ಬೆಂಗಳೂರು: ಜಗತ್ತಿನ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಖ್ಯಾತಿಗೆ ಇದೀಗ ಟೆಸ್ಲಾ ಮಾಡೆಲ್ ವೈ ಕಾರು ಪಾತ್ರವಾಗಿದೆ. ಟೆಸ್ಲಾದ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ವಾಹನ ಇದಾಗಿದೆ ಎಂದು ವರದಿ ತಿಳಿಸಿದೆ. ಜಟೊ ಡೈನಾಮಿಕ್ಸ್ ದತ್ತಾಂಶದ ಅನುಸಾರ 2023ರ ಮೊದಲ ತ್ರೈಮಾಸಿಕದಲ್ಲಿ ಟೆಸ್ಲಾ ಮಾಡೆಲ್ ವೈ ಟೊಯೊಟೊ RAV4 ಮತ್ತು ಕೊರೊಲಾ ಮಾಡೆಲ್ ಕಾರು ಜಾಗತಿಕವಾಗಿ ಹೆಚ್ಚು ಮಾರಾಟವಾದ ವಾಹನಗಳಾಗಿದೆ. 2023 ಮಾಡೆಲ್ ವೈ ಕಾರು ಆರಂಭವಿಕ ಬೆಲೆ 47,490 ಡಾಲರ್ ಇದ್ದು, ಕೊರೊಲಾ 21,500 ಡಾಲರ್ ಇದ್ದರೆ, ರಾವ್4 ಕಾರು 27,575 ಡಾಲರ್ ಇದೆ ಎಂದು ವರ್ಜ್ ವರದಿ ಮಾಡಿದೆ.
ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೊರೊಲಾದ 2,56,400 ಘಟಕ ಮತ್ತು ರಾವ4 2,14,700 ಘಟಕ ಮಾರಾಟವಾಗಿದ್ದು, ಟೆಸ್ಲಾ ಮಾಡೆಲ್ ವೈ 2,67,200 ಘಟಕಗಳು ಜಾಗತಿಕವಾಗಿ ಮಾರಾಟವಾಗಿದೆ. 2016ರಲ್ಲೇ ಈ ಮಾಡೆಲ್ ಜನರ ಬೇಡಿಕೆಯನ್ನು ಗಳಿಸುತ್ತದೆ ಎಂಬ ಅರಿವಿದ್ದ ಟೆಸ್ಲಾ ಸಿಇಒ ಎಲೋನ್ ಮಸ್ಕ್, ಇದರ ಘಟಕವನ್ನು 500 ಸಾವಿರದಿಂದ 1 ಮಿಲಿಯನ್ಗೆ ಪ್ರತಿ ವರ್ಷ ಏರಿಕೆ ಮಾಡಿದ್ದರು. 2021ರಲ್ಲಿ ಮಾಡೆಲ್ ವೈ ಜಗತ್ತಿನ ಹೆಚ್ಚು ಜನರ ಸೆಳೆದ ಕಾರ್ ಆಗಿತ್ತು.
ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರಿನಲ್ಲಿ ಮಾಡೆಲ್ ವೈ ಇದೆ. ಮುಂದಿನ ವರ್ಷಕ್ಕೂ ಇದೇ ಬೆಸ್ಟ್ ಆಗುವ ಸಾಧ್ಯತೆ ಇದೆ. ಆದರೆ, ಮುಂದಿನ ವರ್ಷದವರೆಗೆ ನಾವು ಈ ಬಗ್ಗೆ ಶೇ 100ರಷ್ಟು ಖಾತರಿ ನೀಡಲು ಸಾಧ್ಯವಿಲ್ಲ. ಆದರೆ, ಇದು ಆಗಬಹುದು ಎಂದು ಅವರು ತಿಳಿಸಿದ್ದಾರೆ. ಅಮೆರಿಕದ ಎಲೆಕ್ಟ್ರಿಕ್ ವಾಹನದ ಮಾರುಕಟ್ಟೆ ಮತ್ತು ಶೇ 50ರ ಷೇರಿನಲ್ಲಿ ಟೆಸ್ಲಾ ಅಗ್ರಗಣ್ಯವಾಗಿ ಉಳಿದಿದೆ. ಇತರ 17 ಆಟೋಮೋಟಿವ್ ಗುಂಪುಗಳಿಗಿಂತ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.