ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಸ್ಪೇಸ್‌ಎಕ್ಸ್‌ನ ಮುಂದಿನ ಪೀಳಿಗೆಯ ಸ್ಟಾರ್‌ಶಿಪ್ ರಾಕೆಟ್ ಮೇ ತಿಂಗಳಲ್ಲಿ ತನ್ನ ಮೊದಲ ಹಾರಾಟ ನಡೆಸುವ ಭರವಸೆ ಇದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಜನರು ಮತ್ತು ಸರಕುಗಳನ್ನು ಚಂದ್ರ, ಮಂಗಳ ಮತ್ತು ಅದರಾಚೆಗೆ ಕೊಂಡೊಯ್ಯಲು ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್ ಅಭಿವೃದ್ಧಿಪಡಿಸುತ್ತಿದೆ. ಈ ಕುರಿತು space.com ತನ್ನ ವರದಿಯಲ್ಲಿ ತಿಳಿಸಿದೆ.
ಮುಂದಿನ ಪೀಳಿಗೆಯ ರಾಕೆಟ್ಗಳಲ್ಲಿ ಸ್ಟಾರ್‌ಶಿಪ್ ಮತ್ತು ಸೂಪರ್ ಹೆವಿ ಎಂಬ ಎರಡು ವಿಧಗಳಿದ್ದು, ಎರಡನ್ನೂ ಸಂಪೂರ್ಣವಾಗಿ ಮತ್ತು ವೇಗವಾಗಿ ಮರುಬಳಕೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಎರಡಕ್ಕೂ ಹೊಸ ರಾಪ್ಟರ್ ಎಂಜಿನ್ ಅಳವಡಿಸಲಾಗುತ್ತದೆ. ಸೂಪರ್ ಹೆವಿಗೆ 33 ಎಂಜಿನ್‌ಗಳನ್ನು ಅಳವಡಿಸಲಾಗುತ್ತಿದ್ದು ಸ್ಟಾರ್‌ಶಿಪ್‌ಗೆ ಆರು ಎಂಜಿನ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ನಾವು ಮುಂದಿನ ತಿಂಗಳೊಳಗೆ 39 ಹಾರಾಟಯೋಗ್ಯ ಎಂಜಿನ್‌ಗಳನ್ನು ನಿರ್ಮಿಸಲಿದ್ದೇವೆ. ನಂತರ ಈ ಎಂಜಿನ್‌ಗಳನ್ನು ಜೋಡಿಸಲು ಮತ್ತೊಂದು ತಿಂಗಳು ಬೇಕಾಗುತ್ತದೆ. ಅದಾದ ನಂತರ ಮೇ ತಿಂಗಳಲ್ಲಿ ಹಾರಾಟವನ್ನು ನಮ್ಮ ರಾಕೆಟ್ಗಳು ನಡೆಸುವ ಭರವಸೆ ಇದೆ ಎಂದು ಅವರು ಮಸ್ಕ್ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದರು.
ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ನಿಂದ (FAA) ಸ್ಟಾರ್‌ಶಿಪ್ ಉಡಾವಣಾ ಕಾರ್ಯಾಚರಣೆಗಳ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ದಕ್ಷಿಣ ಟೆಕ್ಸಾಸ್‌ನಲ್ಲಿರುವ ಸ್ಪೇಸ್‌ಎಕ್ಸ್‌ನ ಸ್ಟಾರ್ಬೇಸ್ನಲ್ಲಿ ಈ ಪರೀಕ್ಷೆಗಳು ನಡೆಯುತ್ತಿವೆ. ಎಫ್ಎಎ ಅಧಿಕಾರಿಗಳ ಪ್ರಕಾರ, ರಾಕೆಟ್ಗಳ ಮೌಲ್ಯಮಾಪನವು ಮಾರ್ಚ್ 28ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ:ವಿಶ್ವದ ಅತ್ಯಂತ ಜನಪ್ರಿಯ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸ್ಆ್ಯಪ್ನಲ್ಲಿ ಈಗ ಇವೆಲ್ಲ ಸೌಲಭ್ಯ!