ಕೋಪನ್ ಹೇಗನ್ (ಡೆನ್ಮಾರ್ಕ್): ಕೋಪನ್ ಹೇಗನ್ ವಿಶ್ವವಿದ್ಯಾಲಯದ ಹೊಸ ಅಧ್ಯಯನದ ಪ್ರಕಾರ, ಮಂಜು ಮತ್ತು ಇಂಗಾಲಗಳ ಸಣ್ಣ ಧೂಳಿನ ಕಣಗಳಿಂದ ಭೂಮಿ, ಶುಕ್ರ ಮತ್ತು ಮಂಗಳ ಗ್ರಹ ರಚನೆಗೊಂಡಿವೆ ಎಂದು ತಿಳಿದು ಬಂದಿದೆ. ಹೀಗಾಗಿ ಮಿಲ್ಕಿ ವೇ ನಲ್ಲಿಯೂ ನೀರು ಇರುವ ಗ್ರಹಗಳು ಇರಬಹುದು ಎನ್ನುವ ಭರವಸೆ ವ್ಯಕ್ತವಾಗಿದೆ.
ವಿಶಾಲವಾದ ಬ್ರಹ್ಮಾಂಡದಲ್ಲಿ ಇನ್ನೂ ಕೆಲ ಗ್ರಹಗಳಲ್ಲಿ ನಾಗರಿಕತೆಗಳು ಇರಬಹುದು ಎಂಬುದನ್ನು ಕಂಡು ಹಿಡಿಯಲು ಸಂಶೋಧನೆಗಳನ್ನು ನಡೆಯುತ್ತಲೇ ಇವೆ. ಆದರೆ, ಇಂತಹ ನಾಗರಿಕತೆಗಳನ್ನು ಕಂಡು ಹಿಡಿಯುವುದು ಅಸಾಧ್ಯವಾಗಿ ಪರಿಣಮಿಸಿದೆ. ಭೂಮಿ ಸೃಷ್ಟಿಯಾದಾಗ ಯಾವುದೋ ಒಂದು ದೊಡ್ಡ ನೀರು ತುಂಬಿದ ಧೂಮಕೇತು ಭೂಮಿಗೆ ಅಪ್ಪಳಿಸಿ ಇಲ್ಲಿ ನೀರು ಸಂಗ್ರಹವಾಗಿರಬಹುದು ಎಂಬ ವಾದಗಳು ಇಷ್ಟಕ್ಕೆಲ್ಲ ಕಾರಣವಾಗಿದೆ.
ನಮ್ಮ ಎಲ್ಲ ಮಾಹಿತಿಯು ಮೊದಲಿನಿಂದಲೂ ಭೂಮಿ ಕಲ್ಲು ಮಣ್ಣು ಹಾಗೂ ನೀರಿನಿಂದ ಆವೃತವಾದ ಒಂದು ಮೂಲ ಪ್ರದೇಶ ಎಂಬುದನ್ನ ಸೂಚಿಸುತ್ತಿದೆ. ಹಾಗಾಗಿ ಕ್ಷೀರಪಥ ಎಂದು ಕರೆಸಿಕೊಳ್ಳುವ ಹಲವು ನಕ್ಷತ್ರಗಳ ಆವಾಸ ಸ್ಥಾನವಾಗಿರುವ ನಮ್ಮ ಕ್ಷೀರ ಪಥದಲ್ಲಿರುವ ಎಲ್ಲ ಗ್ರಹಗಳಲ್ಲಿ ನೀರು, ಇಂಗಾಲ, ಬೆಣಚು ಕಲ್ಲು ಸೇರಿದಂತೆ ಜೀವ ಸಂಕುಲಕ್ಕೆ ಬೇಕಾದ ಎಲ್ಲ ಆಕರಗಳು ಇರಬಹುದೆಂದು ಅಧ್ಯಯನಗಳು ಊಹಿಸಿವೆ. ಹೀಗಾಗಿ ಆಯಾಯ ನಕ್ಷತ್ರಗಳಲ್ಲಿ ಇರುವ ಗ್ರಹಗಳು ಅವುಗಳ ದೂರಕ್ಕೆ ಅನುಗುಣವಾಗಿ ಜೀವ ಸಂಕುಲಕ್ಕೆ ಬೇಕಾದ ನೀರು, ಕಲ್ಲು ಮಣ್ಣು, ಇಂಗಾಲ, ಆಮ್ಲಜನಕಗಳನ್ನು ಒಳಗೊಂಡ ಆಕರಗಳನ್ನು ಹೊಂದಿರಬಹುದು ಎಂದು ಸೆಂಟರ್ ಫಾರ್ ಸ್ಟಾರ್ ಅಂಡ್ ಪ್ಲಾನೆಟ್ ಪಾರ್ಮೆಷನ್ ಸೆಂಟರ್ನ ಪ್ರೊಪೆಸರ್ ಆ್ಯಂಡರ್ಸ್ ಜಾನ್ಸನ್ ಹೇಳಿದ್ದಾರೆ. ಇವರು ಜರ್ನಲ್ ಸೈನ್ಸ್ ಅಡ್ವಾನ್ಸ್ನಲ್ಲಿ ಈ ಬಗ್ಗೆ ತಮ್ಮ ವಾದವನ್ನ ಮಂಡಿಸಿದ್ದಾರೆ.