ಕರ್ನಾಟಕ

karnataka

ETV Bharat / science-and-technology

ಟ್ವಿಟರ್​ ಬ್ಲೂ ಮತ್ತೆ ಜಾರಿ: ಖಾತೆಗಳ ಸಾಂಪ್ರದಾಯಿಕ ಬ್ಲೂ ಟಿಕ್ ರದ್ದು​ - ಈಟಿವಿ ಭಾರತ ಕನ್ನಡ

ಬ್ಲೂ ಬ್ಯಾಡ್ಜ್​ಗೆ ಸಬ್​ಸ್ಕ್ರಿಪ್ಷನ್ ಪಡೆಯಬೇಕಾದರೆ ನಿಮ್ಮ ಟ್ವಿಟರ್ ಖಾತೆ ಕನಿಷ್ಠ 90 ದಿನ ಹಳೆಯದಾಗಿರಬೇಕು ಮತ್ತು ವೆರಿಫೈಡ್ ಫೋನ್ ನಂಬರ್ ಹೊಂದಿರಬೇಕು. ಬೇಸಿಕ್ ಬ್ಲೂ ಸಬ್​ಸ್ಕ್ರಿಪ್ಷನ್ ಪಡೆದವರಿಗೆ ಅರ್ಧದಷ್ಟು ಸಂಖ್ಯೆಯ ಜಾಹೀರಾತು ಕಾಣಿಸುತ್ತವೆ. ಜಾಹೀರಾತು ಇಲ್ಲದ ಹಂತವನ್ನು ಮುಂದಿನ ವರ್ಷ ಪರಿಚಯಿಸಲಿದ್ದೇವೆ ಎಂದು ಕಂಪನಿ ಹೇಳಿದೆ.

ಟ್ವಿಟರ್​ ಬ್ಲೂ ಮತ್ತೆ ಜಾರಿ: ಖಾತೆಗಳ ಸಾಂಪ್ರದಾಯಿಕ ಬ್ಲೂ ಟಿಕ್ ರದ್ದು​
Twitter Blue Re-Enforced: Traditional Blue Tick Cancelled

By

Published : Dec 13, 2022, 1:56 PM IST

ನವದೆಹಲಿ: ವೆರಿಫಿಕೇಶನ್ ಮೂಲಕ ಟ್ವಿಟರ್​ ಬ್ಲೂ ಸಬ್​ಸ್ಕ್ರಿಪ್ಷನ್ ನೀಡುವ ವ್ಯವಸ್ಥೆಯನ್ನು ಮಂಗಳವಾರ ರಿ-ಲಾಂಚ್ ಮಾಡಲಾಗಿದ್ದು, ಇದಕ್ಕಾಗಿ ಸೈನಪ್ ಮಾಡಲು ಫೋನ್ ನಂಬರ್ ವೆರಿಫೈ ಕಡ್ಡಾಯವಾಗಿದೆ. ಸಾಂಪ್ರದಾಯಿಕವಾಗಿ ನೀಡಲಾದ ಎಲ್ಲ ಟ್ವಿಟರ್ ಬ್ಲೂ ಬ್ಯಾಡ್ಜ್​​ಗಳನ್ನು ಮುಂದಿನ ತಿಂಗಳಷ್ಟೊತ್ತಿಗೆ ತೆಗೆದು ಹಾಕಲಾಗುವುದು ಎಂದು ಎಲೋನ್ ಮಸ್ಕ್​ ಈ ಮಧ್ಯೆ ಘೋಷಿಸಿದ್ದಾರೆ.

ವೆರಿಫಿಕೇಶನ್​ನೊಂದಿಗೆ ಬ್ಲೂ ಸಬ್​ಸ್ಕ್ರಿಪ್ಷನ್ ಪಡೆಯಲು ಪ್ರತಿ ತಿಂಗಳಿಗೆ ಆ್ಯಂಡ್ರಾಯ್ಡ್​ ಬಳಕೆದಾರರು 11 ಡಾಲರ್ ಮತ್ತು ಆ್ಯಪಲ್ ಬಳಕೆದಾರರು 11 ಡಾಲರ್ ಶುಲ್ಕ ನೀಡಬೇಕಿದೆ. ​ಇಂದಿನಿಂದ ಆರಂಭಗೊಂಡು, ನೀವು ನಿಮ್ಮ ಖಾತೆಗೆ ಸಬ್​ಸ್ಕ್ರಿಪ್ಷನ್ ಪಡೆದಾಗ ಎಡಿಟ್​ ಟ್ವೀಟ್​, 1080p ವಿಡಿಯೋ ಅಪ್ಲೋಡ್, ರೀಡರ್ ಮೋಡ್ ಮತ್ತು ಬ್ಲೂ ಚೆಕ್ ಮಾರ್ಕ್ ಸೇರಿದಂತೆ ಸಬ್​ ಸ್ಕ್ರೈಬರ್ ಓನ್ಲಿ ಫೀಚರ್​ಗಳು ನಿಮಗೆ ಸಿಗಲಿವೆ.

ಅಲ್ಲದೇ ಬ್ಲೂ ಚೆಕ್​ ಮಾರ್ಕ್ ಇರುವ ಚಂದಾದಾರರು ಸರ್ಚ್​ ರ್‍ಯಾಂಕಿಂಗ್​, ಮೆನ್ಷನ್ ಮತ್ತು ರಿಪ್ಲೈಗಳಲ್ಲಿ ಆದ್ಯತೆ ಪಡೆಯಲಿದ್ದಾರೆ ಮತ್ತು ಸ್ಕ್ಯಾಮ್​ ಮತ್ತು ಸ್ಪ್ಯಾಮ್​ಗಲಲ್ಲಿ ಕಡಿಮೆ ವಿಸಿಬಿಲಿಟಿ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ಬ್ಲೂ ಬ್ಯಾಡ್ಜ್​ಗೆ ಸಬ್​ಸ್ಕ್ರಿಪ್ಷನ್ ಪಡೆಯಬೇಕಾದರೆ ನಿಮ್ಮ ಟ್ವಿಟರ್ ಖಾತೆ ಕನಿಷ್ಠ 90 ದಿನ ಹಳೆಯದಾಗಿರಬೇಕು ಮತ್ತು ವೆರಿಫೈಡ್ ಫೋನ್ ನಂಬರ್ ಹೊಂದಿರಬೇಕು. ಬೇಸಿಕ್ ಬ್ಲೂ ಸಬ್​ಸ್ಕ್ರಿಪ್ಷನ್ ಪಡೆದವರಿಗೆ ಅರ್ಧದಷ್ಟು ಸಂಖ್ಯೆಯ ಜಾಹೀರಾತು ಕಾಣಿಸುತ್ತವೆ. ಜಾಹೀರಾತು ಇಲ್ಲದ ಹಂತವನ್ನು ಮುಂದಿನ ವರ್ಷ ಪರಿಚಯಿಸಲಿದ್ದೇವೆ ಎಂದು ಕಂಪನಿ ಹೇಳಿದೆ.

ಚಂದಾದಾರರು ತಮ್ಮ ಹ್ಯಾಂಡಲ್, ಡಿಸ್‌ಪ್ಲೇ ಹೆಸರು ಅಥವಾ ಪ್ರೊಫೈಲ್ ಫೋಟೋ ಬದಲಾಯಿಸಲು ಸಾಧ್ಯವಾಗಲಿದೆ. ಆದರೆ, ಅವರು ಹಾಗೆ ಮಾಡಿದಲ್ಲಿ, ಅವರ ಖಾತೆಯನ್ನು ಮತ್ತೊಮ್ಮೆ ಪರಿಶೀಲಿಸುವವರೆಗೆ ಅವರು ಬ್ಲೂ ಚೆಕ್‌ಮಾರ್ಕ್ ಅನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳುತ್ತಾರೆ ಎಂದು ಟ್ವಿಟರ್ ಹೇಳಿದೆ.

ಮಸ್ಕ್ ಕಳೆದ ತಿಂಗಳು ವೆರಿಫಿಕೇಶನ್​ನೊಂದಿಗೆ ಬ್ಲೂ ಚಂದಾದಾರಿಕೆ ಯೋಜನೆಯನ್ನು ಪ್ರಾರಂಭಿಸಿದ್ದರು. ಆದರೆ, ನಂತರ ಬ್ರಾಂಡ್‌ಗಳು ಮತ್ತು ಸೆಲೆಬ್ರಿಟಿಗಳ ಹೆಸರಲ್ಲಿ ಹಲವಾರು ನಕಲಿ ಖಾತೆಗಳು ಕಾಣಿಸಿಕೊಂಡಿದ್ದರಿಂದ ಭಾರಿ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ಮಸ್ಕ್​ ಆಗ ಈ ಯೋಜನೆಯನ್ನು ಮುಂದೂಡಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ 'ವೈಫ್​ ಗಿವಿಂಗ್​' ದಂಧೆಗೆ ಟ್ವಿಟರ್ ಮೂಲಕ ಆಹ್ವಾನ; ಪತ್ನಿಯ LIVE ವಿಡಿಯೋ ಮಾಡಿ ಶೇರ್​ ಮಾಡ್ತಿದ್ದ ಪತಿ!

ABOUT THE AUTHOR

...view details