ಸ್ಯಾನ್ ಫ್ರಾನ್ಸಿಸ್ಕೋ(ಯುಎಸ್): ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಆದ ಟ್ವಿಟರ್ ತನ್ನ ಬ್ಲೂ ಟಿಕ್ ಸೇವೆಯನ್ನು ವಿಸ್ತರಿಸಿದೆ. ಮಾಸಿಕ 8 ಡಾಲರ್ ಪಾವತಿಸಿದವರಿಗೆ ಅಂತರ್ಜಾಲದ ಹುಡುಕಾಟದಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.
ಈ ಹಿಂದೆ ಟ್ವೀಟ್ ಮಾಡಿದ್ದ ಕಂಪನಿ ಸಿಇಒ ಎಲಾನ್ ಮಸ್ಕ್, ಮಾಸಿಕವಾಗಿ ಹಣ ಪಾವತಿಸಿದ ಖಾತೆಗಳಿಗೆ ವಿಶೇಷ ವೈಶಿಷ್ಟ್ಯಗಳನ್ನುಕಲ್ಪಿಸಲಾಗುವುದು. ವೆಬ್ ಹುಡುಕಾಟದ ವೇಳೆ ಚಂದಾದಾರರಿಗೆ ವಿಶೇಷ ಪ್ರಾಸಸ್ತ್ಯ ನೀಡಲಾಗುವುದಲ್ಲದೇ ಈಜಿಯಾಗಿ ಸರ್ಚ್ ಮಾಡಲು ಅನುಕೂಲ ಮಾಡಿಕೊಡಲಾಗುವುದು ಎಂದು ಮಸ್ಕ್ ಹೇಳಿದ್ದರು. ಅದರಂತೆ ಕಂಪನಿ ಈಗ ತನ್ನ ನಿರ್ಧಾರವನ್ನು ಘೋಷಿಸಿದೆ.