ವಿದ್ಯುತ್ ಚಾಲಿತ ಕಾರುಗಳ ಉತ್ಪಾದನೆಯಲ್ಲಿ ಟೆಸ್ಲಾ ಮಾರುಕಟ್ಟೆಯಲ್ಲಿ ಈಗಾಗಲೇ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಈಗ ಮಾರುಕಟ್ಟೆಗೆ ಮತ್ತೊಂದು ದೈತ್ಯವಾಹನ ಕಾಲಿಟ್ಟಿದ್ದು, ಪಿಕಪ್ ವಾಹನಗಳಿಗೆ ಟಕ್ಕರ್ ಕೊಡಲು ಸಿದ್ಧವಾಗಿದೆ. 12ಕ್ಕೂ ಹೆಚ್ಚು ವಾಹನಗಳು ಸದ್ಯ ಗ್ರಾಹಕರ ಕೈ ಸೇರಿದ್ದು, ಇವುಗಳಲ್ಲಿ ಸಮಸ್ಯೆ ಕಂಡುಬಂದಲ್ಲಿ ತ್ವರಿತ ಪ್ರತಕ್ರಿಯೆಗೆ ಟೆಸ್ಲಾ ಸಿದ್ಧವಾಗಿದೆ. ಸಿಇಒ ಎಲೋನ್ ಮಸ್ಕ್ ಈ ಭರವಸೆಯನ್ನು ವಾಹನ ಗ್ರಾಹಕರ ಕೈ ಸೇರಿದ ಕೂಡಲೇ ನೀಡಿದ್ದಾರೆ.
ಈ ವಾಹನದ ಬಗ್ಗೆ 3 ವರ್ಷದ ಹಿಂದೆ ಮಸ್ಕ್ ತಿಳಿಸಿದ್ದರು. ಆದರಂತೆ ಇದು 2023ರ ವೇಳೆಗೆ ಗ್ರಾಹಕರಿಗೆ ಲಭ್ಯವಾಗಿದೆ. ಇದನ್ನು ಬಿಡುಗಡೆ ಮಾಡಿದ ಮಸ್ಕ್ "ಇದು ರಸ್ತೆಯಲ್ಲಿ ಅತ್ಯಂತ ವಿಶಿಷ್ಟವಾದ ವಿಷಯವಾಗಿರಲಿದೆ, ಭವಿಷ್ಯವು ಇದರಿಂದ ಕಾಣುತ್ತಿದೆ" ಎಂದಿದ್ದಾರೆ.
ಈಗಾಗಲೇ ಅಮೆರಿಕದ ರಸ್ತೆಗಳಲ್ಲಿ ಫೋರ್ಡ್, ಜನರಲ್ ಮೋಟಾರ್ಸ್ (ಜಿಎಮ್) ಮತ್ತು ರಾಮ್ ಟ್ರಕ್ಗಳು ಓಡಾಡುತ್ತಿವೆ. ಆಟೋ ಮೊಬೈಲ್ ಮಾರುಕಟ್ಟೆಯ ಬಹುಪಾಲುನ್ನು ಈ ಸಂಸ್ಥೆಗಳು ತಮ್ಮ ವಶಕ್ಕೆ ಪಡೆದುಕೊಂಡಿವೆ. ಮಸ್ಕ್ ಇದನ್ನು ಅನಾವರಣಗೊಳಿಸಿದಾಗಿನಿಂದ, ವಾಹನ ತಯಾರಕರು ತಮ್ಮದೇ ಆದ ವಿದ್ಯುತ್ ಟ್ರಕ್‌ಗಳನ್ನು ತಯಾರಿಸಿದ್ದಾರೆ. ಫೋರ್ಡ್, ಜಿಎಮ್ ಮತ್ತು ಅಪ್‌ಸ್ಟಾರ್ಟ್ ರಿವಿಯನ್ ಈಗಾಗಲೇ ವಿದ್ಯುತ್ ಚಾಲಿತ ಟ್ರಕ್‌ಗಳನ್ನು ಮಾರಾಟ ಮಾಡುತ್ತಿವೆ ಮತ್ತು ರಾಮ್ ಮುಂದಿನ ವರ್ಷದ ಆರಂಭದಲ್ಲಿ ಎಲೆಕ್ಟ್ರಿಕ್ ಟ್ರಕ್ ಬಿಡುಗಡೆಮಾಡಲಿದೆ. ಫೋರ್ಡ್‌ನ ಎಫ್-ಸಿರೀಸ್ ಪಿಕಪ್‌ಗಳು ರಾಷ್ಟ್ರದಲ್ಲಿ ಹೆಚ್ಚು ಮಾರಾಟವಾಗುವ ವಾಹನಗಳಾಗಿವೆ, ನಂತರ ಜಿಎಮ್ನ ಷೆವರ್ಲೆ ಸಿಲ್ವೆರಾಡೊ ಮತ್ತು ಸ್ಟೆಲ್ಲಂಟಿಸ್ ರಾಮ್ ಪಿಕಪ್ ಇದೆ.
ಸೈಬರ್‌ಟ್ರಕ್‌ನ ದೇಹವು ಟೆಸ್ಲಾ ಅಭಿವೃದ್ಧಿಪಡಿಸಿದ ಸ್ಟೇನ್‌ಲೆಸ್ ಸ್ಟೀಲ್ ಮಿಶ್ರಲೋಹದಿಂದ ಮಾಡಲ್ಪಟ್ಟಿದೆ. ಸ್ಟೇನ್‌ಲೆಸ್ ಸ್ಟೀಲ್‌ಗೆ ಯಾವುದೇ ತುಕ್ಕು ಹಿಡಿಯುವುದಿಲ್ಲ ಮತ್ತು ಬಣ್ಣ ಅಗತ್ಯವಿಲ್ಲ, ಅದರ ಆಯಸ್ಸು ಹೆಚ್ಚಿನ ಕಾಲ ಇರುತ್ತದೆ ಎಂದು ಮಸ್ಕ್ ಹೇಳಿದ್ದಾರೆ.