ನವದೆಹಲಿ: ಮೊನ್ನೆ ಮೊನ್ನೆ ಬಿಡುಗಡೆಗೊಂಡಿರುವ ಥ್ರೆಡ್ ಆ್ಯಪ್ 70 ಮಿಲಿಯನ್ ಬಳಕೆದಾರರನ್ನು ಗಳಿಸಿಕೊಂಡಿದೆ. ಟ್ವಿಟರ್ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಥ್ರೆಡ್ , ಹೊಸ ವೈಶಿಷ್ಟ್ಯ ಮತ್ತು ದೋಷ ಪರಿಹಾರಗಳಿಗೆ ಆಂಡ್ರಾಯ್ಡ್ ಬೀಟಾ ಪ್ರೋಗ್ರಾಂ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
Android ಬೀಟಾ ಪ್ರೋಗ್ರಾಂಗೆ ಆಹ್ವಾನ ನೀಡಿರುವ ಮೆಟಾ "ಅಪ್ಲಿಕೇಶನ್ ಬಳಕೆಯ ಕುರಿತು ಕೆಲವು ಡೇಟಾವನ್ನು ಸಂಗ್ರಹಿಸಲಾಗುತ್ತದೆ ಮತ್ತು ಅಪ್ಲಿಕೇಶನ್ ಅನ್ನು ಸುಧಾರಿಸಲು ಡೆವಲಪರ್‌ಗಳೊಂದಿಗೆ ಬಳಕೆದಾರರರು ನೀಡುವ ಸಲಹೆಗಳನ್ನು ಹಂಚಿಕೊಳ್ಳಲಾಗುತ್ತದೆ" ಎಂದು ಘೋಷಿಸಿದೆ. ಕಂಪನಿಯ ಎಂಜಿನಿಯರ್‌ಗಳೊಬ್ಬರ ಪ್ರಕಾರ, "ಅತ್ಯಾಧುನಿಕತೆಯನ್ನು ಅಳವಡಿಸಿಕೊಳ್ಳಲು, ಹಾಗೂ Android ಬಳಕೆದಾರರಿಗೆ, ನಮ್ಮ ಥ್ರೆಡ್ ಬೀಟಾ ಆವೃತ್ತಿಗೆ ಸೈನ್ ಅಪ್ ಮಾಡಿ, ಹೊಸ ವೈಶಿಷ್ಟ್ಯದೊಂದಿಗೆ ಉಳಿದುಕೊಳ್ಳಲು ಬಯಸುವ ಬಳಕೆದಾರರು ಕೆಲ ಸಮಸ್ಯೆಗಳನ್ನು ಎದುರಸಬೇಕಾಗುತ್ತದೆ‘‘ ಎಂದು ಹೇಳಿದ್ದಾರೆ.
TechCrunch ವರದಿ ಮಾಡಿದಂತೆ, ಯಾವುದೇ ಕಾಯುವ ಪಟ್ಟಿ ಇಲ್ಲದ ಕಾರಣ ಈಗ ಯಾರಾದರೂ ಬೀಟಾ ಪ್ರವೇಶಕ್ಕಾಗಿ ಸೈನ್ ಅಪ್ ಮಾಡಬಹುದು. ಏತನ್ಮಧ್ಯೆ, ಮೆಟಾ ಸಂಸ್ಥಾಪಕ ಮತ್ತು CEO ಮಾರ್ಕ್ ಜುಕರ್‌ಬರ್ಗ್ ಥ್ರೆಡ್ಸ್ ಈಗ 70 ಮಿಲಿಯನ್ ಬಳಕೆದಾರರು ಡೌನ್ಲೋಡ್ ಮಾಡಿಕೊಂಡು ಸೈನ್ ಅಪ್ ಆಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಇದು "ನಮ್ಮ ನಿರೀಕ್ಷೆಗಳನ್ನು ಮೀರಿದ ಡೌನ್ಲೋಡ್ ಆಗಿದೆ ಎಂದು ಜೂಕರ್ ಬರ್ಗ್ ಸಂತಸ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಂಭಾಷಣೆಗಾಗಿ ಸಾಕಷ್ಟು ಉತ್ತಮ ಕೊಡುಗೆಗಳಿವೆ ಎಂದು Instagram CEO ಆಡಮ್ ಮೊಸ್ಸೆರಿ ಸಹ ಹೇಳಿದ್ದಾರೆ.