ನವದೆಹಲಿ : ಪರವಾನಿಗೆಗಳ ಮೂಲಕ ಹೊಂದಿರುವ ಮತ್ತು 2024 ರಲ್ಲಿ ಪರವಾನಿಗೆ ಅವಧಿ ಮುಕ್ತಾಯಗೊಳ್ಳಲಿರುವ ರೇಡಿಯೊ ತರಂಗಗಳು (radio waves) ಮತ್ತು ಸ್ಪೆಕ್ಟ್ರಮ್ ಬ್ಯಾಂಡ್‌ಗಳ ಸೆಟ್ ಹರಾಜಿಗಾಗಿ ಟೆಲಿಕಾಂ ಇಲಾಖೆ (DoT) ಈ ವಾರ ವಲಯ ನಿಯಂತ್ರಕ ಟ್ರಾಯ್ ಅನ್ನು ಸಂಪರ್ಕಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರಸಕ್ತ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಟೆಲಿಕಾಂ ಇಲಾಖೆ ಹರಾಜನ್ನು ನಡೆಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
"2024 ರಲ್ಲಿ ನವೀಕರಣಗೊಳ್ಳಲಿರುವ 37 GHz ಬ್ಯಾಂಡ್ ಮತ್ತು ಟೆಲಿಕಾಂ ಪರವಾನಗಿಗಳ ರೇಡಿಯೋ ತರಂಗಗಳ ಹರಾಜಿಗಾಗಿ ಟೆಲಿಕಾಂ ಇಲಾಖೆ ಒಂದೆರಡು ದಿನಗಳಲ್ಲಿ ಟ್ರಾಯ್‌ಗೆ ಉಲ್ಲೇಖವನ್ನು ಕಳುಹಿಸಲಿದೆ ಎಂದು ಮೂಲಗಳು ಹೇಳಿವೆ. ಉಲ್ಲೇಖವು 600 ಮೆಗಾಹರ್ಟ್ಜ್ ಬ್ಯಾಂಡ್‌ನಲ್ಲಿನ ಸ್ಪೆಕ್ಟ್ರಮ್‌ನ ಹರಾಜು ಮತ್ತು 2022 ರಲ್ಲಿ ನಡೆದ ಹರಾಜಿನಲ್ಲಿ ಮಾರಾಟವಾಗದೆ ಉಳಿದಿರುವ ಆವರ್ತನ (frequency)ವನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಸರ್ಕಾರವು 10 ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಗಳನ್ನು ಆಫರ್ ಮಾಡಿತ್ತು. ಆದರೆ 600 MHz, 800 MHz ಮತ್ತು 2300 MHz ಬ್ಯಾಂಡ್‌ಗಳಲ್ಲಿ ಏರ್‌ವೇವ್‌ಗಳಿಗೆ ಯಾವುದೇ ಬಿಡ್‌ಗಳು ಬಂದಿರಲಿಲ್ಲ. ಸುಮಾರು ಮೂರನೇ ಎರಡರಷ್ಟು ಬಿಡ್‌ಗಳು 5G ಬ್ಯಾಂಡ್‌ಗಳಿಗೆ (3300 Mhz ಮತ್ತು 26 GHz) ಮತ್ತು ಕಾಲು ಭಾಗಕ್ಕಿಂತ ಹೆಚ್ಚಿನ ಬೇಡಿಕೆಯು 700 Mhz ಬ್ಯಾಂಡ್‌ನಲ್ಲಿ ಬಂದಿತ್ತು. 700 Mhz ಬ್ಯಾಂಡ್‌ಗೆ ಹಿಂದಿನ ಎರಡು ಹರಾಜುಗಳಲ್ಲಿ ಅಂದರೆ 2016 ಮತ್ತು 2021 ರಲ್ಲಿ ಯಾವುದೇ ಬೇಡಿಕೆ ಬರದೆ ಮಾರಾಟವಾಗದೆ ಉಳಿದಿತ್ತು.