ಲಂಡನ್(ಇಂಗ್ಲೆಂಡ್): ಕೊರೊನಾ ಸೋಂಕಿತರ ಹೆಚ್ಚಳ ತಡೆಯಲು ಮತ್ತು ಅದರಿಂದಾಗುವ ಸಾವಿನ ಪ್ರಮಾಣ ಕಡಿಮೆ ಮಾಡಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಬಹುತೇಕ ರಾಷ್ಟ್ರಗಳು ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸುತ್ತಿವೆ.
ಇತ್ತೀಚಿಗೆ ಪ್ರಕಟವಾದ ಅಧ್ಯಯನವೊಂದು ಹೊಸ ವಿಚಾರವನ್ನು ಬೆಳಕಿಗೆ ತಂದಿದ್ದು, ಪರಸ್ಪರ ನಂಬಿಕೆಯಿರುವ ಜನರಲ್ಲಿ, ಸಮಾಜಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಮತ್ತು ಸಾವಿನ ಪ್ರಮಾಣ ಹೆಚ್ಚಿದೆಯಂತೆ. ಹೌದು.. ಜನರಲ್ಲಿನ ಪರಸ್ಪರ ನಂಬಿಕೆಯೇ ಸೋಂಕು ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ ('Scientific Reports Journal) ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ವರದಿಯೊಂದು ಅಭಿಪ್ರಾಯಪಟ್ಟಿದೆ.
ಒಂದು ಪ್ರದೇಶದಲ್ಲಿ ಅಥವಾ ಒಂದು ದೇಶದಲ್ಲಿ ಕನಿಷ್ಠ ಶೇಕಡಾ 40ರಷ್ಟು ಜನರು 'ಹೌದು, ನಾವು ಸಮಾಜದಲ್ಲ ನಂಬಿಕೆಯಿಡುತ್ತೇವೆ' ಎಂಬ ನಂಬಿಕೆ ಇಟ್ಟುಕೊಂಡಿದ್ದೇ ಆದಲ್ಲಿ, ಆ ದೇಶದ ಅಥವಾ ಸಮುದಾಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತದೆ. ಕೊರೊನಾ ಸಂಬಂಧಿ ಸಾವುಗಳನ್ನು ಕಡಿಮೆ ಮಾಡಬಹುದು ಎಂಬುದು ವರದಿಯಲ್ಲಿರುವ ಮುಖ್ಯಾಂಶ. 2020ರ ಅವಧಿಯಲ್ಲಿ ಈ ನಂಬಿಕೆ ಸಾಕಷ್ಟು ರಾಷ್ಟ್ರಗಳಲ್ಲಿ ಸೋಂಕು ಕಡಿಮೆ ಮಾಡಲು ಕಾರಣವಾಗಿತ್ತು ಎಂಬುದು ವರದಿಯಲ್ಲಿರುವ ಉಲ್ಲೇಖ.
ವರದಿ ಪ್ರಕಾರ ಇಂಗ್ಲೆಂಡ್ನ ಸಮುದಾಯಗಳಲ್ಲಿ ಶೇಕಡಾ 40 ಅಥವಾ 40ಕ್ಕಿಂತ ಕಡಿಮೆ ನಂಬಿಕೆ ಇದೆ. ಡೆನ್ಮಾರ್ಕ್, ನಾರ್ವೆ ಮುಂತಾದ ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳ ಸಮಾಜಗಳಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಪರಸ್ಪರ ನಂಬಿಕೆಯಿದೆ. ಚೀನಾದ ಸಮುದಾಯಗಳಲ್ಲಿ ನಂಬಿಕೆಯ ಪ್ರಮಾಣ ಹೆಚ್ಚಿದೆ ಎಂದು ವರದಿ ಹೇಳಿದೆ.