ನವದೆಹಲಿ : ತನ್ನ ಪೇಡ್ ಬ್ಲೂ ಟಿಕ್ ಬಳಕೆದಾರರಿಗೆ ಟ್ವಿಟರ್ 10 ಸಾವಿರ ಅಕ್ಷರಗಳಷ್ಟು ಉದ್ದನೆಯ ಟ್ವೀಟ್ ಮಾಡುವ ಸೌಲಭ್ಯವನ್ನು ನೀಡುವುದಾಗಿ ಘೋಷಿಸಿದೆ. ಏಪ್ರಿಲ್ 20ರ ನಂತರ ಸಾಂಪ್ರದಾಯಿಕವಾಗಿ ಬ್ಲೂ ಟಿಕ್ ನೀಡಲಾದ ಎಲ್ಲ ಅಕೌಂಟ್ಗಳ ಬ್ಲೂ ಟಿಕ್ಗಳನ್ನು ತೆಗೆದುಹಾಕುವುದಾಗಿ ಟ್ವಿಟರ್ ಈಗಾಗಲೇ ತಿಳಿಸಿದೆ. ಅದು ಜಾರಿಗೆ ಬರುವ ಮುನ್ನವೇ ಪೇಡ್ ಗ್ರಾಹಕರಿಗೆ ಟ್ವಿಟರ್ 10 ಸಾವಿರ ಅಕ್ಷರಗಳ ಟ್ವೀಟ್ ಮಾಡುವ ಸೌಲಭ್ಯವನ್ನು ಪರಿಚಯಿಸಿದೆ. ಟ್ವಿಟರ್ ಈಗ 10,000 ಅಕ್ಷರಗಳ ಉದ್ದದ ಟ್ವೀಟ್‌ಗಳನ್ನು ಬೆಂಬಲಿಸುತ್ತದೆ. ದಪ್ಪ ಮತ್ತು ಇಟಾಲಿಕ್ ಪಠ್ಯ ಫಾರ್ಮ್ಯಾಟಿಂಗ್‌ನೊಂದಿಗೆ ಇಷ್ಟುದ್ದದ ಟ್ವೀಟ್ ಮಾಡಬಹುದು ಎಂದು ಕಂಪನಿ ಮಾಹಿತಿ ನೀಡಿದೆ. ಟ್ವಿಟರ್ ಫೆಬ್ರವರಿಯಲ್ಲಿ ಬ್ಲೂ ಟಿಕ್ ಗ್ರಾಹಕರಿಗೆ 4,000 ಅಕ್ಷರ ಉದ್ದದ ಟ್ವೀಟ್‌ಗಳನ್ನು ಪರಿಚಯಿಸಿತ್ತು.
ಈ ಹೊಸ ವೈಶಿಷ್ಟ್ಯಗಳನ್ನು ಬಳಸಲು ಟ್ವಿಟರ್ ಬ್ಲೂ (Twitter Blue)ಗೆ ಸೈನ್ ಅಪ್ ಮಾಡಿ ಮತ್ತು ಟ್ವಿಟರ್ನಲ್ಲಿ ನೇರವಾಗಿ ಆದಾಯವನ್ನು ಗಳಿಸಲು ನಿಮ್ಮ ಖಾತೆಯಲ್ಲಿ ಚಂದಾದಾರಿಕೆಗಳನ್ನು ಸಕ್ರಿಯಗೊಳಿಸಿ. ಸೆಟ್ಟಿಂಗ್‌ಗಳಲ್ಲಿ 'ಹಣಗಳಿಕೆ' (Monetization) ಅನ್ನು ಟ್ಯಾಪ್ ಮಾಡಿ ಎಂದು ಕಂಪನಿ ಹೇಳಿದೆ. ಮಸ್ಕ್ ಅವರು ಗುರುವಾರ ಪ್ಲಾಟ್‌ಫಾರ್ಮ್‌ನಲ್ಲಿ 'ಚಂದಾದಾರಿಕೆಗಳನ್ನು' ಸಕ್ರಿಯಗೊಳಿಸಲಾಗಿದೆ ಎಂದು ಘೋಷಿಸಿದ್ದರು. ಇದು ಬಳಕೆದಾರರು ತಮ್ಮ ಅತಿ ಹೆಚ್ಚು ಸಕ್ರಿಯ ಫಾಲೋವರ್ಗಳ ಸಹಾಯದಿಂದ ಅವರು ಟ್ವಿಟರ್ ನಿಂದ ಹಣವನ್ನು ಗಳಿಸಲು ಸಹಾಯ ಮಾಡುವ ಮಾರ್ಗವಾಗಿದೆ.
ನಾವು ದೊಡ್ಡ ಪ್ರಮಾಣದ ಕ್ರಿಯೇಟರ್ ಸಬ್ಸ್ಕ್ರಿಪ್ಷನ್ ಅನ್ನು ಪರಿಚಯಿಸುತ್ತಿದ್ದೇವೆ. ಇದು ಉದ್ದನೆಯ ಟೆಕ್ಸ್ಟ್, ಚಿತ್ರ ಮತ್ತು ವಿಡಿಯೋಗಳನ್ನು ಸಪೋರ್ಟ್ ಮಾಡುತ್ತದೆ ಎಂದು ಮಸ್ಕ್ ಟ್ವೀಟ್ ಮಾಡಿದ್ದರು. ಮತ್ತೊಂದು ಸಬ್ಸ್ಕ್ರಿಪ್ಷನ್ ಆಧರಿತ ನ್ಯೂಸ್ ಲೆಟರ್ ಆ್ಯಪ್ ಆಗಿರುವ ಸಬ್ ಸ್ಟ್ಯಾಕ್ ಜೊತೆಗೆ ಟ್ವಿಟರ್ ತಿಕ್ಕಾಟ ಮುಂದುವರೆಸಿದೆ. ಸಬ್ ಸ್ಟ್ಯಾಕ್ ಎಂಬ ಶಬ್ದ ಇರುವ ಟ್ವೀಟ್‌ಗಳನ್ನು ಲೈಕ್ ಮಾಡುವುದು ಅಥವಾ ರಿಟ್ವೀಟ್ ಮಾಡುವುದನ್ನು ಟ್ವಿಟರ್ ನಿರ್ಬಂಧಿಸಿದ ಕ್ರಮಕ್ಕೆ ಸಬ್ ಸ್ಟ್ಯಾಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಟ್ವಿಟರ್ನಲ್ಲಿನ ಪರಿಸ್ಥಿತಿ ತುಂಬಾ ನಿರಾಶಾದಾಯಕವಾಗಿದೆ ಎಂದು ಸಬ್ ಸ್ಟ್ಯಾಕ್ ಹೇಳಿತ್ತು. ಕಂಪನಿಯ ಸಿಇಒ ಕ್ರಿಸ್ ಬೆಸ್ಟ್ ಅವರು ಸಬ್‌ಸ್ಟ್ಯಾಕ್ ನೋಟ್ಸ್‌ನಲ್ಲಿ ಪೋಸ್ಟ್ ಮಾಡಿ ಮಸ್ಕ್‌ಗೆ ಪ್ರತಿಕ್ರಿಯಿಸಿದ್ದರು.