ಸ್ವಿಟ್ಜರ್ಲೆಂಡ್:ಎಲೆಕ್ಟ್ರಿಕ್ ವಾಹನಗಳನ್ನು ನಿಷೇಧಿಸುವ ಬಗ್ಗೆ ಸ್ವಿಟ್ಜರ್ಲೆಂಡ್ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಮಾಧ್ಯಮವೊಂದರ ವರದಿಯ ಪ್ರಕಾರ, ಬ್ಲ್ಯಾಕ್‌ಔಟ್ ಮತ್ತು ವಿದ್ಯುತ್ ಕಡಿತವನ್ನು ತಡೆಯುವ ಸಲುವಾಗಿ ಅಧಿಕಾರಿಗಳು ಇಂತಹ ಪ್ರಸ್ತಾಪವೊಂದನ್ನು ಇಟ್ಟಿದ್ದಾರೆ ಎನ್ನಲಾಗ್ತಿದೆ. ಒಂದು ವೇಳೆ ಅಲ್ಲಿನ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದರೆ, ಎಲೆಕ್ಟ್ರಿಕ್ ವಾಹನಗಳನ್ನು ನಿಷೇಧಿಸಿದ ಮೊದಲ ದೇಶ ಸ್ವಿಟ್ಜರ್ಲೆಂಡ್ ಆಗಲಿದೆ.
ಸ್ವಿಟ್ಜರ್ಲೆಂಡ್ ತನ್ನ ವಿದ್ಯುತ್ ಅವಶ್ಯಕತೆಗಳನ್ನು ಪೂರೈಸಲು ಜಲವಿದ್ಯುತ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ದೇಶದಲ್ಲಿ ಸುಮಾರು 60 ಪ್ರತಿಶತ ವಿದ್ಯುತ್, ಹೈಡ್ರೋಪವರ್ನಿಂದ ಉತ್ಪತಿಯಾಗುತ್ತಿದೆ. ಇನ್ನೂ ಚಳಿಗಾಲದ ತಿಂಗಳಿನಲ್ಲಿ ಈ ಉತ್ಪಾದನೆ ನಿಧಾನಗೊಳ್ಳುತ್ತದೆ. ಈ ವೇಳೆ, ದೇಶವು ನೆರೆಯ ಫ್ರಾನ್ಸ್ ಮತ್ತು ಜರ್ಮನಿಯಿಂದ ವಿದ್ಯುತ್ ಆಮದು ಮಾಡಿಕೊಳ್ಳುತ್ತದೆ. ಆದರೀಗ ಈ ಎರಡು ದೇಶಗಳು ಉಕ್ರೇನ್ ಯುದ್ಧದಿಂದಾಗಿ ಯುರೋಪಿನ ಉಳಿದ ಭಾಗಗಳಂತೆ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿವೆ.