ಸ್ಯಾನ್ ಫ್ರಾನ್ಸಿಸ್ಕೊ( ಅಮೆರಿಕ): ಉಪಗ್ರಹ ಇಂಟರ್ನೆಟ್ ಸಿಸ್ಟಮ್‌ಗಾಗಿ ಪ್ರಿ - ಆರ್ಡರ್ಸ್ ಬರಲು ಆರಂಭವಾದಾಗಿನಿಂದ ಕಳೆದ ಕೆಲವು ತಿಂಗಳುಗಳಲ್ಲಿ ಸ್ಪೇಸ್‌ಎಕ್ಸ್ 1 ಮಿಲಿಯನ್‌ಗಿಂತಲೂ ಹೆಚ್ಚು ಸ್ಟಾರ್‌ಲಿಂಕ್ ಟರ್ಮಿನಲ್‌ಗಳನ್ನು ತಯಾರಿಸಿದೆ ಎಂದು ಎಲೋನ್ ಮಸ್ಕ್ ಘೋಷಿಸಿದ್ದಾರೆ. ಈ ಬಗ್ಗೆ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ನಲ್ಲಿ- ಸ್ಟಾರ್ ಲಿಂಕ್ ಈಗ 1 ಮಿಲಿಯನ್ ಬಳಕೆದಾರರ ಟರ್ಮಿನಲ್‌ಗಳನ್ನು ತಯಾರಿಸಿದೆ ಎಂದು ಟೆಸ್ಲಾ ಸಿಇಒ ಪೋಸ್ಟ್ ಮಾಡಿದ್ದಾರೆ.
ಏಪ್ರಿಲ್‌ನಲ್ಲಿ ಸ್ಪೇಸ್‌ಎಕ್ಸ್, ಯುಎಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್ (USAID) ಸಹಭಾಗಿತ್ವದಲ್ಲಿ, ಇತ್ತೀಚೆಗೆ ಯುದ್ಧ-ಹಾನಿಗೊಳಗಾದ ಉಕ್ರೇನ್‌ಗೆ 5,000 ಸ್ಟಾರ್‌ಲಿಂಕ್ ಟರ್ಮಿನಲ್‌ಗಳನ್ನು ತಲುಪಿಸಿತ್ತು. ಈ ಟರ್ಮಿನಲ್‌ಗಳು ಸಾರ್ವಜನಿಕ ಅಧಿಕಾರಿಗಳು ಮತ್ತು ಅಗತ್ಯ ನಾಗರಿಕ ಸೇವಾ ಪೂರೈಕೆದಾರರಿಗೆ ಉಕ್ರೇನ್ ಒಳಗಡೆ ಮತ್ತು ಪ್ರಪಂಚದ ಇತರ ಭಾಗಗಳೊಂದಿಗೆ ಸಂವಹನ ಮುಂದುವರಿಸಲು ಅವಕಾಶ ನೀಡುತ್ತವೆ. ಫೆಬ್ರವರಿ 24 ರಂದು ರಷ್ಯಾದ ಆಕ್ರಮಣದ ದಿನದಂದು ಸೈಬರ್ ದಾಳಿ ನಡೆಸಿ ಉಕ್ರೇನ್‌ನ ಉಪಗ್ರಹ ಇಂಟರ್ನೆಟ್ ಸಂಪರ್ಕವನ್ನು ಶಾಶ್ವತವಾಗಿ ಆಫ್‌ಲೈನ್ ಮಾಡಲಾಗಿತ್ತು.