ನವದೆಹಲಿ:ಭಾರತದ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್ ಇದೀಗ ನೆಕ್ಸಾನ್ EV ಮ್ಯಾಕ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಲವಾರು ವೈಶಿಷ್ಟ್ಯಗಳೊಂದಿಗೆ ತಯಾರುಗೊಂಡಿರುವ ಈ ಕಾರು ಒಂದೇ ಚಾರ್ಜ್ನಲ್ಲಿ ಬರೋಬ್ಬರಿ 437 ಕಿಲೋ ಮೀಟರ್ ದೂರದವರೆಗೆ ಕ್ರಮಿಸುವ ಸಾಮರ್ಥ್ಯ ಹೊಂದಿದೆ.
ಟಾಟಾ ನೆಕ್ಸಾನ್ EV ಮ್ಯಾಕ್ಸ್ ಆರಂಭಿಕ ಬೆಲೆ 17.74 ಲಕ್ಷ ರೂ.(ದೆಹಲಿ ಶೋ ರೂಂ) ಆಗಿದೆ. ಈ ಕಾರು ದೊಡ್ಡ 40kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 437 ಕಿಲೋ ಮೀಟರ್ ಚಲಿಸುವ ಸಾಮರ್ಥ್ಯ ಹೊಂದಿದೆ. ಕಾರಿನಲ್ಲಿ ನವೀಕರಿಸಿದ ಪವರ್‌ಟ್ರೇನ್ ಇದ್ದು, ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಅಭಿವೃದ್ಧಿಗೊಂಡಿದೆ. ಇದರಲ್ಲಿ ರೋಟರಿ ಗೇರ್ ಬದಲಿಗೆ PRND ಹೊಂದಿದ್ದು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಹಾಗೂ ಆಟೋ ಟಾಗಲ್ ಇಡಲಾಗಿದೆ.