ಕರ್ನಾಟಕ

karnataka

ETV Bharat / science-and-technology

ಕಾರಿನಲ್ಲಿಅಪಾಯದ ಎಚ್ಚರಿಕೆ ವ್ಯವಸ್ಥೆ ಅಳವಡಿಸಲಿರುವ ಟೆಸ್ಲಾ

ಎಲೋನ್ ಮಸ್ಕ್-ಮಾಲೀಕತ್ವದ ಟೆಸ್ಲಾ ಕಂಪನಿ ಅಪಾಯ ವರ್ಧಿತ ಸ್ಥಳ ಪ್ರೋಟೋಕಾಲ್ (H.E.L.P.) ತಂತ್ರಜ್ಞಾನವನ್ನು ಅಳವಡಿಸುವ ಸಲುವಾಗಿ, ಎಮರ್ಜೆನ್ಸಿ ಸೇಫ್ಟಿ ಸೊಲ್ಯೂಷನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಎಲೋನ್ ಮಸ್ಕ್ ಒಡೆತನದ ಟೆಸ್ಲಾ
ಎಲೋನ್ ಮಸ್ಕ್ ಒಡೆತನದ ಟೆಸ್ಲಾ

By

Published : Oct 14, 2022, 5:39 PM IST

ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಎಮರ್ಜೆನ್ಸಿ ಸೇಫ್ಟಿ ಸೊಲ್ಯೂಷನ್ಸ್ (ESS) ದುರ್ಬಲ ವಾಹನಗಳಿಂದ ಪ್ರಯಾಣಿಕರಿಗೆ ಆಗುವ ಅಪಾಯ ತಡೆಯುವ ಸಲುವಾಗಿ, ವಾಹನ ಅಪಾಯದ ಎಚ್ಚರಿಕೆ ವ್ಯವಸ್ಥೆಯನ್ನು​​ (H.E.L.P) ಅಳವಡಿಸಲು ಎಲೋನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಉತ್ತರ ಅಮೆರಿಕಾದಲ್ಲಿ ಈ ತಂತ್ರಜ್ಞಾನದ ವಾಹನಗಳು ಸದ್ಯಕ್ಕೆ ಕಾರ್ಯನಿರ್ವಹಿಸಲಿವೆ.

ರಸ್ತೆಬದಿಯ ಸುರಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸುವಲ್ಲಿ ಇದು ಒಂದು ಉತ್ತಮ ಹೆಜ್ಜೆಯಾಗಿದೆ. ಪ್ರಯಾಣಿಕ ವಾಹನಗಳಿಗೆ ನಾವೀನ್ಯತೆಯನ್ನು ತರುವಲ್ಲಿ ಟೆಸ್ಲಾ ಮುಂಚೂಣಿಯಲ್ಲಿದೆ. ವಿಶ್ವಾದ್ಯಂತ ಸಂಭಾವ್ಯ ಲಕ್ಷಾಂತರ ಟೆಸ್ಲಾ ವಾಹನಗಳಲ್ಲಿ H.E.L.P. ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ.

ಇದು ಅಂಗವಿಕಲರಿಗೆ ಮತ್ತು ದುರ್ಬಲರಿಗೆ ಹೆಚ್ಚು ಸಹಕಾರಿಯಾಗಲಿದೆ. ಪ್ರತಿ ವರ್ಷ ಪ್ರಪಂಚದಾದ್ಯಂತ ತುಂಬಾ ಜನ ಅಪಘಾತದಲ್ಲಿ ಗಾಯಗೊಳ್ಳುತ್ತಿದ್ದಾರೆ ಮತ್ತು ಮರಣ ಹೊಂದುತ್ತಿದ್ದಾರೆ. ಇದನ್ನು ತಡೆಯಲು ಇದು ಸಹಕಾರಿಯಾಗಲಿದೆ ಎಂದು ಎಮರ್ಜೆನ್ಸಿ ಸೇಫ್ಟಿ ಸೊಲ್ಯೂಷನ್ಸ್‌ನ ಸಿಇಒ ಟಾಮ್ ಮೆಟ್ಜ್ಗರ್ ಹೇಳಿದ್ದಾರೆ.

ಇದನ್ನೂ ಓದಿ:ವಿಶ್ವಾದ್ಯಂತ 4 ಸಾವಿರ ಸೂಪರ್ ಚಾರ್ಜರ್ ಸ್ಟೇಷನ್ ಸ್ಥಾಪಿಸಿದ ಟೆಸ್ಲಾ

H.E.L.P (Hazard Enhanced Location Protocol) ಯ ಮೊದಲ ಪ್ರಯಾಣಿಕ ವಾಹನ ಅಳವಡಿಕೆಯಾಗಿದೆ. ಎಮರ್ಜೆನ್ಸಿ ಸೇಫ್ಟಿ ಸೊಲ್ಯೂಷನ್ಸ್ ಪ್ರಮಾಣೀಕೃತ ಮಧ್ಯಮ ಮಾಲೀಕತ್ವದ ಉದ್ಯಮವಾಗಿದ್ದು, ದುರ್ಬಲ ವಾಹನಗಳು ಹೊಂದಿರುವ ಕ್ರ್ಯಾಶ್‌ಗಳನ್ನು ತೆಗೆದುಹಾಕುವ ಮೂಲಕ ಪ್ರಾಯಾಣಿಕರ ಜೀವವನ್ನು ಉಳಿಸಲಿದೆ. ಸುರಕ್ಷತಾ ಸಮಸ್ಯೆಯು US ನಲ್ಲಿ ವಾರ್ಷಿಕವಾಗಿ 72,000 ಕ್ಕಿಂತ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತದೆ. 15,000 ಜನರು ಗಾಯಗೊಳ್ಳುತ್ತಿದ್ದಾರೆ.

ABOUT THE AUTHOR

...view details