ನವದೆಹಲಿ: ಇನ್ಸ್ಟಾಗ್ರಾಂ ಅಪ್ಲಿಕೇಶನ್ ಬಳಕೆದಾರರು ಇನ್ಸ್ಟಾಗ್ರಾಂ ವೀಕ್ಷಣೆ ಮಾಡುವ ಅವಧಿಯಲ್ಲಿ ಶೇ 24 ರಷ್ಟು ಹೆಚ್ಚಳವಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿತ ವೀಡಿಯೊ ಶಿಫಾರಸುಗಳ ಕಾರಣದಿಂದ ಬಳಕೆದಾರರು ಹೆಚ್ಚಿನ ಸಮಯ ಇನ್ಸ್ಟಾಗ್ರಾಂ ನೋಡುತ್ತಿದ್ದಾರೆ ಎಂದು ಕಂಪನಿಯ ಸಿಇಓ ಮಾರ್ಕ್ ಜಕರ್ಬರ್ಗ್ ಹೇಳಿದ್ದಾರೆ. ಏತನ್ಮಧ್ಯೆ ಇನ್ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಎರಡೂ ಅಪ್ಲಿಕೇಶನ್ಗಳಲ್ಲಿ ರೀಲ್ಸ್ ಮಾದರಿಯ ವೀಡಿಯೊಗಳ ವೀಕ್ಷಣೆಯ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
ರೀಲ್ಸ್ಗಳು ಇತ್ತೀಚಿನ ದಿನಗಳಲ್ಲಿ ಜನರಿಗೆ ಹೆಚ್ಚಾಗಿ ಆಪ್ತವಾಗುತ್ತಿವೆ. ಪ್ರತಿದಿನ ಬಳಕೆದಾರರು 2 ಬಿಲಿಯನ್ ಸಂಖ್ಯೆಯಷ್ಟು ರೀಲ್ಗಳನ್ನು ರಿ-ಶೇರ್ ಮಾಡುತ್ತಿದ್ದಾರೆ. ಹೀಗೆ ರಿ-ಶೇರ್ ಮಾಡುವ ಪ್ರಮಾಣ ಕಳೆದ ಆರು ತಿಂಗಳ ಅವಧಿಯಲ್ಲಿ ದುಪ್ಪಟ್ಟಾಗಿದೆ. ರೀಲ್ಸ್ಗಳ ಕಾರಣದಿಂದ ಬಳಕೆದಾರರು ಅಪ್ಲಿಕೇಶನ್ಗಳನ್ನು ನೋಡುತ್ತ ಕಳೆಯುವ ಒಟ್ಟಾರೆ ಅವಧಿ ಹೆಚ್ಚಾಗಿದೆ. ಶಾರ್ಟ್ ರೀಲ್ಸ್ ವಿಭಾಗದಲ್ಲಿ ಕೂಡ ನಾವು ನಮ್ಮ ಪಾಲು ಪಡೆದುಕೊಳ್ಳುತ್ತಿದ್ದೇವೆ ಎಂದು ಜಕರ್ಬರ್ಗ್ ತಿಳಿಸಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಾರಣದಿಂದ ಕಂಪನಿಯ ಆದಾಯ ಸುಧಾರಿಸುತ್ತಿದೆ ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ರೀಲ್ಸ್ ಹಣಗಳಿಕೆಯ ದಕ್ಷತೆಯು ಇನ್ಸ್ಟಾಗ್ರಾಂ ನಲ್ಲಿ ಶೇಕಡಾ 30 ಕ್ಕಿಂತ ಹೆಚ್ಚಾಗಿದೆ ಮತ್ತು ಫೇಸ್ಬುಕ್ನಲ್ಲಿ ಶೇಕಡಾ 40 ಕ್ಕಿಂತ ಹೆಚ್ಚಿದೆ ಎಂದು ಅವರು ಘೋಷಿಸಿದರು.
ಬಳಕೆದಾರರಿಗೆ ಅವರ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಸದಸ್ಯರ ಕಂಟೆಂಟ್ ಅನ್ನು ತೋರಿಸುವುದರ ಹೊರತಾಗಿ, ಪ್ರಸ್ತುತ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ಬಳಕೆದಾರರು ಫಾಲೋ ಮಾಡದ ಪೀಪಲ್ಸ್, ಗ್ರೂಪ್ಸ್ ಮತ್ತು ಖಾತೆಗಳ ಶೇ 20 ಕ್ಕೂ ಹೆಚ್ಚು ಪ್ರಮಾಣದ ಕಂಟೆಂಟ್ ಫೀಡ್ ಅನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತೋರಿಸುತ್ತಿದೆ. ಒಟ್ಟಾರೆಯಾಗಿ ಸಂಪೂರ್ಣ ಇನ್ಸ್ಟಾಗ್ರಾಂ ನಲ್ಲಿ ಇದರ ಪ್ರಮಾಣ ಶೇ 40 ರಷ್ಟಾಗಿದೆ ಎಂದು ಜಕರ್ಬರ್ಗ ಮಾಹಿತಿ ನೀಡಿದರು.