ಕರ್ನಾಟಕ

karnataka

ETV Bharat / science-and-technology

ಸ್ಪೇಸ್‌ ಎಕ್ಸ್‌ ಸ್ಟಾರ್‌ಶಿಪ್​ ಕಕ್ಷೆಗೆ ತಲುಪಿಸುವ ಯತ್ನ: ಸಫಲತೆ ಸಾಧ್ಯತೆ ಶೇ 50ರಷ್ಟು ಮಾತ್ರ ಎಂದ ಮಸ್ಕ್ - ಸ್ಪೇಸ್‌ಎಕ್ಸ್‌ನ ಬೃಹತ್ ಸ್ಟಾರ್‌ಶಿಪ್

ಸ್ಪೇಸ್‌ಎಕ್ಸ್‌ನ ಬೃಹತ್ ಸ್ಟಾರ್‌ಶಿಪ್ ವಾಹನದ ಮೊದಲ ಕಕ್ಷೆಯ ಮಿಷನ್ ಯಶಸ್ವಿಯಾಗುವ ಸಾಧ್ಯತೆಗಳು ಕೇವಲ 50 ಪ್ರತಿಶತ ಮಾತ್ರ ಎಂಬುದು ಸಂಸ್ಥಾಪಕ ಹಾಗೂ ಸಿಇಒ ಎಲೋನ್ ಮಸ್ಕ್ ಅವರ ಅಭಿಪ್ರಾಯವಾಗಿದೆ.

SpaceX's Starship only 50% likely to pass 1st orbital flight: Musk
SpaceX's Starship only 50% likely to pass 1st orbital flight: Musk

By

Published : Mar 15, 2023, 5:59 PM IST

ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಸ್ಪೇಸ್‌ಎಕ್ಸ್‌ನ ಬೃಹತ್ ಸ್ಟಾರ್‌ಶಿಪ್ ನೌಕೆಯ ಮೊದಲ ಕಕ್ಷೆಯ ಮಿಷನ್ ಯಶಸ್ವಿಯಾಗುವ ಸಾಧ್ಯತೆ ಕೇವಲ ಶೇಕಡಾ 50 ರಷ್ಟು ಮಾತ್ರ ಎಂದು ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಸ್ವತಃ ಹೇಳಿಕೊಂಡಿದ್ದಾರೆ. ಸ್ಟಾರ್‌ಶಿಪ್‌ನ ಪ್ರಥಮ ಕಕ್ಷೆಯ ಪರೀಕ್ಷಾ ಹಾರಾಟವು ಮುಂದಿನ ತಿಂಗಳಲ್ಲಿ ದಕ್ಷಿಣ ಟೆಕ್ಸಾಸ್‌ನಿಂದ ಪ್ರಾರಂಭವಾಗಲಿದೆ ಎಂದು ಮಸ್ಕ್ ಇದೇ ವೇಳೆ ತಿಳಿಸಿದ್ದಾರೆ. ಅದು ಕಕ್ಷೆಗೆ ತಲುಪುತ್ತದೆ ಎಂದು ನಾನು ಹೇಳುತ್ತಿಲ್ಲ, ಆದರೆ ಅದು ರೋಮಾಂಚನ ಮೂಡಿಸಲಿದೆ ಎಂಬುದು ಮಾತ್ರ ಪಕ್ಕಾ ಆಗಿದೆ ಎಂದು ಮಾರ್ಗನ್ ಸ್ಟಾನ್ಲಿ ಕಾನ್ಫರೆನ್ಸ್‌ನಲ್ಲಿ ನಡೆದ ಸಂದರ್ಶನದಲ್ಲಿ ಮಸ್ಕ್ ಹೇಳಿಕೊಂಡಿದ್ದಾರೆ.

ದಕ್ಷಿಣ ಟೆಕ್ಸಾಸ್ ವಸಾಹತು ಪ್ರದೇಶದಲ್ಲಿ ಸ್ಪೇಸ್ ಎಕ್ಸ್ ಹಲವಾರು ಸ್ಟಾರ್ ಶಿಪ್ ನೌಕೆಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಟೆಸ್ಲಾ ಸಿಇಒ ಮಸ್ಕ್ ಉಲ್ಲೇಖಿಸಿದರು. ಈ ಬಾಹ್ಯಾಕಾಶ ನೌಕೆಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಡಾಯಿಸಲಾಗುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ನೌಕೆ ಕಕ್ಷೆಯನ್ನು ತಲುಪುವ ಸಾಧ್ಯತೆಗಳು ಶೇಕಡಾ 80 ರಷ್ಟಿವೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷ ಕಕ್ಷೆಯನ್ನು ತಲುಪಲು 80 ಪ್ರತಿಶತದಷ್ಟು ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಪೂರ್ಣ ಮತ್ತು ತ್ವರಿತ ಮರುಬಳಕೆ ಸಾಧಿಸಲು ಬಹುಶಃ ಒಂದೆರಡು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಮಸ್ಕ್ ಹೇಳಿದ್ದಾರೆ. ದೈತ್ಯ ಆಕಾರದ ಸ್ಟೇನ್‌ಲೆಸ್ ಸ್ಟೀಲ್ ಬಾಹ್ಯಾಕಾಶ ನೌಕೆಯು ಇದುವರೆಗೆ ಬಾಹ್ಯಾಕಾಶಕ್ಕೆ ಹಾರಿದ ನೌಕೆಗಳ ಪೈಕಿ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿರುತ್ತದೆ. ಇದು ನಾಸಾದ ಐಕಾನಿಕ್ ಸ್ಯಾಟರ್ನ್ V ಗಿಂತ ಲಿಫ್ಟ್‌ಆಫ್‌ನಲ್ಲಿ ಸುಮಾರು 2.5 ಪಟ್ಟು ಹೆಚ್ಚು ಒತ್ತಡವನ್ನು ಹೊಂದಿರಲಿದೆ. SpaceX ಚಂದ್ರ ಮತ್ತು ಮಂಗಳ ಗ್ರಹಕ್ಕೆ ಜನರನ್ನು ಮತ್ತು ಸರಕುಗಳನ್ನು ಒಯ್ಯಲು ಮತ್ತು ಇತರ ಬಾಹ್ಯಾಕಾಶ ಹಾರಾಟದ ಕಾರ್ಯಗಳನ್ನು ನಿರ್ವಹಿಸಲು ಸ್ಟಾರ್‌ಶಿಪ್ ನೌಕೆಯನ್ನು ಅಭಿವೃದ್ಧಿಪಡಿಸುತ್ತಿದೆ.

ಸ್ಟಾರ್‌ಶಿಪ್ ಇದು ಸೂಪರ್ ಹೆವಿ ಎಂದು ಕರೆಯಲಾಗುವ ಬೃಹತ್ತಾದ ಮೊದಲ ಹಂತದ ಬೂಸ್ಟರ್ ಮತ್ತು ಸ್ಟಾರ್‌ಶಿಪ್ ಎಂದು ಕರೆಯಲ್ಪಡುವ 165-ಅಡಿ ಎತ್ತರದ (50 ಮೀಟರ್) ಮೇಲಿನ ಹಂತದ ಬಾಹ್ಯಾಕಾಶ ನೌಕೆಯನ್ನು ಒಳಗೊಂಡಿದೆ. ಎರಡೂ ಅಂಶಗಳನ್ನು ಸಂಪೂರ್ಣವಾಗಿ ಮರುಬಳಕೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ, ಮತ್ತು ಎರಡನ್ನೂ ಸ್ಪೇಸ್‌ಎಕ್ಸ್‌ನ ಮುಂದಿನ - ಪೀಳಿಗೆಯ ರಾಪ್ಟರ್ ಎಂಜಿನ್‌ಗಳು -A33 ಸೂಪರ್ ಹೆವಿ ಮತ್ತು ಆರು ಸ್ಟಾರ್‌ಶಿಪ್‌ಗಾಗಿ ಚಾಲಿತಗೊಳಿಸಲಾಗುತ್ತದೆ.

ಮಾನವರಿಗೆ ಮಾಡಲು ಏನು ಕೆಲಸ ಉಳಿದಿದೆ ಎಂದ ಮಸ್ಕ್: ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ ಚಾಟ್‌ಜಿಪಿಟಿಯನ್ನು ತಯಾರಿಸಿದ ಕಂಪನಿಯಾಗಿರುವ ಓಪನ್‌ಎಐ, ಹೆಚ್ಚು ಶಕ್ತಿಶಾಲಿಯಾದ ಚಾಟ್ ಜಿಪಿಟಿ ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಆದರೆ, ಈ ಪ್ರಕಟಣೆಯು ಬಿಲಿಯನೇರ್ ಎಲೋನ್ ಮಸ್ಕ್ ಅವರಿಗೆ ಅಷ್ಟೊಂದು ಇಷ್ಟವಾದಂತೆ ಕಾಣುತ್ತಿಲ್ಲ. ಇದೇ ರೀತಿಯಲ್ಲಿ ಕೃತಕ ಬುದ್ಧಿಮತ್ತೆ ಬೆಳವಣಿಗೆ ಹೊಂದಿದರೆ ಮಾನವ ಉದ್ಯೋಗಗಳ ಮೇಲಿನ ಪರಿಣಾಮದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮನುಷ್ಯರಾದ ನಮಗೆ ಏನು ಮಾಡಲು ಉಳಿದಿದೆ? ನಾವು ನ್ಯೂರಾಲಿಂಕ್‌ನೊಂದಿಗೆ ಮುಂದುವರಿಯುವುದು ಉತ್ತಮ ಎಂದು ತಿಳಿಸಿದ್ದಾರೆ. ನ್ಯೂರಾಲಿಂಕ್ ಇದು 2016 ರಲ್ಲಿ ಮಸ್ಕ್ ಸ್ಥಾಪಿಸಿದ ಕಂಪನಿಯಾಗಿದ್ದು, ಇದು ಮಾನವನ ಮಿದುಳಿಗೆ ಅಳವಡಿಸಬಹುದಾದ ಚಿಪ್‌ಗಳನ್ನು ಅಭಿವೃದ್ಧಿಪಡಿಸುತ್ತದೆ.

ಇದನ್ನೂ ಓದಿ : ಸಣ್ಣ ಜ್ವರ ಬೇಗ ಸೋಂಕು ನಿವಾರಿಸಬಲ್ಲದು, ಇದು ಔಷಧಕ್ಕಿಂತ ಬೆಟರ್: ಹೊಸ ಸಂಶೋಧನೆ

ABOUT THE AUTHOR

...view details