ಸ್ಯಾನ್ ಫ್ರಾನ್ಸಿಸ್ಕೋ :ಟೆಲಿಗ್ರಾಮ್ ಮೆಸೆಂಜರ್ ತನ್ನ ಅಪ್ಲಿಕೇಶನ್ನಲ್ಲಿ ಹಂಚಿಕೊಳ್ಳಬಹುದಾದ ಚಾಟ್ ಫೋಲ್ಡರ್‌ಗಳು (shareable chat folders), ಕಸ್ಟಮ್ ವಾಲ್‌ಪೇಪರ್‌ಗಳು ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಅಪ್ಡೇಟ್ ಹೊರತಂದಿದೆ. ಹೊಸ ಅಪ್‌ಡೇಟ್ ಬಳಕೆದಾರರಿಗೆ ಸಂಪೂರ್ಣ ಚಾಟ್ ಫೋಲ್ಡರ್‌ಗಳನ್ನು ಒಂದೇ ಲಿಂಕ್‌ನೊಂದಿಗೆ ಹಂಚಿಕೊಳ್ಳಲು, ವೈಯಕ್ತಿಕ ಚಾಟ್‌ಗಳಿಗಾಗಿ ಕಸ್ಟಮ್ ವಾಲ್‌ಪೇಪರ್‌ಗಳನ್ನು ರಚಿಸಲು, ಯಾವುದೇ ಚಾಟ್‌ನಲ್ಲಿ ವೆಬ್ ಅಪ್ಲಿಕೇಶನ್‌ಗಳನ್ನು ಬಳಸಲು ಮತ್ತು ಇನ್ನೂ ಹೆಚ್ಚಿನ ಫೀಚರ್ಗಳನ್ನು ನೀಡುತ್ತದೆ ಎಂದು ಕಂಪನಿಯ ಹೇಳಿಕೊಂಡಿದೆ.
ಒಂದು ಟ್ಯಾಪ್‌ನೊಂದಿಗೆ ಬಳಕೆದಾರರು ಫೋಲ್ಡರ್ ಅನ್ನು ರಚಿಸಲು ಮತ್ತು ಎಲ್ಲಾ ಚಾಟ್‌ಗಳನ್ನು ಅದಕ್ಕೆ ತಕ್ಷಣವೇ ಸೇರಿಸಲು ಸಾಧ್ಯವಾಗುತ್ತದೆ. ನೀವು ಯಾವುದೇ ಪಬ್ಲಿಕ್ ಚಾಟ್‌ಗಳನ್ನು ಫೋಲ್ಡರ್ಗೆ ಸೇರಿಸಬಹುದು. ಹಾಗೆಯೇ ನೀವು ಆ್ಯಡ್ಮಿನ್ ಅಧಿಕಾರ ಹೊಂದಿರುವ ಚಾಟ್‌ಗಳನ್ನು ಇದಕ್ಕೆ ಸೇರಿಸಬಹುದು ಎಂದು ಟೆಲಿಗ್ರಾಮ್ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದೆ.
ನಿರ್ದಿಷ್ಟ ಚಾಟ್ಗಳಲ್ಲಿ ಈಗ ನಿಮ್ಮ ಮೆಚ್ಚಿನ ಚಿತ್ರಗಳು ಮತ್ತು ಬಣ್ಣಗಳ ಸಂಯೋಜನೆಯನ್ನು ಕಸ್ಟಮ್ ವಾಲ್ ಪೇಪರ್ ಆಗಿ ಮಾಡಿಕೊಳ್ಳಬಹುದು. ಅಂದರೆ ಯಾವುದೇ ಒಂದು ಚಾಟ್‌ನಲ್ಲಿ ಕಸ್ಟಮ್ ವಾಲ್ ಪೇಪರ್ ಸೆಟ್ ಮಾಡಿಕೊಳ್ಳಬಹುದು. ವಾಲ್‌ಪೇಪರ್ ಬದಲಾಯಿಸಲು ಚಾಟ್ ಹೆಡರ್‌ಗೆ ಹೋಗಿ ಮತ್ತು Android ನಲ್ಲಿ 'ವಾಲ್‌ಪೇಪರ್ ಹೊಂದಿಸಿ' (Set Wallpaper) ಕ್ಲಿಕ್ ಮಾಡಿ ಅಥವಾ ಪ್ರೊಫೈಲ್ ತೆರೆಯಿರಿ ಮತ್ತು iOS ನಲ್ಲಿ 'ವಾಲ್‌ಪೇಪರ್ ಬದಲಿಸಿ' ಟ್ಯಾಪ್ ಮಾಡಿ. ಇದಲ್ಲದೆ, ಟೆಲಿಗ್ರಾಮ್ ಕೂಡ 'ಉತ್ತಮ ಬಾಟ್‌ಗಳ'ನ್ನು ತಯಾರಿಸಲು ಕಾರ್ಯೋನ್ಮುಖವಾಗಿದೆ.