ಹೈದರಾಬಾದ್:ಟ್ವಿಟರ್ ಬ್ಲೂಟಿಕ್ ವೇರಿವೈಡ್ ಹೊಂದಿರುವ ಚಂದಾದಾರರೊಂದಿಗೆ ಜಾಹೀರಾತುಗಳ ಆದಾಯವನ್ನು ಹಂಚಿಕೊಳ್ಳಲಾಗುವುದು ಎಂದು ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಘೋಷಿಸಿದ್ದಾರೆ. ಯಾವುದೇ ಕ್ರಿಯೇಟರ್ಗಳ ಥ್ರೆಡ್ ಮೇಲೆ ಕಾಣಿಸಿಕೊಳ್ಳುವ ಜಾಹೀರಾತುಗಳ ಗಳಿಕೆಯ ಭಾಗವನ್ನು ಆ ಕ್ರಿಯೇಟರ್ ಜೊತೆಗೆ ಹಂಚಿಕೊಳ್ಳಲಾಗುವುದು. ಅವರ ಖಾತೆಯು ಟ್ವಿಟರ್ ಬ್ಲೂ ವೆರಿಫೈಡ್ ಚಂದಾದಾರಿಕೆ ಹೊಂದಿರುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಈ ಮೂಲಕ ಹೆಚ್ಚು ಬಳಕೆದಾರರು ಮತ್ತು ಕ್ರಿಯೆಟರ್ಗಳನ್ನು ಚಂದಾದಾರಿಕೆ ಟ್ವಿಟರ್ ಬ್ಲೂ ಸೇವೆಗೆ ಜೊತೆಗೆ ಇತರರನ್ನು ಆಗ್ಗಿಂದಾಗ್ಗೆ ಈ ಫ್ಲಾಟ್ಫಾರ್ಮ್ಗೆ ಬರುವಂತೆ ಪ್ರೋತ್ಸಾಹಿಸಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎನ್ನಲಾಗಿದೆ. ಮಸ್ಕ್ ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಬಳಕೆದಾರರು ತಕ್ಷಣಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಸ್ಕ್ ಅವರ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಸ್ಕ್ಗೆ ಪ್ರಶ್ನೆಗಳ ಸುರಿಮಳೆ: ಇದರಲ್ಲಿ ಒಬ್ಬ ಬಳಕೆದಾರರು, ಯಾವ ರೀತಿ ಟ್ವಿಟರ್ ಮತ್ತು ಕ್ರಿಯೆಟರ್ ನಡುವೆ ಈ ಆದಾಯವನ್ನು ಹಂಚಲಾಗುತ್ತದೆಯಾ ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, ಇದು ಲಾಜಿಸ್ಟಿಕಲಿ ಹೇಗೆ ಕಾಣಲಿದೆ? ಜಾಹೀರಾತು ನಿರ್ವಹಣೆ ಡ್ಯಾಶ್ಬೋರ್ಡ್ ಕ್ರಿಯೆಟರ್ಗೆ ಸಿಗಲಿದೆಯಾ ಎಂದು ಪ್ರಶ್ನಿಸಿದ್ದಾರೆ. ಇದು ದೊಡ್ಡಮಟ್ಟದಾಗಿದೆ. ಆಶಾದಾಯಕವಾಗಿ ಇದು ಹೆಚ್ಚು ಉತ್ತಮ ವಿಷಯವನ್ನು ಪ್ರೋತ್ಸಾಹಿಸುತ್ತದೆ. ಹೆಚ್ಚು ವಿಭಜಿಸುವ ನಾಟಕವಲ್ಲ ಎಂದು ಬಳಕೆದಾರರ ಕಮೆಂಟ್ ಮಾಡಿದ್ದು, ಮತ್ತೊಬ್ಬರು ಇದು ತುಂಬಾ ಇಷ್ಟವಾಗಿದೆ. ತಾವು ಸೃಷ್ಟಿಸಿದ ಜಾಹೀರಾತುಗಳ ಆರ್ಧಿಕ ಪಾಲು ಪಡೆಯಲು ಕ್ರಿಯೆಟರ್ಗಳಿಗೆ ಬೇಕಿದೆ. ಇದು ಸ್ಪಷ್ಟ ಗೆಲುವಾಗಿದೆ ಎಂದಿದ್ದಾರೆ.
ಚಂದಾದಾರಿಕೆ ಫೀಸ್ ಎಷ್ಟು?:ಕಳೆದ ಡಿಸೆಂಬರ್ನಲ್ಲಿ ಟ್ವಿಟರ್ ಬ್ಲೂ ಸೇವೆಯ ವೈಶಿಷ್ಟ್ಯವನ್ನು ಅಪ್ಡೇಟ್ ಮಾಡಿದ್ದಾರೆ. ಇದರ ಚಂದಾದಾರಿಕೆ ಸೇವೆ ಪಡೆದವರಿಗೆ ಸಂಭಾಷಣೆಗಳಲ್ಲಿ ಆದ್ಯತೆಯ ಶ್ರೇಯಾಂಕಗಳ ಸೇವೆಯನ್ನು ಪಡೆಯುತ್ತಿದ್ದಾರೆ. ಜಾಹೀರಾತುದಾರರನ್ನು ಉಳಿಸಿಕೊಳ್ಳಲು ಮತ್ತು ಆದಾಯವನ್ನು ಗಳಿಸುವ ಕ್ರಮವಾಗಿ ಟ್ವಿಟರ್ ಈ 8 ಡಾಲರ್‌ನ ಚಂದಾದಾರಿಕೆ ಯೋಜನೆಯನ್ನು ಹೊರ ತಂದಿತ್ತು. ಚಂದಾದಾರಿಕೆ ಹೊಂದಿರುವ ಬಳಕೆದಾರರು ತಮ್ಮ ಪೇಜ್ನಲ್ಲಿ 1080ಪಿಕ್ಸೆಲ್ ರೆಸ್ಯೂಲೂಷನ್ ಮತ್ತು 2 ಜಿಬಿ ಸೈಜ್ನ 60 ನಿಮಿಷದ ದೊಡ್ಡ ವಿಡಿಯೋವನ್ನು ಹಂಚಿಕೊಳ್ಳಬಹುದಾಗಿದೆ. ಆದರೆ, ಹಂಚಿಕೊಳ್ಳುವ ವಿಡಿಯೋಗಳು ಕಂಪನಿಯ ನಿಯಮಗಳಿಗೆ ಅನುಸಾರವಾಗಿರಬೇಕು ಎಂದು ಟ್ವಿಟರ್ ತಿಳಿಸಿದೆ.
ಇನ್ನು ಟ್ವಿಟರ್ ಬ್ಲೂ ಚಂದಾದಾರಿಕೆಯನ್ನು ನೆರವಾಗಿ ಪಡೆಯಲು ತಿಂಗಳಿಗೆ 8 ಡಾಲರ್ ಅನ್ನು ನೀಡಬೇಕಾಗುತ್ತದೆ. ಗೂಗಲ್ ಪ್ಲೇ ಅಥವಾ ಆ್ಯಪಲ್ ಸ್ಟೋರ್ನಿಂದ ಈ ಸೇವೆಯನ್ನು ಪಡೆದರೆ 11 ಡಾಲರ್ ಅನ್ನು ಮಾಸಿಕ ವಂತಿಕೆ ನೀಡಬೇಕು. ವಾರ್ಷಿಕ ಚಂದಾದಾರಿಕೆಯನ್ನು ನೇರವಾಗಿ ಪಡೆದರ 84 ಡಾಲರ್ ಅನ್ನು ನೀಡಬೇಕಿದೆ.
ಈ ಹಿಂದೆ ರಾಜಕೀಯ ನಾಯಕರು ಮತ್ತು ಪ್ರಮುಖ ವ್ಯಕ್ತಿಗಳು, ಸಿನಿಮಾ ಸೆಲೆಬ್ರಿಟಿಗಳು, ಪತ್ರಕರ್ತರು ಮತ್ತು ಸಾರ್ವಜನಿಕ ಖ್ಯಾತಿ ಹೊಂದಿರುವವರಿಗೆ ಬ್ಲೂ ಟಿಕ್ ಮಾರ್ಕ್ ಉಚಿತವಾಗಿ ನೀಡಲಾಗುತ್ತಿತ್ತು. ಟ್ವಿಟರ್ ಒಡೆತನವನ್ನು ಮಸ್ಕ್ ಖರೀದಿಸಿದ ಬಳಿಕ ಯಾರಾದರೂ ಕೂಡ ಈ ಬ್ಲೂ ಟಿಕ್ ಮಾರ್ಕ್ ಪಡೆಯಬಹುದಾಗಿದೆ. ಆದರೆ, ಇದಕ್ಕೆ ಚಂದಾದಾರಿಕೆ ಪಾವತಿಸುವುದು ಕಡ್ಡಾಯವಾಗಿದೆ. ಟ್ವಿಟರ್ ಖರೀದಿ ಬಳಿಕ ಎಲೋನ್ ಮಸ್ಕ್ ವಿವಿಧ ನಿರ್ಧಾರಗಳನ್ನು ಪ್ರಕಟಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಫೇಸ್ಬುಕ್, ಇನ್ಸ್ಟಾಗ್ರಾಂನಿಂದ ನಿಯಮಬಾಹಿರ ವಿಷಯಗಳನ್ನು ತೆಗೆದು ಹಾಕಿದ ಮೆಟಾ