ಕರ್ನಾಟಕ

karnataka

ETV Bharat / science-and-technology

ಕಳೆದುಹೋದ ವಸ್ತುಗಳನ್ನು ಪತ್ತೆ ಹಚ್ಚಲು ಬಂತು ರೋಬೋಟ್.. ಹೇಗಿರುತ್ತೆ ಇದರ ಕಾರ್ಯ?​​​​

ಕಳೆದುಹೋದ ವಸ್ತುಗಳನ್ನು ಪತ್ತೆ ಹಚ್ಚಲು ಕೆನಡಾದ ವಾಟರ್​ ಲೂ ವಿಶ್ವವಿದ್ಯಾಲಯದ ಸಂಶೋಧಕರು ರೋಬೋಟ್​ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಆರ್ಟಿಫಿಷಿಯಲ್​ ಮೆಮೊರಿಯ ಮೂಲಕ ಕಳೆದುಕೊಂಡ ವಸ್ತುಗಳನ್ನು ಹುಡುಕಿಕೊಡುತ್ತದೆ.

this-robot-with-artificial-memory-may-help-find-objects-youve-lost
ಕಳೆದುಹೋದ ವಸ್ತುಗಳನ್ನು ಪತ್ತೆ ಹಚ್ಚಲು ಆರ್ಟಿಫಿಷಿಯಲ್​ ಮೆಮೊರಿ ರೋಬೋಟ್​​​​

By

Published : May 15, 2023, 10:51 PM IST

ಟೊರೊಂಟೊ (ಕೆನಡಾ): ಇಂದಿನ ಬಿಡುವಿರದ ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಳೆದುಹೋಗಿದ್ದಾರೆ. ಇದರ ಜೊತೆಗೆ ಜನರು ತಮ್ಮ ವಸ್ತುಗಳನ್ನು ಎಲ್ಲೆಂದರಲ್ಲಿ ಮರೆತು ಬಿಡುವುದು ಸಾಮಾನ್ಯವಾಗಿದೆ. ಬಳಿಕ ಎಲ್ಲೇ ಹುಡುಕಿದರೂ, ಎಷ್ಟೇ ಹುಡುಕಿದರೂ ವಸ್ತುಗಳು ಲಭಿಸಿದೇ ಕಿರಿಕಿರಿ ಅನುಭವಿಸುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೆನಡಾದ ವಾಟರ್​ ಲೂ ವಿಶ್ವವಿದ್ಯಾಲಯದ ಸಂಶೋಧಕರು ರೋಬೋಟ್​ನ್ನು ಅಭಿವೃದ್ಧಿಪಡಿಸಿದ್ದಾರೆ.

ಕೆನಡಾದ ವಾಟರ್​ ಲೂ ವಿಶ್ವವಿದ್ಯಾಲಯದ ಸಂಶೋಧಕರ ತಂಡ ವಸ್ತುಗಳನ್ನು ಪತ್ತೆ ಹಚ್ಚಲು ಈ ರೋಬೋಟನ್ನು ಅಭಿವೃದ್ಧಿಪಡಿಸಿದ್ದಾರೆ. ಈ ರೋಬೋಟ್​ ಆರ್ಟಿಫಿಶಿಯಲ್​ ಮೆಮೊರಿ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ನಿರ್ದಿಷ್ಟವಾಗಿ ಬುದ್ಧಿಮಾಂದ್ಯತೆ ಹೊಂದಿರುವವರಿಗೆ ಉಪಯುಕ್ತವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸಂಶೋಧಕ ಡಾ. ಅಲಿ ಅಯೂಬ್, ಒಬ್ಬ ಬಳಕೆದಾರ ಕೇವಲ ರೋಬೋಟ್​ ಜೊತೆಗೆ ಇರುವುದನ್ನು ಹೊರತುಪಡಿಸಿ ಇದು ನಮ್ಮ ವೈಯಕ್ತಿಕ ​ಒಡನಾಡಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು. ಅಯೂಬ್ ಮತ್ತು ಇತರ ಮೂವರು ಸಹೋದ್ಯೋಗಿಗಳು ಜನರಲ್ಲಿ ಬುದ್ಧಿಮಾಂದ್ಯತೆ ವೇಗವಾಗಿ ಹೆಚ್ಚುತ್ತಿರುವ ಬಗ್ಗೆ ಕಂಡುಕೊಂಡಿದ್ದಾರೆ. ಈ ಬುದ್ಧಿ ಮಾಂದ್ಯತೆಯು ಯಾವುದೇ ವ್ಯಕ್ತಿಯ ಮೆದುಳಿನ ಕಾರ್ಯವನ್ನು ನಿರ್ಬಂಧಿಸುತ್ತದೆ. ಇದು ಮಾನವನ ಗೊಂದಲ, ಜ್ಞಾಪಕ ಶಕ್ತಿ ನಷ್ಟ ಮತ್ತು ಅಂಗವೈಕಲ್ಯ ಮುಂತಾದವುಗಳಿಗೆ ಕಾರಣವಾಗುತ್ತದೆ. ಇಂತಹ ವ್ಯಕ್ತಿಗಳಲ್ಲಿ ಹೆಚ್ಚಿನವರು ದಿನನಿತ್ಯದ ವಸ್ತುಗಳ ಇಟ್ಟ ಸ್ಥಳವನ್ನು ಪದೇ ಪದೇ ಮರೆಯುತ್ತಾರೆ. ಇದು ಅವರ ಜೀವನದ ಗುಣಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ, ಇವರನ್ನು ಆರೈಕೆ ಮಾಡುವವರ ಮೇಲೆ ಹೆಚ್ಚು ಹೊರೆಯನ್ನು ಉಂಟು ಮಾಡುತ್ತದೆ ಎಂದು ಹೇಳಿದರು.

ಇದಕ್ಕೆ ಪರಿಹಾರವಾಗಿ ರೋಬೋಟ್​ನ್ನು ಬಳಸಿ ವಸ್ತುಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ. ಈ ರೋಬೋಟ್​ ಎಪಿಸೋಡಿಕ್​ ಮೆಮೊರಿ ಮೂಲಕ ಕಾರ್ಯ ನಿರ್ವಹಿಸುತ್ತದೆ. ಅಂದರೆ ದೈನಂದಿನ ಕಾರ್ಯಗಳನ್ನು ಈ ರೋಬೋಟ್​ನ ಮೆಮೊರಿಯಲ್ಲಿ ಇರಿಸಲಾಗುತ್ತದೆ. ಅಲ್ಲದೆ ಇದರಲ್ಲಿ ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್​ನ್ನು ಬಳಕೆ ಮಾಡಿ ಹೊಸ ರೀತಿಯ ಆರ್ಟಿಫಿಷಿಯಲ್​ ಮೆಮೊರಿಯನ್ನು ಅಳವಡಿಸಲಾಗುತ್ತದೆ. ಈ ರೋಬೋಟ್​ ತನ್ನ ಸುತ್ತಲಿನ ಪರಿಸರವನ್ನು ಗಮನಿಸಲು ಕ್ಯಾಮೆರಾವನ್ನು ಹೊಂದಿದೆ.

ಅಲ್ಲದೆ ಈ ರೋಬೋಟ್ ಆಬ್ಜೆಕ್ಟ್​ ಡಿಟೆಕ್ಷನ್​(object detection) ತಂತ್ರಜ್ಞಾನದ ಮೂಲಕ ವಸ್ತುಗಳನ್ನು ಗುರುತಿಸುತ್ತದೆ. ರೋಬೋಟ್​ನ ಮೆಮೊರಿಯಲ್ಲಿ ದೈನಂದಿನ ಚಟುವಟಿಕೆ ವಸ್ತುಗಳ ಬಗ್ಗೆ ಮಾಹಿತಿಯನ್ನು ತುಂಬಲಾಗಿರುತ್ತದೆ. ಅಷ್ಟೇ ಅಲ್ಲದೆ ತನ್ನಲ್ಲಿ ಅಳವಡಿಸಿರುವ ಕ್ಯಾಮೆರಾದ ಮೂಲಕ ವಿವಿಧ ವಸ್ತುಗಳನ್ನು ಗ್ರಹಿಸಲು ರೋಬೋಟ್​ಗೆ ಸಾಧ್ಯವಾಗುತ್ತದೆ. ರೋಬೋಟ್​ನ ಕಣ್ಣಿಗೆ ಬಿದ್ದ ವಸ್ತುಗಳ ಸಮಯ ಮತ್ತು ದಿನಾಂಕವನ್ನು ಇದು ತನ್ನಲ್ಲಿ ನಮೂದಿಸಿಕೊಳ್ಳುತ್ತದೆ.

ಇನ್ನು, ಬಳಕೆದಾರ ವ್ಯಕ್ತಿಯು ಕಳೆದುಕೊಂಡ ವಸ್ತುಗಳ ಬಗ್ಗೆ ರೋಬೋಟ್​ನ ಗ್ರಾಫಿಕ್​ ಇಂಟರ್​ಫೇಸ್​ ಮೇಲೆ ಟೈಪ್​ ಮಾಡಿದಾಗ, ಅಥವಾ ಇದಕ್ಕೆ ಹೊಂದಿಕೊಂಡಿರುವ ಫೋನ್​ ಮೂಲಕ ಮತ್ತು ಕಂಪ್ಯೂಟರ್​ ಮೂಲಕ ನಾವು ವಸ್ತುಗಳ ಹೆಸರನ್ನು ನಮೂದಿಸಿದರೆ ಇದು ನಿರ್ದಿಷ್ಟವಾಗಿ ವಸ್ತು ಇರುವ ಸ್ಥಳವನ್ನು ನಮಗೆ ತಿಳಿಸುತ್ತದೆ. ಈ ರೋಬೋಟಿಕ್ ಪ್ರಯೋಗವು ಯಶಸ್ವಿಯಾಗಿದೆ. ಬುದ್ಧಿಮಾಂದ್ಯತೆ ಇರುವ ವ್ಯಕ್ತಿಗಳಿಗೆ ಇದರ ಬಳಕೆ ಕ್ಲಿಷ್ಟವಾಗಿದ್ದರೆ, ಇವರ ಆರೈಕೆ ಮಾಡುವವರಿಗೆ ಇದು ಸಹಕಾರಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ :AI ನಿಂದ ವ್ಯವಸ್ಥೆಯ ಮೇಲೆ ಸಂಭಾವ್ಯ ಅಪಾಯ ತಡೆಗೆ ಕ್ರಮ ಅಗತ್ಯ: ತಜ್ಞರ ಪ್ರತಿಪಾದನೆ

ABOUT THE AUTHOR

...view details