ನವದೆಹಲಿ:ಕೋವಿಡ್ 19 ಬಳಿಕ ವೈದ್ಯಕೀಯ ಕಾಲೇಜ್ ಮತ್ತು ಅದೇ ರೀತಿಯ ಇತರ ಸಂಸ್ಥೆಗಳ ಕಲಿಕಾ ವಿಧಾನದಲ್ಲಿ ದೊಡ್ಡ ಬದಲಾವಣೆ ಆಗಿದೆ. ಹೊಸ ತಲೆಮಾರಿನ ತಂತ್ರಜ್ಞಾನಗಳಾದ ಕೃತಕ ಬುದ್ದಿಮತೆ (ಎಐ) ಮತ್ತು ಯಾಂತ್ರಿಕ ಕಲಿಕೆ (ಎಂಐ) ಮುಖಾಂತರ ರೋಗ ನಿಯಂತ್ರಣ ಪತ್ತೆ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳ ಕಾಳಜಿ, ರಿಮೋಟ್ ಪೇಶೆಂಟ್ ಕೇರ್ ಸೇರಿದಂತೆ ಆರೈಕೆಯಲ್ಲಿ ಹೊಸ ಮಟ್ಟ ತಲುಪಲಾಗಿದೆ.
ಸಂಪ್ರದಾಯಿಕ ಕಲಿಕಾ ವಿಧಾನ ಮುಂದಿನ ದಿನಗಳಲ್ಲಿ ಹಾಗೇ ಇರಲಿದೆ. ಹೊಸ ತಲೆಮಾರಿನ ತಂತ್ರಜ್ಞಾನವಾದ ವರ್ಚುಯಲ್ ರಿಯಾಲಿಟಿ, ಎಐ ಮತ್ತು ಎಂಎಲ್ ಕೂಡ ಕಲಿಕೆಯ ಹೊಸ ವಿಧಾನವಾಗಿರಲಿದೆ. ಭವಿಷ್ಯದ ಡಾಕ್ಟರ್ ಮತ್ತು ಫಿಸಿಶಿಯನ್ಗಳ ಕಲಿಕೆಗೆ ಮತ್ತು ತರಬೇತಿಗೆ ಹೊಸ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ನೋಯ್ಡಾ ಅಂತಾರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಆಶುತೋಷ್ ನಿರಂಜನ್ ತಿಳಿಸಿದ್ದಾರೆ.
ಉದಾಹರಣಗೆ ಪಿಶಿಷಿಯನ್ ಅವರಿಗೆ ಡಿಜಿಟಲ್ ಡಾಟಾ ಸಂಗ್ರಹಿಸಿ ಮತ್ತು ರೋಗ ನಿಯಂತ್ರಣ ಪತ್ತೆ ಮತ್ತು ಮುನ್ಸೂಚನೆಗೆ ಎಐ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುತ್ತದೆ. ಕಂಪ್ಯೂಟರ್ ಆಧಾರಿತ ಸೂಚನಾ ವಿಧಾನ ಮೂಲಕ ಮೌಲ್ಯಮಾಪನ ಮತ್ತು ಕಲಿಕೆಗೆ ಇತರೆ ಹೊಸ ಟ್ರೆಂಡ್ಗಳಿವೆ ಎಂಬುದನ್ನು ತಜ್ಞರು ನಂಬುತ್ತಾರೆ. ವರ್ಚುಯಲ್ ಪೇಶೆಂಟ್, ಹ್ಯೂಮನ್ ಪೇಶೆಂಟ್ ಸಿಮ್ಯೂಲೇಷನ್ ಮತ್ತು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ನಿರ್ಣಯಿಸಲು ವರ್ಚುವಲ್ ರಿಯಾಲಿಟಿ ಮುಂತಾದ ಇತರ ಹೊಸ ಪ್ರವೃತ್ತಿಗಳಿವೆ ಎಂದು ತಜ್ಞರು ನಂಬುತ್ತಾರೆ.
ಆರೋಗ್ಯ ಕಾಳಜಿಯಲ್ಲಿ ಹೊಸ ತಿರುವು:ಸಾಂಕ್ರಾಮಿಕತೆ ಭಾರತೀಯ ಆರೋಗ್ಯ ಕಾಳಜಿಯಲ್ಲಿ ಹೊಸ ತಿರುವು ನೀಡಿದೆ ಎಂಬುದನ್ನು ಸಾಬೀತು ಪಡಿಸಿದೆ. ಕಳೆದ ಶತಮಾನದಲ್ಲಿ ಹೆಲ್ತ್ಕೇರ್ನಲ್ಲಿ ಹೊಸ ಮಾಹಿತಿ ಮತ್ತು ಜ್ಞಾನವನ್ಜು ಸಂಪೂರ್ಣವಾಗಿ ಪಸರಿಸಲು 50 ವರ್ಷ ಬೇಕಾಯಿತು. ಆದರೆ, 2020ರಲ್ಲಿ, ಕೇವಲ 73 ದಿನದಲ್ಲಿ ಹೊಸ ಜ್ಞಾನವನ್ನು ಪಸರಿಸಲಾಯಿತು ಎಂದು ಮೆಡ್ಲರ್ನ್ ಸಿಇಒ ದೀಪಕ್ ಶರ್ಮಾ ತಿಳಿಸಿದ್ದಾರೆ.
ಈ ಮೊದಲು ಪ್ರಯೋಗಿಕ ತರಬೇತಿಯಲ್ಲಿ ಸಂಶೋಧನೆ ಆಧಾರಿತ ಜ್ಞಾನದ ಬಳಕೆ ಬಹಳ ಮಂದಗತಿಯಲ್ಲಿತ್ತು. ರೋಗ ನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಅನೇಕ ಪರೀಕ್ಷೆ ಮತ್ತು ಜ್ಞಾನವನ್ನು ವ್ಯಾಪಕವಾಗಿ ಕಾರ್ಯಗತಗೊಳಿಸುವ ಮೊದಲು ಕಠಿಣ ಪರೀಕ್ಷೆ ಮತ್ತು ಅನುಮೋದನೆ ನಡೆಸಬೇಕಿತ್ತು. ಎಲ್ಲವೂ ಸರಿ ಹೋದಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿತ್ತು
ಸಾಂಕ್ರಾಮಿಕತೆ ಬಳಿಕ ಎಲ್ಲವೂ ಬದಲಾಗುತ್ತಿದೆ. ರೋಗಿಗಳಿಗೆ ಯಾವುದೇ ಅಪಾಯವಾಗದಂತೆ ಹೊಸ ಕೌಶಲ್ಯ ಮತ್ತು ತರಬೇತಿಯ ಅಳವಡಿಕೆಗೆ ಹೊಸ ಅವಕಾಶಗಳು ಬರುತ್ತಿವೆ. ಡಿಜಿಟೈಸೆಷನ್ ಮೂಲಕ ಇಂದು ಹೆಲ್ತ್ಕೇರ್ನಲ್ಲಿ ಎಲ್ಲವೂ ಸಾಧ್ಯವಾಗುತ್ತಿದೆ.