ಕರ್ನಾಟಕ

karnataka

ETV Bharat / science-and-technology

Tesla & India: ಟೆಸ್ಲಾ ಸಿಎಫ್​ಒ ಆಗಿ ಭಾರತ ಮೂಲದ ವೈಭವ್ ತನೇಜಾ ನೇಮಕ - etv bharat kannada

Tesla & India: ಟೆಸ್ಲಾ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಭಾರತ ಮೂಲದ ವೈಭವ್ ತನೇಜಾ ನೇಮಕಗೊಂಡಿದ್ದಾರೆ.

musks tesla appoints india origin vaibhav taneja as cfo
musks tesla appoints india origin vaibhav taneja as cfo

By

Published : Aug 8, 2023, 12:35 PM IST

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಎಲೋನ್ ಮಸ್ಕ್ ನೇತೃತ್ವದ ಟೆಸ್ಲಾ ಕಂಪನಿಯು ಭಾರತೀಯ ಮೂಲದ ವೈಭವ್ ತನೇಜಾ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ಒ) ನೇಮಕ ಮಾಡಿದೆ. ತನೇಜಾ ಪ್ರಸ್ತುತ ಮುಖ್ಯ ಲೆಕ್ಕಪತ್ರ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಹೆಚ್ಚುವರಿ ಜವಾಬ್ದಾರಿಯಾಗಿ ಸಿಎಫ್ಒ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಟೆಸ್ಲಾ ಕಂಪನಿಯಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಜಕಾರಿ ಕಿರ್ಕ್ಹಾರ್ನ್ ಅವರ ಸ್ಥಾನವನ್ನು ತನೇಜಾ ತುಂಬಲಿದ್ದಾರೆ.

"ಈ ಕಂಪನಿಯ ಭಾಗವಾಗಿ ಕೆಲಸ ಮಾಡಿರುವುದು ವಿಶೇಷ ಅನುಭವವಾಗಿದೆ ಮತ್ತು ನಾನು 13 ವರ್ಷಗಳ ಹಿಂದೆ ಕಂಪನಿಗೆ ಸೇರಿದಾಗಿನಿಂದ ನಾವು ಒಟ್ಟಿಗೆ ಮಾಡಿದ ಕೆಲಸದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ" ಎಂದು ಕಿರ್ಕ್ಹಾರ್ನ್ ವೃತ್ತಿಪರ ನೆಟ್ವರ್ಕಿಂಗ್ ಪ್ಲಾಟ್ ಫಾರ್ಮ್ ಲಿಂಕ್ಡ್ಇನ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಟೆಸ್ಲಾ ಭಾರತದಲ್ಲಿ ತನ್ನ ಆಟೋ ಮತ್ತು ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಉದ್ಯಮ ಆರಂಭಿಸಲು ಭಾರತದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದೆ. ಇದರ ಮಧ್ಯೆ ಭಾರತೀಯ ಮೂಲದ ತನೇಜಾ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕ ಮಾಡಿರುವುದು ಕುತೂಹಲ ಮೂಡಿಸಿದೆ.

ಜೂನ್​ನಲ್ಲಿ ಮಸ್ಕ್ ಅವರು ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು. ಮೋದಿ ಅವರೊಂದಿಗಿನ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕ್, "ಮೋದಿಯವರಿಗೆ ಭಾರತದ ಬಗ್ಗೆ ನಿಜವಾಗಿಯೂ ಕಾಳಜಿಯಿದೆ. ಭಾರತದಲ್ಲಿ ಹೂಡಿಕೆ ಮಾಡುವಂತೆ ಅವರು ನಮಗೆ ಮನವಿ ಮಾಡಿದ್ದಾರೆ. ನಾವೂ ಸಹ ಭಾರತದಲ್ಲಿ ಹೂಡಿಕೆ ಆರಂಭಿಸಲು ಬಯಸುತ್ತಿದ್ದೇವೆ ಹಾಗೂ ಇದಕ್ಕಾಗಿ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೇವೆ" ಎಂದು ಹೇಳಿದ್ದರು.

ಆಮದು ಮಾಡಿದ ಟೆಸ್ಲಾ ಕಾರುಗಳಿಗೆ ತೆರಿಗೆ ಕಡಿತ ಮಾಡದ ಕಾರಣದಿಂದ ಮಸ್ಕ್ ಈ ಹಿಂದೆ ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ನಿರಾಕರಿಸಿದ್ದರು. ಆದರೆ ಈಗ ಮಸ್ಕ್ ತಮ್ಮ ನಿಲುವು ಬದಲಾಯಿಸಿದ್ದು, ಟೆಸ್ಲಾವನ್ನು ಭಾರತಕ್ಕೆ ತರಲು ಉತ್ಸುಕರಾಗಿದ್ದಾರೆ.

ಹೊಸ ಟೆಸ್ಲಾ ಸಿಎಫ್ಒ ತನೇಜಾ ಅವರ ಬಗೆಗಿನ 7 ಪ್ರಮುಖ ವಿಷಯಗಳು ಇಲ್ಲಿವೆ:

1) ವೈಭವ್ ತನೇಜಾ 2016 ರಲ್ಲಿ ಟೆಸ್ಲಾ ಸ್ವಾಧೀನಪಡಿಸಿಕೊಂಡ ಸೌರ ಶಕ್ತಿ ಕಂಪನಿಯಾದ ಸೋಲಾರ್​ ಸಿಟಿಗೆ 2017 ರಲ್ಲಿ ಟೆಸ್ಲಾಗೆ ಸೇರಿದರು, ಅಲ್ಲಿ ಅವರು ಮೂಲತಃ ಉಪಾಧ್ಯಕ್ಷ ಮತ್ತು ನಂತರ ಕಾರ್ಪೊರೇಟ್ ನಿಯಂತ್ರಕರಾಗಿ ಸೇವೆ ಸಲ್ಲಿಸಿದರು.

2) ಅವರು ಎರಡೂ ಕಂಪನಿಗಳ ಲೆಕ್ಕಪತ್ರ ತಂಡಗಳ ಏಕೀಕರಣವನ್ನು ಯಶಸ್ವಿಯಾಗಿ ಮುನ್ನಡೆಸಿದರು.

3) ತನೇಜಾ ಅವರನ್ನು ಜನವರಿ 2021 ರಲ್ಲಿ ಟೆಸ್ಲಾದ ಭಾರತೀಯ ಅಂಗವಾದ ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್​ನ ನಿರ್ದೇಶಕರಾಗಿ ನೇಮಿಸಲಾಯಿತು.

4) ಅವರು ತಂತ್ರಜ್ಞಾನ, ಹಣಕಾಸು, ಚಿಲ್ಲರೆ ವ್ಯಾಪಾರ ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಕೆಲಸ ಮಾಡಿದ ಎರಡು ದಶಕಗಳಿಗೂ ಹೆಚ್ಚು ಲೆಕ್ಕಪತ್ರಗಳ ಅನುಭವವನ್ನು ಹೊಂದಿದ್ದಾರೆ.

5) ಟೆಸ್ಲಾದ ತ್ರೈಮಾಸಿಕ ಗಳಿಕೆ, ಅಮೆರಿಕ ಮತ್ತು ಅಂತಾರಾಷ್ಟ್ರೀಯ ನಿಯಂತ್ರಕ ವಹಿವಾಟುಗಳಲ್ಲಿ ತನೇಜಾ ಹಿಂದಿನ ಸಿಎಫ್ಒಗಳಾದ ದೀಪಕ್ ಅಹುಜಾ ಮತ್ತು ಜಕಾರಿ ಕಿರ್ಕ್ಹಾರ್ನ್ ಅವರೊಂದಿಗೆ ನಿಕಟವಾಗಿ ಸಹಕರಿಸಿದ್ದಾರೆ.

6) ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವೀಧರರಾದ ವೈಭವ್ ತನೇಜಾ ಆರಂಭದಲ್ಲಿ ಪ್ರೈಸ್ ವಾಟರ್ ಹೌಸ್ ಕೂಪರ್ಸ್​​ನಲ್ಲಿ ಛಾಪು ಮೂಡಿಸಿದರು. 1996 ರಲ್ಲಿ ಅವರು ಪ್ರೈಸ್ ವಾಟರ್ ಹೌಸ್ ಕೂಪರ್ಸ್​​ ಸೇರಿದ್ದರು.

7) ನಂತರ ಅವರು ಭಾರತದಿಂದ ಯುಎಸ್​ಗೆ ಸ್ಥಳಾಂತರಗೊಂಡರು.

ಇದನ್ನೂ ಓದಿ : 2011ರ ನಂತರ ಜಾಗತಿಕವಾಗಿ ಅತ್ಯಧಿಕ ಮಟ್ಟಕ್ಕೇರಿದ ಅಕ್ಕಿ ಬೆಲೆ

ABOUT THE AUTHOR

...view details