ಕರ್ನಾಟಕ

karnataka

ETV Bharat / science-and-technology

ಸುನೀಲ್ ಮಿತ್ತಲ್ ಭೇಟಿಯಾದ ಟಿಮ್ ಕುಕ್: ಸಾಫ್ಟವೇರ್ ಎಂಜಿನಿಯರುಗಳೊಂದಿಗೂ ಸಂವಾದ - ಮಿತ್ತಲ್ ಮತ್ತು ಕುಕ್ ಭಾರತ ಮತ್ತು ಆಫ್ರಿಕಾ

ಆ್ಯಪಲ್​ ಮಳಿಗೆಗಳ ಉದ್ಘಾಟನೆಗಾಗಿ ಭಾರತ ಪ್ರವಾಸದಲ್ಲಿರುವ ಆ್ಯಪಲ್ ಸಿಇಒ ಟಿಮ್ ಕುಕ್, ಭಾರ್ತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಸೇರಿದಂತೆ ಇನ್ನೂ ಹಲವಾರು ಖ್ಯಾತನಾಮರನ್ನು ಭೇಟಿಯಾಗಿದ್ದಾರೆ.

Tim Cook meets Sunil Mittal, software developers, photographers
Tim Cook meets Sunil Mittal, software developers, photographers

By

Published : Apr 21, 2023, 7:06 PM IST

ನವದೆಹಲಿ : ಆ್ಯಪಲ್ ಸಿಇಒ ಟಿಮ್ ಕುಕ್ ಶುಕ್ರವಾರ ಭಾರ್ತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಮತ್ತು ಹಲವಾರು ಕಂಟೆಂಟ್ ಡೆವಲಪರ್‌ಗಳನ್ನು ಭೇಟಿ ಮಾಡಿದರು. ಮಿತ್ತಲ್ ಮತ್ತು ಕುಕ್ ಭಾರತ ಮತ್ತು ಆಫ್ರಿಕಾದಲ್ಲಿ ಹೆಚ್ಚು ನಿಕಟವಾಗಿ ಕೆಲಸ ಮಾಡಲು ಬದ್ಧತೆ ವ್ಯಕ್ತಪಡಿಸಿದರು. ಟಿಮ್ ಕುಕ್ ಮತ್ತು ಸುನಿಲ್ ಭಾರ್ತಿ ಮಿತ್ತಲ್ ಅವರು ಇಂದು ಬೆಳಗ್ಗೆ ಭೇಟಿಯಾಗಿ ಒಂದು ಗಂಟೆ ಕಾಲ ಚರ್ಚೆ ನಡೆಸಿದರು ಎಂದು ಕಂಪನಿಯು ಟ್ವಿಟರ್‌ನಲ್ಲಿ ತಿಳಿಸಿದೆ.

ಆ್ಯಪಲ್ ಮತ್ತು ಏರ್‌ಟೆಲ್ ಹೊಂದಿರುವ ಸುದೀರ್ಘ ಸಂಬಂಧದ ತೃಪ್ತಿ ವ್ಯಕ್ತಪಡಿಸಿದ ಕುಕ್, ಭಾರತೀಯ ಮತ್ತು ಆಫ್ರಿಕನ್ ಮಾರುಕಟ್ಟೆಯಲ್ಲಿ ಹೆಚ್ಚು ನಿಕಟವಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಟ್ವಿಟರ್​ನಲ್ಲಿ ಕಂಪನಿ ಹೇಳಿದೆ.

ಆ್ಯಪಲ್ ಮುಖ್ಯಸ್ಥ ಟಿಮ್ ಕುಕ್, ಮುಂಬೈನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರನ್ನು ಕೂಡ ಭೇಟಿ ಮಾಡಿದರು. ಮುಂಬೈ ಮತ್ತು ದೆಹಲಿಯಲ್ಲಿ ಆ್ಯಪಲ್‌ನ ಪ್ರಮುಖ ಮಳಿಗೆಗಳ ಉದ್ಘಾಟನೆಗಾಗಿ ಕುಕ್ ಈ ವಾರದ ಆರಂಭದಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾರೆ. ಟಿಮ್ ಕುಕ್ ಕೆಲ ಸಾಫ್ಟ್‌ವೇರ್ ಡೆವಲಪರ್‌ಗಳನ್ನು ಸಹ ಭೇಟಿ ಮಾಡಿ ಮತ್ತು ಅವರ ಕೆಲಸವನ್ನು ಶ್ಲಾಘಿಸಿದರು.

ಭಾರತದಾದ್ಯಂತ ಹಲವಾರು ಡೆವಲಪರ್‌ಗಳು ಹೊಂದಿರುವ ಉತ್ಸಾಹ ಮತ್ತು ಪ್ರಪಂಚದಾದ್ಯಂತ ಬಳಕೆದಾರರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವುದನ್ನು ನೋಡಲು ಸಂತೋಷವಾಗಿದೆ. ಭಾರತದ ಅಗ್ರ-ಶ್ರೇಣಿಯ ಕ್ರಿಕೆಟ್ ಅಪ್ಲಿಕೇಶನ್, AR ಆಧಾರಿತ ಯೋಗ ಅಪ್ಲಿಕೇಶನ್ ಮತ್ತು ಲುಕ್‌ಅಪ್- ಬಳಸಲು ಸುಲಭವಾದ ನಿಘಂಟು ಅಪ್ಲಿಕೇಶನ್​ ತಯಾರಕರನ್ನು ಭೇಟಿಯಾಗಿರುವುದು ನನಗೆ ಸಂತೋಷ ತಂದಿದೆ ಎಂದು ಕುಕ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

"ಈ ಅದ್ಭುತ ರಂಗೋಲಿ ಮತ್ತು ಕೋಲಂ ವಿನ್ಯಾಸಗಳು ತುಂಬಾ ರೋಮಾಂಚಕ ಮತ್ತು ಸುಂದರವಾಗಿವೆ. ಹೂವಿನ ದಳಗಳು, ಅಕ್ಕಿ ಮತ್ತು ಬಣ್ಣದ ಮರಳನ್ನು ಪರಿಪೂರ್ಣ ಸಾಮರಸ್ಯದಿಂದ ಬಿಡಿಸಲಾಗಿದೆ. ಅಪೇಕ್ಷಾ ಮೇಕರ್ ಮತ್ತು ಜೋಶುವಾ ಕಾರ್ತಿಕ್ ಅವರು ಇವುಗಳನ್ನು ಐಫೋನ್‌ನಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾರೆ" ಎಂದು ಕುಕ್ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಆ್ಯಪಲ್ ಮುಖ್ಯಸ್ಥರು ಛಾಯಾಗ್ರಾಹಕರಾದ ಅಪೇಕ್ಷಾ ಮೇಕರ್ ಮತ್ತು ಜೋಶುವಾ ಕಾರ್ತಿಕ್ ಅವರನ್ನು ಭೇಟಿಯಾದರು. ಅವರು ಐಫೋನ್‌ನಲ್ಲಿ ಸೆರೆಹಿಡಿದ ತಮ್ಮ ರಂಗೋಲಿ ಮತ್ತು ಕೋಲಂ ವಿನ್ಯಾಸಗಳನ್ನು ಹಂಚಿಕೊಂಡರು.

ಟಿಮ್ ಕುಕ್ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳಲ್ಲಿ ಒಂದಾದ ಆಪಲ್‌ನ ಸಿಇಒ ಆಗಿದ್ದಾರೆ. 2011 ರಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕುಕ್, ಈ ಹಿಂದೆ ಸ್ಟೀವ್ ಜಾಬ್ಸ್ ಅವರ ಅಡಿಯಲ್ಲಿ ಆಪಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕುಕ್ 1998 ರಲ್ಲಿ ಆ್ಯಪಲ್​ಗೆ ಸೇರಿದರು. ಇವರು ಪಿಸಿ ತಯಾರಕ ಕಂಪನಿ ಕಾಂಪಾಕ್‌ನಲ್ಲಿ ಸಂಕ್ಷಿಪ್ತ ಅವಧಿಗೆ ಮತ್ತು ಐಬಿಎಂನಲ್ಲಿ 12 ವರ್ಷಗಳ ಕಾಲ ಕೆಲಸ ಮಾಡಿದರು. ಕುಕ್ ಆ್ಯಪಲ್‌ನ 3 ಮಿಲಿಯನ್‌ಗಿಂತಲೂ ಹೆಚ್ಚು ಷೇರುಗಳನ್ನು ಹೊಂದಿದ್ದಾರೆ. 2005 ರಿಂದ ಅವರು ನೈಕ್ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಚಾಟ್​ಜಿಪಿಟಿಗಿಂತ ಪ್ರಬಲ AI ತಯಾರಿಸಲಿದೆ ’ಗೂಗಲ್​ ಡೀಪ್​ ಮೈಂಡ್​’

ABOUT THE AUTHOR

...view details