ಜಗತ್ತಿನಲ್ಲಿಯೇ ಅತಿಹೆಚ್ಚು ಬಳಕೆಯಲ್ಲಿರುವ ಮೈಕ್ರೋಬ್ಲಾಗಿಂಗ್ ಆದ ಟ್ವಿಟರ್ ಹೊಸ ಫೀಚರ್ವೊಂದನ್ನು ಪರಿಚಯಿಸುತ್ತಿದೆ. ಟ್ವಿಟರ್ ಅನ್ನು ಇನ್ನಷ್ಟು ಬಳಕೆ ಸ್ನೇಹಿ ಮಾಡಲು ಎಡಿಟ್(ಸಂಪಾದನೆ) ಬಟನ್ ಅವಕಾಶ ಕಲ್ಪಿಸುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿ ತಿಳಿಸಿರುವ ಕಂಪನಿ, ಬಳಕೆದಾರರ ಮನವಿಯ ಮೇರೆಗೆ ಟ್ವಿಟರ್ನಲ್ಲಿ ಎಡಿಟ್ ಬಟನ್ ಆಪ್ಷನ್ ಅನ್ನು ನೀಡಲು ಪರೀಕ್ಷೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಅದು ಬಳಕೆದಾರರಿಗೆ ಸಿಗಲಿದೆ ಎಂದು ತಿಳಿಸಿದೆ.
ಪಾವತಿಸಿದವರಿಗೆ ಎಡಿಟ್ ಬಟನ್ ಫೀಚರ್:ಇನ್ನು ಟ್ವಿಟರ್ ಪರಿಚಯಿಸುತ್ತಿರುವ ಎಡಿಟ್ ಬಟನ್ ಎಲ್ಲ ಬಳಕೆದಾರರಿಗೆ ಮುಕ್ತವಾಗಿ ಲಭ್ಯವಿರುವುದಿಲ್ಲ ಎಂಬುದು ಗೊತ್ತಾಗಿದೆ. ಈ ಬಟನ್ ಬೇಕಾದಲ್ಲಿ ಹಣ ಪಾವತಿಸಿ ಚಂದಾದಾರಿಕೆ ಪಡೆಯಬೇಕು. ಆರಂಭದಲ್ಲಿ ಇದನ್ನು ಬ್ಲೂ ಚಂದಾದಾರರಿಗೆ ಮಾತ್ರ ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.
ಒಮ್ಮೆ ಟ್ವೀಟ್ ಮಾಡಿದ್ದನ್ನು ಮತ್ತೆ ಎಡಿಟ್ ಮಾಡಲು ನಮ್ಮ ತಂಡ ಈ ಬಗ್ಗೆ ಪರೀಕ್ಷೆ ನಡೆಸುತ್ತಿದೆ. ಬಟನ್ ಅನ್ನು ಪರಿಚಯಿಸುವ ಕಾರ್ಯ ಪ್ರಗತಿಯಲ್ಲಿದೆ. ಇದನ್ನು ಮುಂದಿನ ವಾರಗಳಲ್ಲಿ ಬ್ಲೂ ಚಂದಾದಾರರಿಗೆ ವಿಸ್ತರಿಸಲಾಗುವುದು. ಈ ಕುರಿತು ಅಪ್‌ಡೇಟ್ ನೀಡಲಾಗುವುದು ಎಂದು ಕಂಪನಿ ಟ್ವೀಟ್ ಮಾಡಿದೆ.
ಎಡಿಟ್ ಬಟನ್ನಿಂದ ಏನು ಲಾಭ:ಸದ್ಯ ಟ್ವಿಟರ್ನಲ್ಲಿ ನಾವು ಯಾವುದಾದರೂ ಪೋಸ್ಟ್ ಮಾಡಿದಾಗ ಅದರಲ್ಲಿ ಏನಾದರೂ ದೋಷವಿದ್ದಲ್ಲಿ ಮತ್ತೆ ಅದನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. ಅಕ್ಷರ ದೋಷವಿದ್ದರೂ ಬದಲಿಸುವ ಅವಕಾಶವಿಲ್ಲ. ಇದರಿಂದ ಕೆಲವೊಮ್ಮೆ ಆ ಟ್ವೀಟ್ ಅನ್ನೇ ಡಿಲಿಟ್ ಮಾಡಬೇಕಾದ ಅನಿವಾರ್ಯ ಇರುತ್ತದೆ.