ಕರ್ನಾಟಕ

karnataka

ETV Bharat / science-and-technology

ಭಾರತದ ಆ್ಯಪಲ್​ ಘಟಕಕ್ಕೆ 1 ಬಿಲಿಯನ್​ ಡಾಲರ್​ ಹೂಡಿಕೆಗೆ ಅನುಮೋದನೆ ಪಡೆದ ಫಾಕ್ಸ್​ಕಾನ್​ - ಈಟಿವಿ ಭಾರತ್​ ಕನ್ನಡ

ಬೆಂಗಳೂರಿನ ವಿಮಾನ ನಿಲ್ದಾಣದ ಬಳಿಕ 300 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಘಟಕದಲ್ಲಿ ಫಾಕ್ಸ್​ಕಾನ್​ 1.6 ಬಿಲಿಯನ್​ ಡಾಲರ್​​ ಮೌಲ್ಯ ಬಂಡಾವಳ ಹೂಡಲು ಅನುಮೋದನೆ ಪಡೆದಿದೆ.

Taiwanese contract manufacturer Foxconn has received approval 1 bn dollar
Taiwanese contract manufacturer Foxconn has received approval 1 bn dollar

By ETV Bharat Karnataka Team

Published : Dec 14, 2023, 1:49 PM IST

ನವದೆಹಲಿ:ತೈವಾನ್​ನ ಉತ್ಪಾದಕ ಗುತ್ತಿಗೆದಾರ ಸಂಸ್ಥೆಯಾಗಿರುವ ಫಾಕ್ಸ್​ಕಾನ್​ ಭಾರತದಲ್ಲಿ ಆ್ಯಪಲ್​ ಉತ್ಪನ್ನಗಳ ಉತ್ಪಾದನೆಗೆ 1 ಬಿಲಿಯನ್​ ಡಾಲರ್​​ ಹೂಡಿಕೆ ಮಾಡಲು ಅನುಮೋದನೆ ಪಡೆದುಕೊಂಡಿದೆ. ಚೀನಾದಿಂದ ಹೊರಗೆ ತನ್ನ ಉದ್ಯಮವನ್ನು ಸ್ಥಾಪಿಸುವಲ್ಲಿ ಇದೊಂದು ದೊಡ್ಡ ಮತ್ತು ಗಮನಾರ್ಹ ಹೆಜ್ಜೆಯಾಗಿದೆ. ಅಲ್ಲದೇ ಭಾರತದ ಅತಿ ದೊಡ್ಡ ಬಂಡಾವಳ ಹೂಡಿಕೆ ಸಂಸ್ಥೆ ಈ ಫಾಕ್ಸ್​ಕಾನ್​ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬೆಂಗಳೂರಿನ ವಿಮಾನ ನಿಲ್ದಾಣದ ಬಳಿಕ 300 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಘಟಕದಲ್ಲಿ ಫಾಕ್ಸ್​ಕಾನ್​ 1.6 ಬಿಲಿಯನ್​ ಡಾಲರ್​​ ಮೌಲ್ಯದ ಬಂಡಾವಳ ಹೂಡಲು ಅನುಮೋದನೆ ಪಡೆದಿದೆ ಎಂದು ಬ್ಲೂಬರ್ಗ್​​ ವರದಿ ಮಾಡಿದೆ. ಈ ಘಟಕದಲ್ಲಿ ಆ್ಯಪಲ್ ಬಿಡಿಭಾಗಗಳನ್ನು ತಯಾರಿಸುವುದು ಹಾಗೂ ಆ್ಯಪಲ್​ ಫೋನ್​ಗಳನ್ನು ಅಸೆಂಬಲ್ ಕೂಡ ಮಾಡಲಾಗುವುದು. ಅಲ್ಲದೆ ಆ್ಯಪಲ್​ನ ಹೊಸ ಎಲೆಕ್ಟ್ರಿಕ್ ವೆಹಿಕಲ್ ಗಳ ಕೆಲ ಭಾಗಗಳನ್ನು ಇಲ್ಲಿ ತಯಾರಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ಈ ಘಟಕದಲ್ಲಿ 2.7 ಬಿಲಿಯನ್​ ಡಾಲರ್​​ ಅನ್ನು ತೈವಾನ್​ ಸಂಸ್ಥೆ ನೀಡಿದೆ. ಆ್ಯಪಲ್​ನ ಪ್ರಮುಖ ಉತ್ಪಾದಕ ಭಾಗಿದಾರವಾಗಿರುವ ಫಾಕ್ಸ್​ಕಾನ್​ ಕನಿಷ್ಠ ವರ್ಷದಲ್ಲಿ ಒಂದು ಬಾರಿ ತನ್ನ ಫ್ಯಾಕ್ಟರಿಗಾಗಿ ಬಡ್ಜೆಟ್​ ಅನ್ನು ಹೆಚ್ಚಿಸುತ್ತದೆ. ಇದು 2023ರ ಆರಂಭದಲ್ಲಿ ಕರ್ನಾಟಕದಲ್ಲಿನ ತನ್ನ ಸಂಸ್ಥೆ ನಿರ್ಮಾಣಕ್ಕೆ 700 ಮಿಲಿಯನ್​ ಡಾಲರ್​​ ಹೂಡಿಕೆ ಮಾಡುವ ಗುರಿಯನ್ನು ಹೊಂದಿತು.

ಈ ನಡುವೆ, ಟಾಟಾ ಗ್ರೂಪ್​ ಕೂಡ ಭಾರತದಲ್ಲಿನ ಅತಿ ದೊಡ್ಡ ಐಫೋನ್​ ಜೋಡಣಾ ಘಟಕವನ್ನು ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣ ಮಾಡುವ ಯೋಜನೆ ಹೊಂದಿದೆ. ಮಾಧ್ಯಮಗಳ ವರದಿ ಪ್ರಕಾರ, ಈ ಸೌಲಭ್ಯಗಳಿಂದಾಗಿ ಎರಡು ವರ್ಷದೊಳಗೆ 50 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಪಡೆಯಲಿದ್ದಾರೆ. ಈ ಘಟಕಗಳು 12 ರಿಂದ 18 ತಿಂಗಳೊಳಗೆ ಕಾರ್ಯ ನಿರ್ವಹಿಸುವ ಗುರಿಯನ್ನು ಹೊಂದಿವೆ.

ಫಾಕ್ಸ್​ಕಾನ್​ನ ಈ ನಡೆಯು ಆಗ್ನೇಯ ಏಷ್ಯಾ ದೇಶದಲ್ಲಿ ಆ್ಯಪಲ್​ ತಮ್ಮ ಉತ್ಪಾದನೆ ಕಾರ್ಯಾಚರಣೆಯನ್ನು ವಿಸ್ತರಿಸುವ ಗುರಿಯ ಭಾಗವಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಐಫೋನ್​ ಉತ್ಪಾದನಾ ಘಟಕಕ್ಕೆ ಟಾಟಾ ಕಾರ್ಯಾಚಾರಣೆ ನಡೆಸುತ್ತಿದ್ದು, ಇದನ್ನು ವಿಸ್ಟ್ರನ್​ ಕ್ರಾಪ್​ನಿಂದ ಖರೀದಿಸಲಾಗಿದೆ. ​

ಐಫೋನ್​ನ ಪಾಲುದಾರಿಕಾ ಕಂಪನಿಯಾಗಿರುವ ಫಾಕ್ಸ್​ಕಾನ್​ ಕೋವಿಡ್​ 19 ಬಳಿಕ ತಮ್ಮ ಉತ್ಪಾದನೆ ಘಟಕವನ್ನು ಚೀನಾದ ಬದಲು ಇತರೆ ದೇಶದಲ್ಲಿ ಸ್ಥಾಪಿಸಲು ಮುಂದಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಸ್ಟಾರ್ಟಪ್ ಫಂಡಿಂಗ್: ಜಾಗತಿಕವಾಗಿ 4ನೇ ಸ್ಥಾನಕ್ಕೆ ಕುಸಿದ ಭಾರತ

ABOUT THE AUTHOR

...view details