದಿನ ದಿನಗಳಲ್ಲಿ ಟ್ವಿಟರ್ ವಾಯ್ಸ್ ಮತ್ತು ವೀಡಿಯೊ ಚಾಟ್ ಸೌಲಭ್ಯಗಳನ್ನು ಸಹ ನೀಡಲಿದೆ.
"ಟ್ವಿಟರ್ ಇತ್ತೀಚಿನ ವರ್ಷನ್ ಬಳಸಿ ನೀವು ಥ್ರೆಡ್‌ನಲ್ಲಿ ಯಾವುದೇ ಸಂದೇಶಕ್ಕೆ ಪ್ರತ್ಯುತ್ತರ ನೀಡಬಹುದು (ಇತ್ತೀಚಿನದಲ್ಲ) ಮತ್ತು ಯಾವುದೇ ಎಮೋಜಿ ಪ್ರತಿಕ್ರಿಯೆಯನ್ನು ಬಳಸಬಹುದು. ಎನ್‌ಕ್ರಿಪ್ಟ್ ಮಾಡಿದ DMs V1.0 ನ ನಾಳೆ ಬಿಡುಗಡೆಯಾಗಬಹುದು. ಇದು ಅತ್ಯಾಧುನಿಕವಾಗಿ ಮತ್ತು ವೇಗವಾಗಿ ಬೆಳೆಯಲಿದೆ. ನನ್ನ ತಲೆಗೆ ಗನ್ ಹಿಡಿದರೂ ನಾನು ನಿಮ್ಮ ಡಿಎಂ ಗಳನ್ನು ನೋಡಲು ಸಾಧ್ಯವಾಗದು. ಶೀಘ್ರದಲ್ಲೇ ನಿಮ್ಮ ಹ್ಯಾಂಡಲ್‌ನಿಂದ ಈ ಪ್ಲಾಟ್‌ಫಾರ್ಮ್‌ನಲ್ಲಿರುವ ಯಾರಿಗಾದರೂ ಧ್ವನಿ ಮತ್ತು ವೀಡಿಯೊ ಚಾಟ್ ಮಾಡಲು ಸಾಧ್ಯವಾಗಲಿದೆ. ಹೀಗಾಗಿ ನೀವು ನಿಮ್ಮ ಫೋನ್ ನೀಡದೆಯೇ ಜಗತ್ತಿನಲ್ಲಿರುವ ಯಾರೊಂದಿಗಾದರೂ ಮಾತನಾಡಬಹುದು." ಎಂದು ಎಲೋನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
DM ಸೌಲಭ್ಯವು ಮೇ 11 ರಿಂದ ಸಕ್ರಿಯವಾಗಲಿದೆ ಎಂದು ಮಸ್ಕ್ ಹೇಳಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಬಳಕೆಯಲ್ಲಿಲ್ಲದ ಟ್ವಿಟರ್ ಖಾತೆಗಳನ್ನು ಡಿಲೀಟ್ ಮಾಡುವುದಾಗಿ ನಿನ್ನೆಯಷ್ಟೇ ಮಸ್ಕ್ ಘೋಷಿಸಿದ್ದರು. ನಾವು ಬಳಕೆಯಲ್ಲಿಲ್ಲದ ಟ್ವಿಟರ್ ಖಾತೆಗಳನ್ನು ಡಿಲೀಟ್ ಮಾಡಲಿದ್ದೇವೆ, ಹೀಗಾಗಿ ನಿಮ್ಮ ಫಾಲೋವರ್ಗಳ ಸಂಖ್ಯೆಯಲ್ಲಿ ಕುಸಿತ ಕಾಣಿಸಬಹುದು ಎಂದು ಮಸ್ಕ್ ತಿಳಿಸಿದ್ದಾರೆ.
ಹಲವಾರು ಸೆಲೆಬ್ರಿಟಿಗಳ ಖಾತೆಗೆ ನೀಡಲಾಗಿದ್ದ ಬ್ಲೂ ಟಿಕ್ಗಳನ್ನು ಹಿಂಪಡೆದ ಕಾರಣಕ್ಕೆ ಟ್ವಿಟರ್ ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಹೆಸರಾಂತ ವ್ಯಕ್ತಿಗಳ ಹೆಸರಲ್ಲಿ ಮತ್ತೊಬ್ಬರು ನಕಲಿ ಖಾತೆ ತೆರೆಯದಂತೆ ಮತ್ತು ಸುಳ್ಳು ಸುದ್ದಿ ಹರಡದಂತೆ ತಡೆಗಟ್ಟಲು ಬ್ಲೂ ಟಿಕ್ ಸೌಲಭ್ಯ ಬಹಳೇ ಅನುಕೂಲಕರವಾಗಿತ್ತು. "ಏಪ್ರಿಲ್ 1 ರಿಂದ ನಾವು ನಮ್ಮ ಸಾಂಪ್ರದಾಯಿಕ ವೆರಿಫೈಡ್ ಯೋಜನೆಯನ್ನು ಹಿಂಪಡೆಯಲು ಆರಂಭಿಸಲಿದ್ದೇವೆ ಮತ್ತು ಲೆಗಸಿ ಬ್ಲೂ ಟಿಕ್ ಮಾರ್ಕ್ಗಳನ್ನು ತೆಗೆದುಹಾಕುತ್ತೇವೆ. ಟ್ವಿಟರ್ನಲ್ಲಿ ನಿಮ್ಮ ನೀಲಿ ಚೆಕ್‌ಮಾರ್ಕ್ ಮುಂದುವರಿಸಲು ನೀವು ಟ್ವಿಟರ್ ಬ್ಲೂಗೆ ಗೆ ಸೈನ್ ಅಪ್ ಮಾಡಬಹುದು" ಎಂದು ಟ್ವಿಟರ್ ಮಾರ್ಚ್‌ನಲ್ಲಿ ತಿಳಿಸಿತ್ತು.