ಕರ್ನಾಟಕ

karnataka

ಕೋವಿಡ್ ಫೈಟ್​: ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಹೊಸ ವಿನ್ಯಾಸದೊಂದಿಗೆ ಟ್ವಿಟರ್​

By

Published : May 13, 2021, 5:21 PM IST

ದೇಶದ ಕೆಲವೊಂದು ರಾಜ್ಯಗಳಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದ್ದು, ಅಂತಹ ರಾಜ್ಯಗಳ ಸಹಾಯಕ್ಕೆ ಇದೀಗ ಟ್ವಿಟರ್​ ಮುಂದಾಗಿದೆ.

Twitter
Twitter

ನವದೆಹಲಿ:ಮೈಕ್ರೋ ಬ್ಲಾಗಿಂಗ್​ ಪ್ಲಾಟ್​ಫಾರ್ಮ್​​ ಟ್ವಿಟರ್​ ಇದೀಗ ಹೊಸ ವಿನ್ಯಾಸದೊಂದಿಗೆ ಪುಟ ರಚನೆ ಮಾಡಿ, ಕೆಲವೊಂದು ರಾಜ್ಯಗಳಲ್ಲಿ ಕಾಣಿಸಿಕೊಳ್ಳಲಿದೆ.

ಡೆಡ್ಲಿ ವೈರಸ್ ಕೊರೊನಾದಿಂದ ಹೆಚ್ಚು ಹಾನಿಗೊಳಗಾಗಿರುವ ಛತ್ತೀಸ್​ಗಢ್, ದೆಹಲಿ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್​​ಗಳಲ್ಲಿ ಈ ಟ್ವಿಟರ್​ ಕಾರ್ಯ ನಿರ್ವಹಿಸುತ್ತಿದೆ. ಕೋವಿಡ್​ಗೋಸ್ಕರ ಸಹಾಯ ಮಾಡುವ ಇತ್ತೀಚಿನ ಚಿತ್ರಗಳು ಮುಖ ಪುಟದಲ್ಲಿದ್ದು, ಈಗಾಗಲೇ ಆಯಾ ರಾಜ್ಯಗಳಲ್ಲಿ ಬಿಡುಗಡೆಯಾಗಿದೆ ಎಂದು ಟ್ವಿಟರ್​ ಹೇಳಿಕೊಂಡಿದೆ. ಈ ಪುಟಗಳಲ್ಲಿ ದ್ವಿಭಾಷಾ ಟ್ವೀಟ್​​ಗಳಿದ್ದು, ಇಂಗ್ಲಿಷ್​ ಮತ್ತು ಅಲ್ಲಿನ ಅಧಿಕೃತ ಸ್ಥಳೀಯ ಭಾಷೆ ಕಾಣಸಿಗಲಿದೆ.

ಈ ಪುಟಗಳಲ್ಲಿ ಇತ್ತೀಚಿನ ಅತ್ಯಂತ ವಿಶ್ವಾಸಾರ್ಹ ಸುದ್ದಿ ಟೈಮ್​ಲೈನ್​ನಲ್ಲಿ ಬಿತ್ತರಗೊಳ್ಳಲಿದ್ದು, ಅದಕ್ಕಾಗಿ ಮಾಧ್ಯಮ ಸಂಸ್ಥೆ ಹಾಗೂ ಪತ್ರಕರ್ತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಮುಖವಾಗಿ ವೈದ್ಯಕೀಯ ಸೇವೆ, ಆಮ್ಲಜನಕ, ಔಷಧಗಳು, ಅಹಾರ ಪೂರೈಕೆ ಬಗ್ಗೆ ಮಾಹಿತಿ ಸಹ ಇಲ್ಲಿ ಲಭ್ಯವಾಗಲಿದೆ.

ಇದನ್ನೂ ಓದಿ: ಕೊಡದೊಳಗೆ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಬಾಲಕ.. ಸತತ 2 ಗಂಟೆಗಳ ಕಾಲ ನಡೀತು ರಕ್ಷಣಾ ಕಾರ್ಯ

ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಅದರಿಂದ ಹೊರ ಬರಲು ಹರಸಾಹಸ ಪಡುತ್ತಿದೆ. ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಕೈಜೋಡಿಸಿರುವ ಟ್ವಿಟರ್​ 110 ಕೋಟಿ ರೂ. ದೇಣಿಗೆ ಸಹ ನೀಡಿದೆ.

ABOUT THE AUTHOR

...view details